ಥಿಯೇಟರ್ ಓಪನ್‌ಗೆ ಗ್ರೀನ್ ಸಿಗ್ನಲ್
ಕೇಂದ್ರ ಸರಕಾರದ ಅನ್ ಲಾಕ್ 5ರ ಮಾರ್ಗಸೂಚಿ ಬಿಡುಗಡೆಗೊಂಡಿದ್ದು, ಹಲವು ತಿಂಗಳ ನಂತರ ಸಿನಿ ರಸಿಕರಿಗೆ ಖುಷಿ ವಿಚಾರವೊಂದು ಹೊರ ಬಿದ್ದಿದೆ. ಕೊರೋನಾದಿಂದಾಗಿ ಕಳೆದ ಆರು ತಿಂಗಳಿಂದ ಬಂದ್ ಆಗಿದ್ದ ಸಿನಿಮಾ ಮಂದಿರ ತೆರೆಯಲು ಕೇಂದ್ರ ಗೃಹಸಚಿವಾಲಯ ಅನುಮತಿ ನೀಡಿದೆ.ಅನ್ ಲಾಕ್ 5ರ ಪ್ರಕಾರ ಚಿತ್ರಮಂದಿರ ಮತ್ತು ಈಜುಕೊಳ ತೆರೆಯಲು ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಸಿನಿಮಾ ಥಿಯೇಟರ್ ನಲ್ಲಿ 50% ಜನರಿಗೆ ಅಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಅಕ್ಟೋಬರ್ 15 ನಂತರವೇ ತೆರೆಯಲು ಜಿಲ್ಲಾಡಳಿತಗಳಿಗೆ ಅವಕಾಶ ನೀಡಿದ್ದು, ಚಿತ್ರಮಂದಿರದ ಜೊತೆಗೆ ಬಿ2ಬಿ ಬಿಸಿನೆಸ್ ಗೆ ಸಂಬಂಧಿಸಿದ ಪ್ರದರ್ಶನ ನಡೆಸಲು ಅವಕಾಶ ಕಲ್ಪಿಸಿದೆ.
ಚಿತ್ರಮಂದಿರ ತೆರೆಯುತ್ತಿದ್ದಂತೆ ಯಾವೆಲ್ಲ ಸಿನಿಮಾಗಳು ತೆರೆಕಾಣಲಿದೆ ನೋಡಬೇಕಷ್ಟೇ. ಸ್ಟಾರ್ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ತಯಾರಾಗಿದ್ದು, ಚಿತ್ರ ನಿರ್ಮಾಪಕರು ಶೇ 50%ರಷ್ಟು ಜನರಿಗೆ ಅಸನ ಅವಕಾಶ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಬೇಸಾರ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಸಿನಿಮಾಗಳು ಈ ವರ್ಷ ತೆರೆಗೆ ತರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಚಿತ್ರ ನಿರ್ಮಾಪಕರು.