ನಟ ರಕ್ಷಿತ್ ಶೆಟ್ಟಿ ವಿರುದ್ಧ FIR!! – ಇಲ್ಲಿದೆ ನೋಡಿ ಕಾರಣ
ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕಾಪಿ ರೈಟ್ಸ್ ನಿಯಮವನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ರಕ್ಷಿತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಬ್ಯಾಚುಲರ್ಸ್ ಪಾರ್ಟಿ ಸಿನಿಮ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ʼಗಾಳಿಮಾತುʼ ಹಾಗೂ ʼನ್ಯಾಯ ಎಲ್ಲಿದೆʼಎಂಬ ಹಾಡುಗಳನ್ನು ಅನುಮತಿ ಇಲ್ಲದೆ ಚಿತ್ರದಲ್ಲಿ ಬಳಸಿದ್ದಾರೆಂದು ಆರೋಪದಡಿ ರಕ್ಷಿತ್ ಶೆಟ್ಟಿ ಹಾಗೂ ಅವರ ಒಡೆತನದ ಪರಮ್ವ ಸ್ಟುಡಿಯೋಸ್ ಮೇಲೆ FIR ದಾಖಲಾಗಿದೆ.
ಗಾಳಿಮಾತು ಮತ್ತು ನ್ಯಾಯ ಎಲ್ಲದೆ ಹಾಡುಗಳನ್ನು ಚಿತ್ರದಲ್ಲಿ ಬಳಸಲು ಈ ಹೆಂದೆಯೇ ನವೀನ್ ಕುಮಾರ್ ರವರ ಜೊತೆ ಮಾತುಕತೆಯನ್ನು ರಕ್ಷಿತ್ ಶೆಟ್ಟಿ ಮತ್ತು ತಂಡ ನೆಡಸಿತ್ತು. ಆದರೆ ಹಲವು ಕಾರಣಕ್ಕಾಗಿ ಈ ಒಪ್ಪಂದ ಮುರಿದು ಬಿದ್ದಿತ್ತು. ನವೀನ್ ಕುಮಾರ್ ರವರು ಚಲನಚಿತ್ರಗಳ ಹಾಡುಗಳಿಗೆ ಕಾಪಿರೈಟ್ಸ್ ಪಡೆದು ಮಾರಾಟ ಮಾಡುತ್ತಿದ್ದರು. ಆದರೆ ಬ್ಯಾಚುಲರ್ಸ್ ಸಿನಿಮಾದಲ್ಲಿ ಒಪ್ಪಂದ ಮುರಿದಿದ್ದರೂ ಈ ಎರಡು ಹಾಡುಗಳನ್ನು ಬಳಸಿದ್ದಾರೆ ಎಂದು ನವೀನ್ ಕುಮಾರ್ ರವರು ರಕ್ಷಿತ್ ಶೆಟ್ಟಿ ರವರ ಮೇಲೆ ಯಶವಂತಪುರ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಮಾಡಿದ್ದಾರೆ.
ನವೀನ್ ರವರು ನೀಡಿರುವ FIR ನಲ್ಲಿ ಯಾವುದೇ ಹಕ್ಕು ಪಡೆಯದೆ “ನ್ಯಾಯ ಎಲ್ಲಿದೆ” ಮತ್ತು “ಗಾಳಿಮಾತು” ಹಾಡನ್ನು ಬ್ಯಾಚುಲರ್ ಪಾರ್ಟಿ ಚಲನಚಿತ್ರದಲ್ಲಿ ಅನಧಿಕೃತವಾಗಿ ಬಳಕೆ ಮಾಡಿ ನಮ್ಮ ಕಂಪನಿಗೆ ಮೋಸ ಮಾಡಿರುತ್ತಾರೆಂದು ಆರೋಪಿತರ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ವಿಷಯದ ರಕ್ಷಿತ್ ಶೆಟ್ಟಿ ಹಾಗೂ ಅವರ ತಂಡದಿಂದ ಇನ್ನೂ ಯಾವುದೇ ಪ್ರತಿಕ್ರಿಯೇ ಬಂದಿರುವುದಿಲ್ಲ. ಈ ವಿಷಯದ ಬಗ್ಗೆ ರಕ್ಷಿತ್ ಶೆಟ್ಟಿ ರವರ ಪ್ರತಿಕ್ರಿಯೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.