ಗೋಲ್ಡನ್ ಸ್ಟಾರ್ ಹಾಕಿದ ಕೇಸಿಗೆ ಮೋಕ್ಷ ಸಿಕ್ಕಿದೆ.
ಮೋಕ್ಷ್ ಅಗರಬತ್ತಿ ಕಂಪೆನಿಯ ಸ್ವರ್ಣ ಚಂಪಾ ಅಗರಬತ್ತಿಯ ಮೇಲೆ ನಟ ಗಣೇಶ್ ಚಿತ್ರವನ್ನು ಮುದ್ರಿಸಿ, ಪ್ರಚಾರಕ್ಕೆ ಬಳಸಲಾಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ‘ ನನ್ನ ಅನುಮತಿ ಇಲ್ಲದೆ , ನನ್ನ ಫೋಟೋ ವನ್ನು ಬಳಸಿಕೊಂಡಿದ್ದಾರೆಂದು ಸಂಸ್ಥೆಯ ವಿರುದ್ಧ 2008ರಲ್ಲಿ ಕೇಸು ದಾಖಲಿಸಿ, 75 ಲಕ್ಷ ರೂ. ಪರಿಹಾರ ನೀಡುವಂತೆ ಕೋರಿದ್ದರು. 2006 ರಲ್ಲಿ ‘ ಚೆಲುವಿನ ಚಿತ್ತಾರ’ ಚಿತ್ರದ ಜತೆ ಅಗರ್ ಬತ್ತಿ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಎಸ್. ನಾರಾಯಣ್ ರವರು ಅನುಮತಿ ನೀಡಿದ್ದರು ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಅವರು ಒಪ್ಪಂದದ ಪ್ರಕಾರ ‘ಚೆಲುವಿನ ಚಿತ್ತಾರ’ ಚಿತ್ರದ ಸ್ಟಿಲ್ಸ್ ಗಳನ್ನು ಬಳಸಿಕೊಂಡಿಲ್ಲ. ಎಂದು ಗಣೇಶ್ ದೂರಿನಲ್ಲಿ ಹೇಳಿದ್ದಾರೆ. ಸ್ವರ್ಣ ಚಂಪಾ ಅಗರ್ ಬತ್ತಿ ಸಂಸ್ಥೆಯಿಂದ ಗಣೇಶ್ ಅವರ ಚಿತ್ರ ದುರ್ಬಳಕೆಯ ಆಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಗಣೇಶ್ ಅವರಿಗೆ 75 ಲಕ್ಷ ರೂ. ಪರಿಹಾರ ನೀಡುವಂತೆ ಇಂದು ಸಿಟಿ ಸಿವಿಲ್ ಕೋರ್ಟ್ ಆದೇಶ ಸೂಚಿಸಿದೆ.