ಫೆಬ್ರವರಿಯಲ್ಲಿ “ಗೋಸಿ ಗ್ಯಾಂಗ್” ಬರುತ್ತಿದೆ

Published on

347 Views

ಈ ಹಿಂದೆ ಅಕ್ಷತೆ ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಜು ದೇವಸಂದ್ರ
ಅವರು ನಿರ್ದೇಶನ ಮಾಡಿರುವ ಗೋಸಿ ಗ್ಯಾಂಗ್ ಚಿತ್ರವು ಫೆಬ್ರವರಿಯಲ್ಲಿ
ತೆರೆಗೆ ಬರಲಿದೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್‌ ಲಾಂಛನದಲ್ಲಿ
ಕೆ.ಶಿವಕುಮಾರ್‌ ಅವರು ಕಥೆ ಬರೆದು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ನವರಸನಾಯಕ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಜಗ್ಗೇಶ್ ಅಜಯ್ ಕಾರ್ತಿಕ್ ರೋಹಿತ್ ಅಭಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅಪ್ಪು ವೆಂಕಟೇಶ್‌, ಮೋನಿಕ, ಅನುಷಾ, ಸೋನು ಪಾಟೀಲ್‌, ಎಸ್‌.ಉಮೇಶ್‌, ಕಿಲ್ಲರ್‌ ವೆಂಕಟೇಶ್‌, ಬಿರಾದರ್‌, ಬ್ಯಾಂಕ್‌ ಜನಾರ್ದನ್‌, ಮೈಕೆಲ್‌ ಮಧು, ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ದೊರೆತಿದ್ದು,ಹಾಲೇಶ್‌ ಅವರು ಛಾಯಾಗ್ರಹಣ ಆರವ್‌ ಅವರು ಸಂಗೀತ ಸಂಯೋಜನೆ
ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com