ಕ್ಯಾನೆಸ್ ನಲ್ಲಿ ಪ್ರಶಸ್ತಿಗೆದ್ದ ಕನ್ನಡದ ಕಿರು ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ರಿಂದ ಅಭಿನಂದನೆ!! ಇಲ್ಲಿದೆ ನೋಡಿ ಕಿರುಚಿತ್ರದ ಬಗ್ಗೆ ಸಂಪೂರ್ಣ ವಿವರ
ಚಿದಾನಂದ ಎಸ್ ನಾಯಕ್ ರವರ ಕನ್ನಡದ ಕಿರು ಚಿತ್ರ “Sunflowers Were the First Ones to Know” ಕ್ಯಾನೆಸ್ ನ ಲಾ ಸಿನೆಫ್ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಈ ಚಿತ್ರದ ವಿಭಾಗವನ್ನು ಪ್ರಪಂಚದಾದ್ಯಂತ ಹಲವು ಚಲನಚಿತ್ರ ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಹಾಗೂ ಪ್ರಪಂಚದಾದ್ಯಂತ ಪ್ರಚಾರ ಮಾಡಲಾಗುತ್ತದೆ.
ಇದು 15-ನಿಮಿಷದ ಕಿರು ಚಲನಚಿತ್ರವಾಗಿದ್ದು, ಈ ಚಿತ್ರವು ಹಳ್ಳಿಯ ಬೆಲೆಬಾಳುವ ಹುಂಜದ ಕಳ್ಳತನವು, ಸಮುದಾಯವನ್ನು ಶಾಶ್ವತ ಕತ್ತಲೆಗೆ ತಳ್ಳುವ, ಅದರ ಸಾಮರಸ್ಯವನ್ನು ಹಾಳುಮಾಡುವ ವಯಸ್ಸಾದ ಮಹಿಳೆಯ ಮೇಲೆ ಕೇಂದ್ರೀಕೃತವಾಗಿದೆ. ಈ ಚಿತ್ರವು ಹಳ್ಳಿಗರನ್ನು ಕಾಣೆಯಾದ ಪಕ್ಷಿಯನ್ನು ಹಿಂಪಡೆಯಲು ಮತ್ತು ಸೂರ್ಯನ ಬೆಳಕನ್ನು ಪುನಃಸ್ಥಾಪಿಸಲು, ಹುಂಜದ ಹುಡುಕಾಟಕ್ಕೆ ಪ್ರೇರೇಪಿಸುತ್ತದೆ.
ಈ ಚಿತ್ರವನ್ನು ಸಂಪೂರ್ಣವಾಗಿ ರಾತ್ರಿಯ ವೇಳೆಯಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಚಿತ್ರವು ಸಸ್ಪೆನ್ಸ್ ಹಾವೂ ಥ್ರಿಲ್ಲಿಂಗ್ ಸೀನ್ ಗಳನ್ನು ಹೊಂದಿದೆ. ಈ ಚಿತ್ರವನ್ನು ಚಿದಾನಂದ ಎಸ್ ನಾಯಕ್ ರವರು ನಿರ್ದೇಶಿಸಿದ್ದು, ಸೂರಜ್ ಠಾಕೂರ್ ರವರು ಛಾಯಾಗ್ರಹಣ ಮಾಡಿದ್ದಾರೆ. ಸಂಪಾದಕರು ಮನೋಜ್ ವಿ, ಧ್ವನಿ ವಿನ್ಯಾಸ ಮತ್ತು ಸಂಗೀತ ಸಂಯೋಜನೆ ಅಭಿಷೇಕ್ ಕದಮ್ ಹಾಗೂ ನಿರ್ಮಾಣ ವಿನ್ಯಾಸವನ್ನು ಪ್ರಣವ್ ಜಿ ಖೋಟ್ ರವರು ಮಾಡಿದ್ದಾರೆ.
ಭಾರತದ ಪುರಾಣಗಳು ಮತ್ತು ಜಾನಪದ ಕಥೆಗಳನ್ನು ಸಿನಿಮಾದ ಅನುಭವಗಳಾಗಿ ಪರಿವರ್ತಿಸುವುದು ನನ್ನ ಕನಸಾಗಿತ್ತು ಮತ್ತು ಅಂತಹ ಕಥೆಗಳ ಸಂಪತ್ತನ್ನು ಹೇಳಲು ಕಾಯುತ್ತಿದ್ದೆ. ಈ ಕಿರುಚಿತ್ರವು ಅದನ್ನು ಪ್ರಾರಂಭಿಸಲು ಪ್ರಸಕ್ತ ಅವಕಾಶವೆಂದು ಭಾವಿಸುತ್ತೆನೆ ಎಂದು ನಿರ್ಮಾಪಕರಾದ ಚಿದಾನಂದ ಎಸ್ ನಾಯಕ್ ರವರು ಹಂಚಿಕೊಂಡಿದ್ದಾರೆ.
ಇನ್ನು, ಕ್ಯಾನೆಸ್ ನ ಲಾ ಸಿನೆಫ್ ಪ್ರಶಸ್ತಿಯನ್ನು ಗೆದ್ದಿರುವ ಈ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ ಹಾಗೂ ಕನ್ನಡದ ಜಾನಪದೀಯ ಸೊಗಡನ್ನು ಜಾಗತಿಕ ಹಂತಕ್ಕೆ ತಲುಪಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಅವರು ಮಾಡಿರುವ ಟ್ವೀಟ್ ಇಲ್ಲಿದೆ ನೋಡಿ:
https://x.com/TheNameIsYash/status/1793865716128776554
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.