ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಸಮ್ಮುಖದಲ್ಲಿ ‘ಗಾಜನೂರು’ಚಿತ್ರಕ್ಕೆ ಮುಹೂರ್ತ

Published on

472 Views

ಈ ಅದ್ದೂರಿ ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚೇಂಬರ್ ಅಧ್ಯಕ್ಷ ಜೈರಾಜ್, ಕರಿಸುಬ್ಬು ಸೇರಿ ಹಲವರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯ್, ಈ ಸಿನಿಮಾಕ್ಕೂ ಅಣ್ಣಾವ್ರಿಗೂ ಯಾವುದೇ ಸಂಬಂಧವಿಲ್ಲ. ಚಿತ್ರಕ್ಕೆ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಇಟ್ಟಿದ್ದೇವೆ. ಈ ಊರಿಗೂ ಈ ಊರಿಗೂ ಸಂಬಂಧವಿಲ್ಲ..

ಚಿತ್ರದ ನಾಯಕ ಅವತಾರ್ ಈಗಾಗಲೇ ಕನ್ನಡ, ತೆಲುಗು, ತಮಿಳು, ತುಳು ಸೇರಿ ಒಟ್ಟು ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಚಿತ್ರದ ನಾಯಕಿ ಸೋನಲ್ ಮೊಂತೆರೋ.
ಚಿತ್ರದ ನಿರ್ಮಾಪಕ ಅವಿನಾಶ್ ತಮ್ಮ ಮೊದಲ ಸಿನಿಮಾ ನಿರ್ಮಾಣದ ಅನುಭವ ಹಂಚಿಕೊಂಡರು. ನಾನು ಮೂಲತಃ ಕಲಬುರಗಿಯವನು. ಕೇಟರಿಂಗ್ ನಮ್ಮ ಉದ್ಯಮ. ಸಿನಿಮಾ ಮಾಡಬೇಕೆಂಬ ಕ್ರೇಝ್ ಮೊದಲಿಂದಲೂ ಇತ್ತು. ಅದನ್ನೀಗ ನೆರವೇರಿಸಿಕೊಂಡಿದ್ದೇನೆ. ಒಟ್ಟು ಎರಡೂವರೆ ಕೋಟಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಲಿದೆ. ವಿದೇಶದಲ್ಲಿಯೂ ಶೂಟ್ ಮಾಡುವ ಯೋಜನೆ ಇದೆ ಎಂದರು.

ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಲಿದ್ದು, ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಲ್ಕರ್ ಸಂಕಲನ, ಕಥೆ, ಚಿತ್ರಕಥೆ ಕೀರ್ತಿ, ಭೂಷಣ್ ನೃತ್ಯ ನಿರ್ದೇಶನ, ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com