ಸ್ವಂತ ವೆಬ್‌ಸೈಟ್‌ನಲ್ಲೇ ರಿಲೀಸ್ ಆದ ಕನ್ನಡದ ಮೊದಲ ಏಕಂ ವೆಬ್ ಸೀರೀಸ್ – ಒಟಿಟಿಗಳಿಗೆ ಪಾಠ ಕಲಿಸಿದ ರಕ್ಷಿತ್ ಶೆಟ್ಟಿ
ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕನ್ನಡದ ಮೊದಲ ವೆಬ್ ಸೀರೀಸ್ ಏಕಂ ನಿನ್ನೆಯಷ್ಟೇ ಬಿಡುಗಡೆಗೊಂಡಿದೆ. ಆದರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣದ ಈ ವೆಬ್ ಸೀರೀಸ್ ಯಾವುದೇ ಓಟಿಟಿಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಸ್ವಂತ ವೆಬ್‌ಸೈಟ್‌ನಲ್ಲಿ ಏಕಂ ಸೀರೀಸ್ ರಿಲೀಸ್ ಮಾಡಿದ್ದಾರೆ ರಕ್ಷಿತ್!
For the pondering curious minds, seeking to know the answer to the most sought out question ‘who am I’.. here it is! #EKAM!
Out now, we hope you’ll enjoy this series as much as we loved bringing it to you ♥️
Streaming Now : https://t.co/ZQQK9QoE7y pic.twitter.com/f0xVoWnhj5
— Rakshit Shetty (@rakshitshetty) July 13, 2024
ಹೌದು. ಕನ್ನಡದ ಮೊದಲ ಸೀರೀಸ್ ಬಿಡುಗಡೆಗೆ ಓಟಿಟಿ ಪ್ಲಾಟ್‌ಫಾರಂಗಳಾದ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್‌ಸ್ಟಾರ್ ಗಳನ್ನು ಸಂಪರ್ಕಿಸಿದ್ದಾಗ, ಕನ್ನಡದ ಸೀರೀಸ್ ಗಳನ್ನು ಯಾರೂ ನೋಡುವುದಿಲ್ಲ ಎನ್ನುವ ಅಸಡ್ಡೆಯ ಉತ್ತರವನ್ನು ಓಟಿಟಿ ಪ್ಲಾಟ್‌ಫಾರಂಗಳು ನೀಡಿದ್ದವು. ಎದೆಗುಂದದ ಏಕಂ ತಂಡ, ಸೀರೀಸ್ ಗಾಗಿಯೇ ಏಕಂ ವೆಬ್ ಸೈಟನ್ನು ತೆರೆದು, ಅದರಲ್ಲಿ ಅತ್ಯಂತ ಕಡಿಮೆ ಮೊತಕ್ಕೆ ಚಂದಾದಾರರಾಗಿ, ಸೀರೀಸ್ ನೋಡಬಹುದಾದ ಅವಕಾಶ ನೀಡಿದೆ.
As we fulfil this promise, all that you know will merge into one! #EKAM.. a beautiful surprise awaits you 🤗 pic.twitter.com/Ye0o6BE2VN
— Rakshit Shetty (@rakshitshetty) July 12, 2024
ಸುಮಂತ್ ಭಟ್ ನಿರ್ದೇಶನದ ಏಕಂ ಸೀರೀಸ್ ನ ಸೀಸನ್ 1 ರಲ್ಲಿ ಒಟ್ಟು ಏಳು ಸರಣಿಗಳಿದ್ದು, ಜೂನ್ 13 ರಂದು ಸರಣಿಯನ್ನು ವೀಕ್ಷಿಸಬಹುದು ಎಂದು ರಕ್ಷಿತ್ ಶೆಟ್ಟಿ ಅಪ್‌ಡೇಟ್ ನೀಡಿದ್ದಾರೆ.
https://ekamtheseries.com ವೆಬ್‌ಸೈಟ್‌ನಲ್ಲಿ ಈ ಸರಣಿ ಲಭ್ಯವಿದ್ದು, ಚಂದಾದಾರರಾಗಬಯಸುವವರು ₹ 149 ರೂಪಾಯಿಗಳನ್ನು ಪಾವತಿಸಿ, ಸೀರೀಸ್ ಅನ್ನು ವೀಕ್ಷಿಸಬಹುದು. ಚಂದಾದಾರರಾದವರಿಗೆ ಚಿಲ್ಡ್ರನ್ ಆಫ್ ಸಿನೆಮಾ ಎಂಬ ಡಾಕ್ಯುಮೆಂಟರಿಯ 4 ಎಪಿಸೋಡ್ ನೋಡುವ ಅವಕಾಶವೂ ದೊರೆಯಲಿದ್ದು, ಏಕಂನ ಎಲ್ಲಾ ಎಪಿಸೋಡ್‌ಗಳ ಸ್ಕ್ರಿಪ್ಟ್ ಮತ್ತು ಸ್ಕ್ರೀನ್‌ಪ್ಲೇ ಕೂಡ ದೊರಕಲಿದೆ. ಅದಲ್ಲದೇ ಏಕಂ ತಂಡದ ಜತೆ ಸಂವಾದದಲ್ಲಿ ಭಾಗಿಯಾಗುವ ಅವಕಾಶವನ್ನೂ ನೀಡಲಾಗಿದೆ.
ಈಗಾಗಲೇ ಸೀರೀಸ್ ನ ಎಪಿಸೋಡ್‌ಗಳನ್ನು ವೀಕ್ಷಿಸಿರುವ ಕೆಲವರು, ಇದೊಂದು ಹೊಸ ಅಧ್ಯಾಯ ಎಂದು ಹೊಗಳಿದ್ದಾರೆ. ಕನ್ನಡ ಓಟಿಟಿ ವೇದಿಕೆಯ ಹೊಸ ಆರಂಭ, ಇದು ಕನ್ನಡದ ವೆಬ್ ಸರಣಿಗಳ ಭವಿಷ್ಯಕ್ಕೆ ಮುನ್ನುಡಿ ಹೀಗೆಲ್ಲಾ ಬರೆದುಕೊಂಡಿರುವ ಸಿನಿಪ್ರಿಯರು, ಸರಣಿಯನ್ನು ಮನಸಾರೆ ಮೆಚ್ಚಿಕೊಂಡಿರುವುದಂತೂ ಸತ್ಯ.
#Ekam Webseries is out now❤️
To Buy: https://t.co/m86fvwhsw6
Use promo code THANKYOU to avail 10% discount@rakshitshetty #EkamTheSeries pic.twitter.com/YsnOJfn90x
— MNV Gowda (@MNVGowda) July 13, 2024
ಏಕಂ ಸೀರೀಸ್ ನ https://ekamtheseries.com ಸೈಟ್‌ಗೆ ಇಂದೇ ಚಂದಾದಾರರಾಗಿ ಹಾಗೂ ಕನ್ನಡದ ಮೊದಲ ವೆಬ್ ಸೀರೀಸ್ ನ್ನು ಪ್ರೋತ್ಸಾಹಿಸಿ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.