ಮೇ 01ರಿಂದ ರಾಜ್ಯಾದ್ಯಂತ ತೆರೆಗೆ ಬಹುನಿರೀಕ್ಷೀತ “99”

Published on

240 Views

ರಾಮು ಫಿಲಂಸ್ ಬ್ಯಾನರ್ ಅಡಿಯಲ್ಲಿ ರಾಮು ಅವರು ನಿರ್ಮಿಸಿರುವ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರವು ಮೇ 01ರಿಂದ
ರಾಜ್ಯಾದ್ಯಂತ ತೆರೆಕಾಣಲಿದೆ. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ 96
ಸಿನಿಮಾದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಗಣೇಶ್ ಅವರಿಗೆ ಜೋಡಿಯಾಗಿ ಭಾವನ ಅವರು ನಟಿಸಿದ್ದಾರೆ‌. ರೋಮಿಯೋ ಚಿತ್ರದ ನಂತರ 2ನೇ ಬಾರಿಗೆ ಇವರಿಬ್ಬರು ಜೊತೆಯಾಗಿ ನಟಿಸಿದ್ದು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿರುವ ಹಾಡುಗಳು
ಸಖತ್ ಹಿಟ್ ಆಗಿದ್ದು ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ
ಹಾಗೂ ದಿಲ್ ರಂಗೀಲಾ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪ್ರೀತಂ ಗುಬ್ಬಿ
ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com