‘ಗೀತಾ’ ಜೊತೆ ಡ್ಯುಯೆಟ್ ಹಾಡಲಿರುವ ಗಣೇಶ್..!!

Published on

432 Views

ನಿನ್ನೇ ಅಭಿಮಾನಿಗಳ ಮುಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಗೋಲ್ಡನ್ ಸ್ಟಾರ್ ಗಣೇಶ್. ಅದೇ ವೇಳೆಗೆ ‘ ಗೀತಾ’ ಚಿತ್ರ ತಂಡದಿಂದ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಯಿತು. ಎಸ್.ಎಸ್. ಫಿಲಂಸ್ ಹಾಗೂ‌ ಗೋಲ್ಡನ್‌ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪ ಗಣೇಶ್ ‘ ಗೀತಾ’ ಚಿತ್ರದ ನಿರ್ಮಾಣದ ಜವಾಬ್ದಾರಿ‌ ಹೊತ್ತಿದ್ದಾರೆ. ‘ಗೀತಾ’ ಚಿತ್ರಕ್ಕೆ ನಿರ್ದೇಶಕ ಆನಂದ್ ರಾವ್ ಜೊತೆ ನಿರ್ದೇಶನದಲ್ಲಿ ಪಳಗಿದ ವಿಜಯ್ ನಾಗೇಂದ್ರ ನಿರ್ದೇಶಕ ರಾಗಿದ್ದಾರೆ. ಚಿತ್ರದ ಪೋಟೋಶೂಟ್ ಈಗಾಗಲೇ ನಡೆದಿದ್ದು, ಚಿತ್ರದಲ್ಲಿ ಹೆಸರಾಂತ ನಟ- ನಟಿಯರು ಅಭಿನಯಿಸಲಿದ್ದಾರೆಂದು ಚಿತ್ರತಂಡ ಹೇಳಿದೆ. ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾ ಗ್ರಹಣವಿದೆ. ನಿರ್ದೇಶಕ ‌ವಿಜಯ್ ನಾಗೇಂದ್ರ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ‌ ನಾಯಕಿಯ ಹುಡುಕಾಟ ನಡೆಯುತ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com