‘ಚಿಲ್ ಬ್ರೋ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

Published on

375 Views

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ರೂಪಿಕಾ ‘ಚೆಲುವಿನ ಚಿಲಿಪಿಲಿ’ ಚಿತ್ರದ‌ ಮೂಲಕ ನಾಯಕಿಯಾಗಿ ಪರಿಚಯಗೊಂಡವರು.

ನಂತರ ಕನ್ನಡದಲ್ಲಿ‌ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ‌ಗುರುತಿಸಿಕೊಂಡ ರೂಪಿಕಾ ನಂತರ ತಮಿಳು‌, ತೆಲುಗು ಭಾಷೆಗಳಿಂದಲೂ ಅವಕಾಶವನ್ನು ಗಿಟ್ಟಿಸಿಕೊಂಡರು. ಈಗ ಅವರ ಅಭಿನಯದ ‘ಚಿಲ್ ಬ್ರೋ’ ತೆಲುಗು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಅರಣೋದಯ ಪ್ರೊಡಕ್ಷನ್ ಬ್ಯಾನರ್ ನಡಿ ಶ್ರೀನು ಚಂಬೆಟಿರವರು ನಿರ್ಮಿಸುತ್ತಿರುವ ‘ಚಿಲ್ ಬ್ರೋ’ ಚಿತ್ರವನ್ನು ಕುಂಚಂ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ನಿರ್ದೇಶಕರಾದ ವಿ ಆನಂದ್ ಮತ್ತು ರಮಣ ತೇಜ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಸುರೇಶ್ ಬೊಬ್ಬಿಲಿ ಸಂಗೀತ, ಶಮಲಾ ಭಾಸ್ಕರ್ ಛಾಯಾಗ್ರಹಣ ಚಿತ್ರಕ್ಕಿದೆ. ‘ಚಿಲ್ ಬ್ರೋ’ ಇದೊಂದು ರೊಮ್ಯಾಂಟಿಕ್ ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದ್ದು, ಸೂರ್ಯ ಶ್ರೀನಿವಾಸ್, ಪವನ್ ತೇಜ್ ಮತ್ತು ರೂಪಿಕಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com