ಗಾನಗಂಧರ್ವ ಎಸ್ ಪಿಬಿ ಇನ್ನಿಲ್ಲ…
ಚೆನೈನ ಎಂಜಿಎಂ ಆಸ್ಪತ್ರೆಯ ಮುಂದೆ ಸುದ್ದಿಗೋಷ್ಟಿ ನಡೆಸಿದ ಎಸ್ ಪಿಬಿ ಪುತ್ರ ಚರಣ್ ಗಾನಗಂಧರ್ವ ಎಸ್ ಪಿಬಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 1 ಗಂಟೆ 4ನಿಮಿಷಕ್ಕೆ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ.
ಆಗಸ್ಟ್ 5 ರಂದು ಕೊರೋನಾ ದಿಂದ ಆಸ್ಪತ್ರೆ ಸೇರಿದ ಎಸ್ ಪಿಬಿ 52 ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದವರು ಇಂದು ಇಹಲೋಕ ತ್ಯಜಿಸಿದ್ದರೆ. 16 ಭಾಷೆಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾದ ಬಾಲಸುಬ್ರಹ್ಮಣ್ಯಂರವರು ಕನ್ನಡಿಗರ ಮನದಲ್ಲಿ ಉಳಿದವರು.
‘ನಕ್ಕರೆ ಅದೇ ಸ್ವರ್ಗ’ ಹಾಸ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಎಸ್ಪಿಬಿಯವರು 1946 ಜೂನ್ 4 ರಂದು ಆಂಧ್ರದ ಚಿತ್ತೂರಿನ ಕೊನೇಟಮ್ಮ ಪೇಟಾದಲ್ಲಿ ಜನಿಸಿದ್ದರು. ಹುಟ್ಟು ಹೆಸರು ಶ್ರೀಪತಿ ಪಂಡಿತರಾಧ್ಯುಲ ನಂತರ ಎಸ್ ಪಿ ಬಾಲಸುಬ್ರಹ್ಮಣ್ಯಂ ಹೆಸರಿನಲ್ಲಿ ಪ್ರಖ್ಯಾತಿಯನ್ನು ಪಡೆದವರು.
ಪದ್ಮಭೂಷಣ, ಪದ್ಮಶ್ರೀ, ಗೌರವ ಡಾಕ್ಟರೇಟ್ ಹೀಗೆ 4 ಭಾಷೆಗಳಲ್ಲಿ 6 ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಏಕೈಕ ಗಾಯಕ ಎಸ್ ಪಿಬಿ(74) ಪತ್ನಿ ಸಾವಿತ್ರಿ, ಪುತ್ರ ಚರಣ್, ಪುತ್ರಿ ಪಲ್ಲವಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಗಣ್ಯತಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.