ಯುವ ನಿರ್ದೇಶಕರಿಗೆ ಭಟ್ಟರಿಂದ ಸುವರ್ಣಾವಕಾಶ
ನಿರ್ದೇಶಕರಾಗಬೇಕೆಂಬ ಕನಸು ನಿಮಗಿದೆಯೇ?
ಹಾಗಾದರೆ ಯೋಗರಾಜ್ ಸಿನಿಮಾಸ್ ಪಂಚತಂತ್ರ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ.
ನಿರ್ದೇಶಕರಾಗಬೇಕೆಂಬ ನಿಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ.
ನೋಂದಾಯಿಸಿಕೊಳ್ಳಲು ಈ ಲಿಂಕ್ https://goo.gl/forms/pgmHoLCntCTj5wu43
ಕ್ಲಿಕ್ ಮಾಡಿ ಅಥವಾ ನಿಮ್ಮ ಹೆಸರನ್ನು 9108534920 ಗೆ WhatsApp ಮಾಡಿ.
ನೋಂದಣಿ ಕ್ರಮಗಳು:
1. ಯೋಗರಾಜ್ ಸಿನಿಮಾಸ್ ಪಂಚತಂತ್ರ ಕಿರುಚಿತ್ರ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಫೆಬ್ರವರಿ 3, 2019, ಸಂಜೆ 6 ಗಂಟೆ.
2. ತಂಡದಲ್ಲಿರಬೇಕಾದ ಸದಸ್ಯರ ಸಂಖ್ಯೆಗೆ ಯಾವುದೇ ಪರಿಮಿತಿ ಇರುವುದಿಲ್ಲ.
3. ನೋಂದಾಯಿಸಿಕೊಳ್ಳಲು ಈ ಲಿಂಕ್ https://goo.gl/forms/pgmHoLCntCTj5wu43
ಕ್ಲಿಕ್ ಮಾಡಿ ಅಥವಾ ನಿಮ್ಮ ಹೆಸರನ್ನು 9108534920 ಗೆ WhatsApp ಮಾಡಿ.
4. ನೋಂದಾಯಿಸಿಕೊಳ್ಳಲು ಬೇರೆ ಯಾವುದೇ ಮಾರ್ಗ ಇರುವುದಿಲ್ಲ.
ಕಿರುಚಿತ್ರ ಸ್ಪರ್ಧೆಯ ನಿಯಮಗಳು:
1. ಫೆಬ್ರವರಿ 3, 2019 ರಂದು ರಾತ್ರಿ 10 ಗಂಟೆಗೆ ಕಿರುಚಿತ್ರದ ವಿಷಯವನ್ನು (theme) ಘೋಷಿಸಲಾಗುವುದು.
2. ಫೆಬ್ರವರಿ 10, 2019 ರಂದು ರಾತ್ರಿ 10 ಗಂಟೆಗೆ ಸ್ಪರ್ಧೆ ಅಂತ್ಯಗೊಳ್ಳುವುದು.
3. ಫೆಬ್ರವರಿ 9, 2019 ರಂದು ರಾತ್ರಿ 10 ಗಂಟೆಗೆ ನಿಮ್ಮ ಕಿರುಚಿತ್ರವನ್ನು ನಮಗೆ ತಲುಪಿಸುವ ವಿಧಾನವನ್ನು ಯೋಗರಾಜ್ ಸಿನಿಮಾಸ್ Facebook Page ಮತ್ತು WhatsApp ಮೂಲಕ ತಿಳಿಸಲಾಗುವುದು.
4. ಕಿರುಚಿತ್ರಗಳು ಕನಿಷ್ಠ 1920 X 1080 (Full HD) ಗುಣಮಟ್ಟದಲ್ಲಿರಬೇಕು.
5. ಕಿರುಚಿತ್ರಗಳು ಕನ್ನಡ ಭಾಷೆಯಲ್ಲೇ ಇರಬೇಕು.
6. ಕಿರುಚಿತ್ರಗಳನ್ನು ಮೇಲೆ ನಮೂದಿಸಿರುವ ನಿಗದಿತ ಅವಧಿಯಲ್ಲೇ ಚಿತ್ರೀಕರಿಸಿರಬೇಕು, ಮತ್ತು ಅವಶ್ಯಕತೆ ಮೂಡಿಬಂದಲ್ಲಿ ಪುರಾವೆಗಳನ್ನು ಒದಗಿಸಬೇಕು.
ವಿಜೇತರನ್ನು ಆಯ್ಕೆಮಾಡುವ ಕ್ರಮ
1. ಫಲಿತಾಂಶದ ದಿನಾಂಕವನ್ನು ಫೆಬ್ರವರಿ 10, 2019 ರಂದು ಘೋಷಿಸಲಾಗುವುದು.
2. ವಿಜೇತರನ್ನು ಯೋಗರಾಜ್ ಭಟ್ ರವರು ಆರಿಸುವರು.
3. ಸ್ಪರ್ಧೆಯಲ್ಲಿ ಗೆದ್ದ ಕಿರುಚಿತ್ರಗಳನ್ನು ಸದರಿ ಚಿತ್ರತಂಡದೊಂದಿಗೆ ಯೋಗರಾಜ್ ಭಟ್ ರವರು ವೀಕ್ಷಿಸಿ, ಚಿತ್ರದ ಕುರಿತು ಚರ್ಚಿಸುವರು.
4. ಗೆದ್ದ ಕಿರುಚಿತ್ರದ ಎಲ್ಲಾ ಸದಸ್ಯರಿಗೂ ಯೋಗರಾಜ್ ಸಿನಿಮಾಸ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.