ಜಂಟಲ್ಮ್ಯಾನ್ ಸಿನಿಮಾ ನೋಡಿದ ತಕ್ಷಣ ನನಗೆ ಅನಿಸಿದ್ದು!!
ಒಂದು ಸಿನಿಮಾ ಬಗ್ಗೆ ಮೊದಲನೇ ಬಾರಿ ನಾನು ಬರೆಯುತ್ತಿರುವ ರಿವ್ಯೂ….
ಜಂಟಲ್ಮ್ಯಾನ್ ಸಿನಿಮಾ ನೋಡಿದ ತಕ್ಷಣ ನನಗೆ ಅನಿಸಿದ್ದು ಕನ್ನಡಕ್ಕೆ ಒಬ್ಬ ಜಂಟಲ್ ಮ್ಯಾನ್ ಡೈರೆಕ್ಟರ್ ಸಿಕ್ಕಿದ್ದಾನೆ ಅಂತ… ಏಕೆಂದರೆ ಸಿನಿಮಾ ನ ಮೊದಲಿನಿಂದ ಕೊನೆಯವರೆಗೂ ಎಲ್ಲೂ ಹಳಿ ತಪ್ಪದ ರೀತಿಯಲ್ಲಿ ಮಾಡಿರುವ ಸ್ಕ್ರೀನ್ ಪ್ಲೇ ಒಂದಾದರೆ ಮತ್ತೊಂದು ಕಥೆ ಅಲ್ಲಿ ಬಾರೋ ಎಲಿಮೆಂಟ್ಸ್ ,ಫ್ಯಾಮಿಲಿ,ಎಮೋಷನ್, ಸಸ್ಪೆನ್ಸ್ ,ಥ್ರಿಲ್ಲರ್, ಇಷ್ಟನ್ನು ಇಟ್ಟುಕೊಂಡು ಅದ್ಭುತವಾಗಿ ಸ್ಕ್ರೀನ್ ಪ್ಲೇ ಮಾಡಿ ನೋಡುಗನ ಕುತೂಹಲವನ್ನು ಮೊದಲಿಂದ ಕೊನೆಯವರೆಗೂ ಒಂದು ಕಡೆ ಬಿಡದೆ ಹಿಡಿದಿಟ್ಟಿದ್ದಾರೆ..
ಇದಕ್ಕೆ ಪೂರಕವಾಗಿ ಸಿನಿಮಾಟೋಗ್ರಫಿ ಅದರ ಬಗ್ಗೆ ಹೇಳಬೇಕೆಂದರೆ ಒಂದು ಶಾಟ್ಸ್ ಆಗಲಿ, ಫ್ರೇಮ್ ಆಗಲಿ ಎಲ್ಲೂ ವೆಸ್ಟ್ ಅನ್ಸಲ್ಲ… ನೀವು ಬೇರೆ ತರದ್ದೆ ಲೈಟಿಂಗ್ ಪ್ಯಾಟರ್ನ್ ಇದರಲ್ಲಿ ನೋಡಬಹುದು…
ಇನ್ನು ಮ್ಯೂಸಿಕ್ ,ಅಜನೀಶ್ ಸರ್ ವರ್ಕ್ ಅಂತೂ ಸೂಪರ್.. ಪ್ರತಿ ಶಾಟ್ಸ್ ಚೆನ್ನಾಗಿದ್ದರೆ ಪ್ರತಿ ಫ್ರೇಮ್ ಚೆನ್ನಾಗಿದ್ದರೆ ಸಿನೆಮಾ ನೋಡಕ್ಕಾಗಲ್ಲ ಅದರ ಹಿಂದೆ ಬರೋ ಬ್ಯಾಗ್ರೌಂಡ್ ಸ್ಕೋರ್ ಕೂಡ ಸಪೋರ್ಟಿವ್ ಆಗಿದ್ದರೆ ಮಾತ್ರ ಸಿನಿಮಾ ಚೆನ್ನಾಗಿದೆ ಅನ್ಸುತ್ತೆ ಆ ರೀತಿ ಮ್ಯೂಸಿಕ್ ಇದರಲ್ಲಿ ಮಾಡಿದರೆ…
ಪ್ರತಿ ಕ್ಯಾರೆಕ್ಟರ್ ಗೂ ಕೂಡ ಅದ್ಭುತವಾಗಿ ಥಿಮ್ ಮ್ಯೂಸಿಕ್ ಮಾಡಿದರೆ… ಬೇರೆ ಯಾವ ಭಾಷೆ ಸಿನಿಮಗೂ ಕೂಡ ಏನು ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಬ್ಯಾಗ್ರೌಂಡ್ಸ್ ಸ್ಕೋರ್ ನ ಇದರಲ್ಲಿ ನೋಡಬಹುದು…
ಇನ್ನು ಪ್ರಜ್ವಲ್ ಸರ್ರು ನಿಶ್ವಿಕ ಸಂಚಾರಿ ವಿಜಯ್ ಬೇಬಿ ಆರಾಧ್ಯ ಮಾಫಿಯಾ ಕಿಂಗ್ ಆಗಿ ಕಾಣಿಸಿಕೊಂಡಿರುವ ಅರ್ಜುನ್ ಸೈಕೋ ಕ್ಯಾರೆಕ್ಟರ್ ಮಾಡಿರುವ ಪ್ರಶಾಂತ್ ಸಿದ್ದಿ ಎಲ್ಲರೂ ಇಲ್ಲಿ ನಟನೆ ಮಾಡಿಲ್ಲ ಜೀವಿಸಿದ್ದಾರೆ ಅನ್ಕೋತೀನಿ… ಕಾಮಿಡಿ ಕಿಂಗ್ ವಿಜಯ್ ಸರ್ ಕಮ್ಮಿ ಬಂದ್ರು ಕೂಡ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಗುಸ್ತರೆ… ಫೈನಲಿ ಬೇಬಿ ಆರಾಧ್ಯ ಮತ್ತೆ ಪ್ರಜ್ವಲ್ ಸರ್ ಕಣ್ಣಲ್ಲಿ ನೀರು ಬರುಸ್ತಾರೆ… ಸುಳ್ಳು ಯಾಕೆ ಹೇಳ್ಲಿ ನಂಗೂ ಬಂತು..
ಎಡಿಟಿಂಗ್ ವಿಚಾರಕ್ಕೆ ಬಂದ್ರೆ ಒಂದು ಮಾತಿದೆ ರೈಟ್ ವಿಥೌಟ್ ಫಿಯರ್ , ಎಡಿಟ್ ವಿಥೌಟ್ ಮರ್ಸಿ ಅಂತ ಆ ಮಾತು ಈ ಸಿನಿಮಾಗೆ ತುಂಬಾ ಚೆನ್ನಾಗಿ ಅನ್ವಯ ಆಗಿದೆ ಅನ್ಕೋತೀನಿ…
ಫೈನಲಿ ಪ್ರೊಡ್ಯೂಸರ್ ವಿಷಯಕ್ಕೆ ಬಂದರೆ ಒಂದು ಒಳ್ಳೆಯ ಟೀಂ ಕಟ್ಟಿ ಒಂದು ಒಳ್ಳೆ ಮಿಕ್ಸಡ್ ಫ್ರೂಟ್ ತಯಾರುಮಾಡಿ ಸಿನಿಮಾ ಮಾಡಿದ್ದಾರೆ… ಅವರಿಗೆ ಸಿನಿಮಾ ಮೇಲಿರೋ ಪ್ಯಾಶನ್ ಕಾಣ್ಸುತ್ತೆ….
ಈ ಸಿನಿಮಾ ಪ್ರಜ್ವಲ್ ಸರ್ ಗೆ ಕಂಬ್ಯಾಕ್ ಅಂತಾನೆ ಹೇಳಬಹುದು….
ದಯವಿಟ್ಟು ಎಲ್ಲರೂ ಸಿನಿಮಾನ ಥಿಯೇಟರ್ ಗೆ ಹೋಗಿ ನೋಡಿ ತುಂಬಾ ಚೆನ್ನಾಗಿದೆ ನಿಮಗೂ ಇಷ್ಟ ಆಗುತ್ತೆ ಅನ್ಕೋತೀನಿ… ಇಷ್ಟ ಆದ್ರೆ ರಿವ್ಯೂ ಬರೆಯೋದು ಮರಿಬೇಡಿ…
ಯಾಕಂದ್ರೆ ನಾನು ಫಸ್ಟ್ ಟೈಮ್ ಸಿನಿಮಾ ಇಷ್ಟ ಆಗಿ ಅದರ ಬಗ್ಗೆ ರಿವ್ಯೂ ಬರಿತಿರೋದು…