ಸದ್ದು ಮಾಡುತ್ತಿದೆ ಬಳೆಪೇಟೆ ಟೀಸರ್

Published on

566 Views

ಲಾಕ್ ಡೌನ್ ನಂತರ ಕನ್ನಡ ಚಿತ್ರರಂಗದ ಕೆಲಸಗಳು ಮೆಟ್ರೋ ವೇಗದಲ್ಲಿ ಆಗುತ್ತಿದ್ದು, ಮತ್ತೊಮ್ಮೆ ಸುವರ್ಣ ಯುಗ ವಿಜೃಂಭಿಸುವ ಕಾಲ ಬಂದಿದೆ. ಈ ಸಮಯದಲ್ಲಿ ಹೊಸತನದ ಸಿನೆಮಾದ ಟೀಸರ್ ಒಂದು ಸಕ್ಕತ್ ಸದ್ದು ಮಾಡ್ತಿದೆ. ರಿಷಿಕೆಶ್ ಆಕ್ಷನ್ ಕಟ್ ಹೇಳಿರುವ ಬಳೆಪೇಟೆ ಸಿನಿಮಾದ ಟೀಸರ್ ಯ್ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಚಿತ್ರರಂಗದಲ್ಲಿ ಛಾಯಾಗ್ರಾಹಕನಾಗಿ ಮತ್ತು ಸಂಕಲನಕಾರನಾಗಿ ಕೆಲ್ಸ ಮಾಡಿ ಒಂದಿಷ್ಟು ಹೆಸ್ರು ಮಾಡಿದ್ದ ರಿಷಿಕೇಶ್ ಈ ಸಿನೆಮಾ ನಿರ್ದೇಶನ ಮಾಡಿದ್ದು, ಪ್ರಮೋದ್ ಬೋಪಣ್ಣ , ಅನಿತಾ ಭಟ್, ಅಭಿಷೇಕ್ ಮಾತಾಡ್ ಉಮೇಶ್ ಬಣಕಾರ್ ಮತ್ತು ಮಯೂರ್ ಪಟೇಲ್ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಬಳೆಪೇಟೆ ಯಲ್ಲಿ ನಡೆಯೋ ಹೊಸ ತನದ ಮೇಕಿಂಗ್ ನಲ್ಲಿ ತಂಡ ಸಾಕಷ್ಟು ಕೆಲ್ಸ ಮಾಡಿದ್ದಾರೆ.

ಬಳೆಪೇಟೆ ಸಿನಿಮಾಕ್ಕೆ ರಿಷಿಕೇಶ್ ನಿರ್ದೇಶನದ ಜೊತೆಗೆ ಕ್ಯಾಮರಾ ವರ್ಕ್ ಕೂಡ ಮಾಡ್ತಿದ್ದಾರೆ. ಆರ್ ವಿ ಎಸ್ ಪ್ರೊಡಕ್ಷನ್ ನಟಿ ರೆಡಿಯಾಗ್ತಿರೋ ಸಿನಿಮಾಕ್ಕೆ ಶಿವರಾಮ್ ಬಂಡವಾಳ ಹೂಡಿದ್ರೆ, ಉತ್ತಮ್ ಹಾಗೂ ಲೋಹಿತ್ ಸಿನಿಮಾಕ್ಕೆ ಮ್ಯೂಸಿಕ್ ನೀಡಿದ್ದಾರೆ. ಸದ್ಯ ಬಹುತೇಕ್ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾ ಬೆಳ್ಳಿತೆರೆಗೆ ಕಾಲಿಡಲು ರೆಡಿಯಾಗ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com