ಗಂಡ ಊರಿಗೆ ಹೋದಾಗ

Published on

996 Views

ಸಾಯಿಕೃಷ್ಣ ನಿರ್ದೇಶನದಲ್ಲಿ ಒಂದು ಶುದ್ಧ ಹಾಸ್ಯ, ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಮನರಂಜನೆಯ ಚಿತ್ರ “ಗಂಡ ಊರಿಗೆ ಹೋದಾಗ” ಚಿತ್ರದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಮೂಡಿಬಂದಿದ್ದು ಯೂಟ್ಯೂಬ್ ನಲ್ಲಿ ಟ್ರೈಲರ್ ಹಾಗೂ ಹಾಡುಗಳಿಗೆ ಪ್ರೇಕ್ಷಕರಿಂದ ಸುಮಾರು 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ.

ಸಿಂಧೂ ರಾವ್, ಸ್ವಪ್ನ , ಅನೂಗೌಡ, ರಾಧಿಕಾ ಹಾಗೂ ಶಾಲಿನಿ ಈ ಐದು ಜನ ನಟಿಯರು ಸಿನಿಮಾದಲ್ಲಿ ಗಂಡ ಊರಿಗೆ ಹೋದಾಗ ಏನೇನು ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಹಾಗೆ ಈ ಚಿತ್ರದಲ್ಲಿ ಮದುವೆ ಹಾಗೂ ಮದುವೆಯ ನಂತರದ ಜೀವನದ ಮೌಲ್ಯಗಳನ್ನು ಬಿತ್ತುವುದರ ಜೊತೆಗೆ ಕುಡಿತ, ಕುಣಿತ, ಜೂಜು, ಮೋಜು, ಮಸ್ತಿಯ ಹಿಂದೆ ಬಿದ್ದ ಇಂದಿನ ಯುವ ಜನಾಂಗದ ಬದುಕಿನ ಚಿತ್ರಣವಾಗಿದೆ.
ಈ ಚಿತ್ರದಲ್ಲಿ ಅಷ್ಟು ಜನ ನಟಿ ಮಣಿಯರು ಜಬರ್ದಸ್ತಾಗಿ ಕುಡಿದು ಕುಡಿತದ ತಾಳಕ್ಕೆ ಮನಸೋ ಇಚ್ಚೆ ಕುಣಿದಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು ಅರುಣ್ ಆಯಂಡ್ರೋ ಸಂಗೀತವನ್ನು ನೀಡಿದ್ದಾರೆ.

ಜಾನ್, ಜಗದೀಶ್ ಹಾಗೂ ಕಿರಣ್ ಹಣ ಹೂಡುವುದರ ಮೂಲಕ ನಿರ್ಮಾಪಕರಾಗುವುದರ ಜೊತೆಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ವಿ.ಸಿ.ಎನ್ ಮಂಜು ಚಿತ್ರದಲ್ಲಿ ಅಭಿನಯಿಸಿ ಕಾರ್ಯಕಾರಿ ನಿರ್ಮಾಪಕನ ಜವಾಬ್ಧಾರಿಯನ್ನು ಹೊತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com