ಕನ್ನಡ ಕೊಂಕಣಿಯಲ್ಲಿ ದಿ ವೇಕೆಂಟ್ ಹೌಸ್ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್

Published on

565 Views

ಕನ್ನಡ ಚಿತ್ರರಂಗ ಇತ್ತೀಚಿಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಏಷ್ಟೋ ಹೊಸ ಪ್ರತಿಭೆಗಳು ಚಂದನವನದಲ್ಲಿ ಸದ್ದು ಮಾಡುತ್ತಿವೆ. ಜನೆಟ್ ಪ್ರೊಡಕ್ಷನ್ಸ್ ರವರ ಮೂರನೇ ಸಿನೆಮಾ ದಿ ವೇಕೆಂಟ್ ಹೌಸ್. ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿನ್ನೆ ಈಸ್ಟರ್ ಹಬ್ಬ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಈ ಚಿತ್ರದಲ್ಲಿ ಶ್ರೇಯಸ್ ಚಿಂಗ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಹಾಗೇನೇ ನಿರ್ದೇಶನದ ಕ್ಯಾಪ್ ಸಹ ತೊಟ್ಟಿದ್ದಾರೆ. ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ಈಸ್ಟರ್ ನೊರೊನ ಕಾಣಿಸಿಕೊಂಡಿದ್ದು, ಸಂಗೀತ ನಿರ್ದೇಶನ ಮತ್ತು ಸಿನಿಮಾ ಕ್ಕೆ ಡೈಲಾಗ್ಸ್ ಸಹ ಬರೆದಿದ್ದಾರೆ.

ಈಸ್ಟರ್ ನೊರೊನ ಕನ್ನಡದಲ್ಲಿ ಹೊಸಬರಾದರೂ, ಅವರು ನಟಿಸಿದ ಒಂದಿಷ್ಟು ಸಿನೆಮಾಗಳು ಬಿಡುಗಡೆಗೆ ರೆಡಿಯಾಗಿವೆ. ಲಂಕೆ, DNA, ಲೋಕಲ್ ಟ್ರೈನ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಬೃಹತ್ ಅಭಿಲಾಷೆ ಇಟ್ಟುಕೊಂಡಿದ್ದಾರೆ.

ಬಹುಭಾಷೇಯಲ್ಲಿ ತಮ್ಮ ಪ್ರತಿಭೆ ಮೂಲಕ 25ಕ್ಕೂಹೆಚ್ಚು ಸಿನೆಮಾಗಳಲ್ಲಿ ನಟಿಸಿರೋ ಈಸ್ಟರ್ ನೊರೊನ ಅವರು, ತಮ್ಮದೇ ಪ್ರೊಡಕ್ಷನ್ ನಲ್ಲಿ ಇನ್ನೂ ಹೆಚ್ಚೆಚ್ಚು ಸಿನೆಮಾ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com