ಹೊಸಬರೇ ಸೇರಿ ಮಾಡಿರುವ ‘ಗಿಣಿ ಹೇಳಿದ ಕಥೆ’
ಹೊಸಬರೇ ಸೇರಿ ಮಾಡಿರುವ ‘ಗಿಣಿ ಹೇಳಿದ ಕಥೆ’ ಜನವರಿ 18, 2019 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲಿದೆ.
ಕರ್ನಾಟಕ: ಬುದ್ಧ ಚಿತ್ರಾಲಯ ಲಾಂಛನದಲ್ಲಿ ವಿ. ದೇವರಾಜು ನಿರ್ಮಿಸಿರುವ ಚಿತ್ರವಿದು. ನಾಗರಾಜ ಉಪ್ಪುಂದ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಹಿತನ್ ಹಾಸನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ದೇವ್ ಅವರದು. ಚಿತ್ರದ ನಾಯಕನೂ ದೇವ್ ಅವರೇ. ಗೀತಾಂಜಲಿ, ಮಾಲತೇಶ್, ನೀತು ರಾಯ್,…. ಮುಖ್ಯಭೂಮಿಕೆಯಲ್ಲಿ ಇದ್ದಾರೆ. ರಂಗಭೂಮಿಯೊಂದಿಗೆ ದಶಕಗಳ ಕಾಲ ನಂಟು ಹೊಂದಿ ಹಲವಾರು ನಾಟಕಗಳಲ್ಲಿ ನಟಿಸಿರುವವರು ದೇವ್. ರಂಗಭೂಮಿಯ ಅನುಭವ ಅವರ ಅಸಲೀ ಶಕ್ತಿ. ಇದಲ್ಲದೇ ಕಿರುತೆರೆಯ ಕೆಲ ಧಾರಾವಾಹಿಗಳಿಗೆ ಸಂಭಾಷಣೆ ಕೂಡಾ ಅವರು ಬರೆದಿದ್ದಾರೆ. ಅವರೇನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಬರುವುದಕ್ಕೂ ಮುಂಚೆ ಅದರ ಬಗ್ಗೆ ಪರಾಮಾರ್ಶೆ ನಡೆಸಿದ್ದಾರೆ. ಅಷ್ಟದಿಕ್ಕುಗಳಿಂದಲೂ ನಿಗಿ ನಿಗಿಸುವ ಗಾಢ ನಿರೀಕ್ಷೆಯ ಒಡ್ಡೋಲಗದಲ್ಲಿಯೇ ‘ಗಿಣಿ ಹೇಳಿದ ಕಥೆ’ ತೆರೆಗೆ ಬರುತ್ತಿದೆ. ಶಿಷ್ಟವಾದ ಶೀರ್ಷಿಕೆ ಮತ್ತು ಆ ಕಾರಣದಿಂದಲೇ ಹೊರ ಹೊಮ್ಮುತ್ತಿರುವ ಶೇಷವಾದ ಕಥೆಯ ಸುಳಿವು… ಗಿಣಿ ಹೇಳಿದ ಕಥೆ ಕೇಳಲು ಪ್ರೇಕ್ಷಕರಲ್ಲಿ ಕಾತರ ಮೂಡಿಕೊಳ್ಳಲು ಕಾರಣ ಸಾಕಷ್ಟಿದೆ. ಆದರೆ ಒಟ್ಟಾರೆ ಚಿತ್ರದ ಅಸಲೀ ಅಚ್ಚರಿ ಅಡಗಿರುವುದು ಕಥೆಯಲ್ಲಿ. ವರ್ಷಾಂತರಗಳ ಕಾಲದಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು ದೇವ್. ತಮ್ಮ ಹೆಸರಿನ ಮುಂದೆ ರಂಗಭೂಮಿ ಎಂಬ ‘ಶೇಷಣವನ್ನು ಸೇರಿಸಿಕೊಳ್ಳುವಷ್ಟು ಥೇಟರ್ ಬಗ್ಗೆ ಪ್ರೀತಿ ಹೊಂದಿರೋ ದೇವ್ ಪಾಲಿಗಿದು ಮೊದಲ ಚಿತ್ರ. ಆದರೆ ಮೊದಲ ಪ್ರಯತ್ನದಲ್ಲಿಯೇ ಒಂದು ಗಟ್ಟಿ ಕಥೆಯೊಂದಿಗೆ, ನಿರ್ಮಾಪಕರಾಗಿ, ನಾಯಕರಾಗಿ, ಕಥೆ ಚಿತ್ರಕಥೆ, ಸಂಭಾಷಣೆಕಾರರಾಗಿ ಅವರು ಗಮನ ಸೆಳೆದಿದ್ದಾರೆ. ನಾಗರಾಜು ಉಪ್ಪುಂದ ಈ ಚಿತ್ರಕ್ಕೆ ನಿರ್ದೇಶನ ಹಾಗೂ ಛಾಯಾಗ್ರಹಣ ಮಾಡಿದ್ದಾರೆ.
ಕಥೆ ಹೇಳಲು ಬಂದ ಗಿಣಿ ಹಾಡುಗಳ ಮೂಲಕ ಮಾಧುರ್ಯದಿಂದಲೇ ಹಾರಾಡುತ್ತಾ ಪ್ರೇಕ್ಷಕರ ಮನಸಿಗೆ ಬಂದು ಸೇರಿಕೊಂಡಿದೆ. ಗಿಣಿ ಹೇಳಿದ ಕಥೆಯ ಹಾಡುಗಳು ಬಿಡುಗಡೆಯಾಗಿ ದಿನ ಕಳೆಯುವುದರೊಳಗೆ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದು ಸಾಧ್ಯವಾಗಿದ್ದು ಹಿತನ್ ಹಾಸನ್ ಅವರ ಸಂಗೀತದಿಂದ. ಇದು ಅವರ ಮೂರನೇ ಚಿತ್ರ. ಈ ಚಿತ್ರದ ಭಿನ್ನವಾದ ಕಥೆಗೆ ಪೂರಕವಾದ ಸಂಗೀತ ಸಂಯೋಜನೆ ಮಾಡುವುದೇ ಸವಾಲಾಗಿತ್ತು. ಅದನ್ನು ಹಿತನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಈ ಮೂಲಕ ಹಾಡುಗಳೂ ಕೂಡಾ ಗಿಣಿ ಹೇಳಿದ ಕಥೆಯ ಪ್ರಧಾನ ಆಕರ್ಷಣೆಯಾಗುವಂತೆ ನೋಡಿಕೊಂಡಿದ್ದಾರೆ.
ಗಿಣಿ ಹೇಳಿದ ಕಥೆ ಚಿತ್ರ ಒಂದು ಉತ್ಸಾಹಿ ಯುವ ಪಡೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದೆ. ಹೊಸಾ ಆವೇಗ ಹೊಂದಿರೋ ಹುರುಪಿನ ತಂಡದಿಂದಲೇ ಈ ಚಿತ್ರ ರೂಪುಗೊಂಡಿದೆ. ಈಗಾಲೇ ತನ್ನ ಅಚ್ಚ ಕನ್ನಡದ ಟೈಟಲ್ ಸೇರಿದಂತೆ ನಾನಾ ದಿಕ್ಕಿನಿಂದ ಸುದ್ದಿಯಲ್ಲಿರುವ ಈ ಚಿತ್ರ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ ತಿಂಗಳ ಜನವರಿ 18, 2019 ರಂದು ಗಿಣಿ ಹೇಳಿದ ಕಥೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈವತ್ತಿಗೆ ಗಿಣಿ ಹೇಳಿದ ಕಥೆ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಬಹು ನಿರೀಕ್ಷಿತ ಚಿತ್ರವಾಗಿಯೂ ಬಿಂಬಿತವಾಗಿದೆ. ಅದೆಲ್ಲದಕ್ಕೆ ದೇವ್ ಅವರ ಅಪಾರ ಅನುಭವ, ಶ್ರದ್ಧೆಯೇ ಕಾರಣ. ಸಾಮಾನ್ಯವಾಗಿನ ಯಾವುದಾದರೂ ತಪ್ಪಿದ್ದರೆ ಅದನ್ನು ಗಂಭೀರವಾಗಿ ಹೇಳಿದಾಗ ಆಗೋ ಪರಿಣಾಮಕ್ಕಿಂತಾ, ತಮಾಶೆಯಾಗಿ ಹೇಳಿದರೆ ಆಗಬಹುದಾದ ಪರಿಣಾಮವೇ ಹೆಚ್ಚು ಎಫೆಕ್ಟಿವ್. ಈ ಚಿತ್ರದ ಕಥೆಯಲ್ಲಿ ಬರೋ ಗಂಭೀರ ಅಂಶಗಳನ್ನೂ ಕೂಡಾ ತಮಾಷೆಯಾಗಿಯೇ ಹೇಳೋ ಪ್ರಯೋಗ ನಡೆದಿದೆಯಂತೆ, ಈ ಚಿತ್ರ ಮಾಮೂಲಿ ಶೈಲಿಯದ್ದಲ್ಲ ಮತ್ತು ಪ್ರೇಕ್ಷಕರಿಗೆ ಹೊಸಾ ಅನುಭವ ನೀಡಲಿದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಯಾಕೆಂದರೆ ದೇವ್ ಈ ಚಿತ್ರಕ್ಕೆ ಸಿದ್ಧಗೊಂಡಿರೋ ಶ್ರದ್ಧೆಯೇ ಅಂಥಾದ್ದಿದೆ. ಈ ಚಿತ್ರಕ್ಕಾಗಿ ಕಥೆ ಬರೆದು ಸ್ಕ್ರಿಫ್ಟ್ ರೆಡಿ ಮಾಡಲು ದೇವ್ ತೆಗೆದುಕೊಂಡಿದ್ದು ಬರೋಬ್ಬರಿ ನಾಲಕ್ಕು ವರ್ಷ. ಅಷ್ಟರ ಮಟ್ಟಿಗೆ ಆರಂಭಿಕವಾಗಿಯೇ ಕಾಳಜಿ, ಎಚ್ಚರ ವಹಿಸಿ ಈ ಚಿತ್ರವನ್ನ ರೂಪಿಸಲಾಗಿದೆ.
ರಂಗಭೂಮಿಯಲ್ಲಿ ಸಕ್ರಿಯರಾಗಿದ್ದುಕೊಂಡೇ ಚಿತ್ರರಂಗದ ಮೇಲೆ ಆಸಕ್ತಿ ಹೊಂದಿದ್ದವರು ದೇವ್. ಇದಕ್ಕೆಂದು ಒಂದು ಕಥೆಗೆ ಕಾವು ಕೊಡಲಾರಂಭಿಸಿದ್ದ ಅವರು, ಸ್ಕ್ರಿಫ್ಟ್ ಬರೆದು ಅದಕ್ಕೊಂದು ಸಿನಿಮಾ ರೂಪ ಕೊಡಲು ತೊಗೆದುಕೊಂಡಿದ್ದ ಭರ್ತಿ ನಾಲಕ್ಕು ವರ್ಷ. ಅಷ್ಟೂ ವರ್ಷಗಳ ಕಾಲ ತಿದ್ದಿ ತೀಡಿರೋ ಈ ಕಥೆಗೀಗ ಜೀವ ಬಂದಿದೆ. ಪ್ರೇಕ್ಷಕರನ್ನು ಹೊಸಾ ಜಗತ್ತಿಗೆ ಕೊಂಡೊಯ್ಯಬೇಕು, ಭರ್ಜಿ ಮನೊರಂಜನೆಯ ಜೊತೆಗೇ ಬೇರೇನೋ ಹೇಳ ಬೇಕೆಂಬ ತುಡಿತ ಈ ಸಿನಿಮಾ ಬಂದಿದೆ.