ಗೌರಿಪುರದ ಗಯ್ಯಾಳಿ ರಚನಾ ದಶರಥ್

Published on

904 Views

ನಿರೂಪಕಿಯಾಗಿ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ರಚನಾ ದಶರಥ್ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಉದಯ ಕಾಮಿಡಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಚನಾರವರು ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ‘ಸೂಪರ್ ಜೋಡಿ’ ರಿಯಾಲಿಟಿ ಶೋ ನಲ್ಲಿ ಹುಚ್ಚ ವೆಂಕಟ್ ರವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ನಂತರದ ದಿನಗಳಲ್ಲಿ ಸಿನಿಮಾಗಳಲ್ಲಿ ಬಿಜಿಯಾದ ರಚನಾರವರು ‘ಸಮರ್ಥ’, ‘ನಮ್ ಗಣಿ ಬಿಕಾಂ ಪಾಸ್’, ‘ಜನ್ ಧನ್’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇವರ ನಟನೆಯ ‘ಅಗ್ರಸೇನಾ’, ‘ಅಘೋರ’, ‘ನಿಧಾನವಾಗಿ ಚಲಿಸಿ’, ‘4 ವಾಲ್ಸ್’, ‘AB+(AB positive) ಚಿತ್ರಗಳು ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾಗಳು ರಿಲೀಸ್ ಆದಮೇಲೆ ಮುಂದಿನ ಸಿನಿಮಾದ ಬಗ್ಗೆ ಯೋಚಿಸುತ್ತೇನೆ ಎನ್ನುವ ರಚನಾರವರು ಇತ್ತ ಸಿನಿಮಾದ ಜೊತೆ ಸೀರಿಯಲ್ ನಲ್ಲೂ ಕಾಣಿಸಿಕೊಳ್ಳಲು ಹೊರಟಿದ್ದಾರೆ. ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ‘ಗೌರಿಪುರದ ಗಯ್ಯಾಳಿಗಳು’ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಗೌರಿಪುರದ ಗಯ್ಯಾಳಿಗಳು ಧಾರಾವಾಹಿಯಲ್ಲಿ ನನ್ನದು ಪ್ರಮುಖ ಪಾತ್ರ. ಇದರಲ್ಲಿ 5 ಮಂದಿ ಗಯ್ಯಾಳಿಗಳಿದ್ದಾರೆ. ಅದರಲ್ಲಿ ಒಬ್ಬಳ ಪಾತ್ರ ನಾನು ಮಾಡುತ್ತಿದ್ದೇನೆ. ಸಿನಿಮಾ ನಟಿಯಾಗಿದ್ದವಳು ಫ್ಲಾಪ್ ನಿರ್ಮಾಪಕರನ್ನು ಮದುವೆಯಾದ ನಂತರ ಏನಾಗುತ್ತೆ ಎನ್ನುವುದು ನನ್ನ ಪಾತ್ರದ ಟ್ರ್ಯಾಕ್. ಇದು ಕಾದಂಬರಿ ಆಧಾರಿತ ಧಾರಾವಾಹಿಯಾಗಿದ್ದು, ಇದು ನನ್ನ ರಿಯಲ್ ಸ್ವಭಾವಕ್ಕೆ ತದ್ವಿರುದ್ಧವಾಗಿದೆ.


ನಾನು ನಿಜ ಜೀವನದಲ್ಲಿ ಗಟ್ಟಿ ಮಾತನಾಡುವಳಲ್ಲ. ಇದರಲ್ಲಿ ಗಯ್ಯಾಳಿ ಪಾತ್ರ. ನನಗೆ‌ ಸೀರಿಯಲ್ ನಲ್ಲೂ ನಟಿಸುವ ಆಸೆ ಇತ್ತು ಈ ಕಥೆ ಪಾತ್ರ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ’ ಎನ್ನುತ್ತಾರೆ ರಚನಾ ದಶರಥ್.
ಪ್ರಮೋದ್ ನಿರ್ದೇಶನದ ಹಾರರ್ ‘ಅಘೋರ’ ಸಿನಿಮಾದಲ್ಲಿ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ರಚನಾರವರಿಗೆ ಈ‌ ಪಾತ್ರ ತುಂಬ ಚಾಲೆಂಜಿಂಗ್ ಆಗಿತ್ತು. ಇಂತಹ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಲು ಇಷ್ಟವಾಗುತ್ತದೆ ಎನ್ನುತ್ತಾರೆ ರಚನಾ ದಶರಥ್.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com