ಸುಳ್ಳು ಸುದ್ಧಿಯ ಬಗ್ಗೆ ಸ್ಪಷ್ಟನೆ ಕೊಟ್ಟ ಹನುಮಂತ

Published on

648 Views

ಜಾನಪದ ಹಾಡುಗಳ ಮೂಲಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ ಸೀಸನ್ 15’ ರಿಯಾಲಿಟಿ ಶೋ ನಲ್ಲಿ ತಮ್ಮ ಮುಗ್ಧತೆಯಿಂದ ಎಲ್ಲರಿಗೂ ಇಷ್ಟವಾಗುತ್ತಿದ್ದ ಹನುಮಂತ ಈ ಶೋ ಗೆ ಬಂದ್ಮೆಲೆ ಅವರ ಅದೃಷ್ಟವೇ ಬದಲಾಯಿತು. ಅದರೆ ಇತ್ತೀಚೆಗೆ ಹನುಮಂತನಿಗೆ ರಿಯಾಲಿಟಿ ಶೋ ನಿಂದ ಅನ್ಯಾಯವಾಗಿದೆ ಎಂಬ ಸುಳ್ಳು ಸುದ್ದಿ‌ ಎಲ್ಲ‌ ಕಡೆ ಹರಿದಾಡುತ್ತಿದೆ.

ಇದಕ್ಕೆ ಸ್ಪಷ್ಟನೆ ಕೊಟ್ಟ ಹನುಮಂತ ‘ನನಗೆ ರಿಯಾಲಿಟಿ ಶೋನಿಂದ ಏನೇನು ಸಿಗಬೇಕೋ ಅದೆಲ್ಲವೋ ಸಿಕ್ಕಿದೆ. ವಾಹಿನಿಯಿಂದ ಯಾವುದೇ ಮೋಸವಾಗಿಲ್ಲ. ಅವರ ಜೊತೆ ಒಳ್ಳೆ ಒಡನಾಟವಿದೆ. ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾನು ಕುಮುಟಾದ ಒಂದು ಬೇಕರಿಯಲ್ಲಿ ನೀರು‌ ಕುಡಿದೆ. ಕೇಕ್, ಐಸ್ ಕ್ರೀಮ್ ತಿಂದು ಬಂದೆ. ನಂತರ ಅಲ್ಲಿ ಎಲ್ಲರೂ ಸೆಲ್ಫಿ ತೆಗೆಸಿಕೊಂಡರು ಅಷ್ಟೇ ನಡೆದಿದು. ಎಲ್ಲ ಟಿಆರ್ ಪಿ ಗಾಗಿ ಮಾಡಲಾಗುತ್ತದೆ. ಸಾಕಷ್ಟು ಮೋಸ ಮಾಡಲಾಗುತ್ತದೆ. ಎಂದು‌ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದೆಲ್ಲಾ ಸುಳ್ಳು‌ ಸುದ್ದಿ. ಸುಳ್ಳು ‌ಸುದ್ದಿ ಹಬ್ಬಿಸಬೇಡಿ ಎಂದು‌ ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ‌ ಧನ್ಯವಾದಗಳು’ ಎಂದಿದ್ದಾರೆ ಹನುಮಂತ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com