ಗಣಪನ ಮದುವೆ ಕಿರುಚಿತ್ರ

Published on

254 Views

ಜನಸಾಮಾನ್ಯರ ಬದುಕಿನ ಕಥೆಯನ್ನು ತೆರೆದಿಡುವ ಪ್ರೆಷರ್ ಕುಕ್ಕರ್ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದ ಪತ್ರಕರ್ತ ವಿನಾಯಕ ಕೋಡ್ಸರ ಇದೀಗ ‘ಗಣಪನ ಮದುವೆ’ ಎಂಬ ಕಿರುಚಿತ್ರವನ್ನ ನಿಮ್ಮೆಲ್ಲರ ಮುಂದೆ ತಂದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಆದ ಗಣಪನ ಮದುವೆ ಕಿರುಚಿತ್ರವನ್ನ ಅದಾಗಲೇ ಹತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಮದುವೆ ಆಗಲು ಸಿದ್ಧವಾಗಿರುವ ಹುಡುಗ ಗಣಪನ ಸುತ್ತ ಹೆಣೆದಿರುವ ಕಥೆಯೇ ಗಣಪನ ಮದುವೆ. ಮೂರ್ನಾಲ್ಕು ಹುಡುಗಿಯರನ್ನು ಭೇಟಿ ಮಾಡಿದ್ಮೇಲೆ, ಇನ್ಮೇಲೆ ಮದುವೆ ಆಗಲ್ಲ ಅಂತ ಡಿಸೈಡ್ ಮಾಡುವ ಗಣಪನ ಜೀವನದಲ್ಲಿ ಮುಂದೇನಾಗುತ್ತೆ ಅನ್ನೋದೇ ಕಿರುಚಿತ್ರದ ಹೂರಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com