ಪುರುಷೋತ್ತಮನಾದ ಜಿಮ್ ರವಿ

Published on

391 Views

ಅಂತರಾಷ್ಟ್ರೀಯ ಖ್ಯಾತಿಯ ಬಾಡಿ ಬಿಲ್ಡರ್ ಜಿಮ್ ರವಿ ಮೊದಲ ಬಾರಿಗೆ ನಾಯಕರಾಗಿ ನಿರ್ಮಾಣ ಮಾಡಿರುವ ಚಿತ್ರ ‘ಪುರುಷೋತ್ತಮ’ ಈ ಚಿತ್ರದ ಆಡಿಯೋ ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಮ್ ರವಿ ಆಫೀಶಿಯಲ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿತ್ತು. ಇದು ಬಿಡುಗಡೆಯಾದ ಕೇವಲ ಹತ್ತು ದಿನದಲ್ಲಿ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.


ಜಿಮ್ ರವಿಯವರ ಪತ್ನಿ ಬರೆದಿರುವ ಸಂಸಾರದ ಹಾಡು ಸಾಕಷ್ಟು ವೈರಲ್ ಆಯಿತು. ಈ ಚಿತ್ರವನ್ನು ಎಸ್.ವಿ.ಅಮರನಾಥ್ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಎ.ವಿ.ಹರೀಶ್, ಮೈಸೂರು ಪ್ರಭು, ನಿವೇದಿತಾ, ಕ್ರಿಸ್ಟೋಫರ್, ಕಿರಣ್, ಶರಣ್, ಇಮ್ಯಾನಿಯಲ್,ಮಹದೇವ ಸೇರಿದಂತೆ ಹಲವು‌ ಖ್ಯಾತ ಕಲಾವಿದರು ನಟಿಸಿದ್ದಾರೆ. ಶ್ರೀಧರ್ ಸಂಭ್ರಮ್ ಚಿತ್ರಕ್ಕೆ ಸಂಗೀತ ನೀಡಿದ್ದು, ಆನಂದ್ ಪ್ರಿಯಾ, ಪ್ರಮೋದ್ ಮರವಂತೆ ಹಾಗೂ ನಿರ್ದೇಶಕರು ಸಾಹಿತ್ಯ ರಚಿಸಿದ್ದಾರೆ. ಚಿತ್ರತಂಡ ‘ಪುರುಷೋತ್ತಮ’ ನನ್ನು ದಸರಾ ಸಮಯದಲ್ಲಿ ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರವನ್ನು ಅಮೇರಿಕ, ಲಂಡನ್ ಮತ್ತು ದಕ್ಷಿಣಾ ಅಫ್ರಿಕಾದ ಕನ್ನಡ ಸಂಘಗಳು ಅಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿವೆ ಎಂದು ಜಿಮ್ ರವಿ‌ ಹೇಳಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com