ಕೂದಲು ದಾನ‌ ಮಾಡಿದ ಕಾರುಣ್ಯ ರಾಮ್

Published on

543 Views

ಮೈಸೂರಿನಲ್ಲಿ ನೀನಾಸಂ ಸತೀಶ್ ಅಭಿನಯದ ‘ಪೆಟ್ರೋಮಾಕ್ಸ್’ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಕಾರುಣ್ಯ ರಾಮ್ ಒಂದು ಒಳ್ಳೆ ಕೆಲಸಕ್ಕೆ‌ ಕೈ‌ ಹಾಕಿದ್ದಾರೆ. ಅದೇನೆಂದರೆ ಬೆಂಗಳೂರು ಹೇರ್ ಡೊನೇಶನ್ ಸಂಸ್ಥೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ತಮ್ಮ 14 ಇಂಚು ಉದ್ದದ ಕೂದಲನ್ನು ನೀಡಿದ್ದಾರೆ. ಈ‌‌ ಹಿಂದೆ ನಟ ಧ್ರುವ ಸರ್ಜಾ ‘ಪೊಗರು‌’ ಸಿನಿಮಾಕ್ಕೆ ಕೂದಲು‌ ಉದ್ದ ಬಿಟ್ಟಿದ್ದರು. ಸಿನಿಮಾ ಶೂಟಿಂಗ್ ಎಲ್ಲ ಮುಗಿದ ಮೇಲೆ ತಮ್ಮ ಕೂದಲನ್ನು ಕಿಮೋಥೆರಪಿಗೊಳಗಾದ ಕ್ಯಾನ್ಸರ್ ರೋಗಿಗಳಿಗೆ‌ ನೀಡಿದ್ದರು.

ಅದೇ ರೀತಿ ನಟಿ ಕಾರುಣ ರಾಮ್ ‘2021 ರ ಆರಂಭದಲ್ಲಿ ಅವಶ್ಯಕತೆ ಇರುವವರಿಗೆ ಏನಾದರೂ ಮಾಡಬೇಕು ಎಂದುಕೊಂಡಿದ್ದೆ, ಅದರಂತೆ 14 ಇಂಚು ಉದ್ದದ ಕೂದಲನ್ನು ನೀಡಿದ್ದೇನೆ. ಇಷ್ಟು ಉದ್ದ ಕೂದಲು ಬೆಳೆಯಲು 2-3 ವರ್ಷಗಳಾದರೂ ಬೇಕಾಗುತ್ತದೆ. ಇದರಿಂದ ಸಾಕಷ್ಟು ಮಹಿಳೆಯರು ಮುಂದೆ ಬಂದು ತಾವು ಈ‌‌ ಕೆಲಸಕ್ಕೆ‌ ಕೈ ಜೋಡಿಸಬೇಕು ಎಂದಿದ್ದಾರೆ ಕಾರುಣ್ಯ ರಾಮ್. ಇದೊಂದು ಒಳ್ಳೆ ಕೆಲಸ ವಾಗಿದ್ದು ಮಹಿಳೆಯರು‌ ಮನಸ್ಸು ಮಾಡಿದರೆ ನಮ್ಮಿಂದ ಇನ್ನೊಂದು ಜೀವಕ್ಕೆ ಸಹಾಯವಾಗುತ್ತದೆ. ಸುಮ್ಮನೆ ಕೂದಲನ್ನು ಕಟ್ ಮಾಡಿ ವೆಸ್ಟ್ ಮಾಡಿ ಬಿಸಾಕೋ‌ಗಿಂತ ಕಾರುಣ್ಯ ರಾಮ್ ರವರ ತರ ಎಲ್ಲರೂ ಒಳ್ಳೆ ಮನಸ್ಸು ಮಾಡಿ‌ ಮುಂದೆ ಬರಬೇಕಷ್ಟೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com