ಹರಿಪ್ರಿಯಾ, ದಿಗಂತ್ ನಟನೆಯ ಚಿತ್ರಕ್ಕೆ ಶುಭಕೋರಿದ ಗೋಲ್ಡನ್ ಸ್ಟಾರ್…

Published on

321 Views

ಹಲವು ದಿನಗಳಿಂದ ಹರಿಪ್ರಿಯಾ ಹಾಗೂ ದಿಗಂತ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಆ ಸಿನಿಮಾ ಮುಹೂರ್ತ ಕೂಡ ಮುಗಿಸಿಕೊಂಡಿದೆ.

ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಶುಭಹಾರೈಸಿದ್ದಾರೆ. ತೆಲುಗಿನ ‘ಎವರು’ ಚಿತ್ರದ ಕನ್ನಡ ರೀಮೇಕ್ ನಲ್ಲಿ‌ ದಿಗಂತ್, ಹರಿಪ್ರಿಯ, ವಸಿಷ್ಠ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ತೆಲುಗಿನಲ್ಲಿ ಅದ್ವಿ ಶೇಷ, ರೆಜಿನಾ ಹಾಗೂ ನವೀನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದ ‘ಎವರು’ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.’ಎವರು’ ಸಿನಿಮಾ ಸ್ಪಾನಿಶ್‌ನ ‘ದಿ ಇನ್ವಿಸಿಬಲ್ ಗೋಸ್ಟ್’ ಎಂಬ ಚಿತ್ರದ ರೀಮೇಕ್ ಅಗಿದೆ.

ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಮಹಿಳೆಯ ಮೇಲಿನ ಅತ್ಯಾಚಾರ, ಅದರ ಸುತ್ತಲಿನ ತನಿಖೆ, ಆ ಮಹಿಳೆ ಹೇಗೆ ರಿವೇಂಜ್ ತೀರಿಸಿಕೊಳ್ಳಲಿದ್ದಾಳೆ ಎಂಬುದೇ ಕಥೆ.

ಕನ್ನಡದಲ್ಲಿ ಈ‌ ಚಿತ್ರವನ್ನು ಅಶೋಕ್ ತೇಜ ನಿರ್ದೇಶಿಸುತ್ತಿದ್ದು, ತೆಲುಗಿನಲ್ಲಿ ಹಿಟ್ ಆಗಿದ್ದ ಈ ಚಿತ್ರಕ್ಕೆ ಕನ್ನಡದಲ್ಲಿ ಯಾವ ಟೈಟಲ್ ಇಡಬಹುದು ಎಂಬುದು ಇನ್ನೂ ರಿವೀಲ್ ಆಗಿಲ್ಲ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com