ನಟಿ ನಿವೇದಿತಾ ವಿರುದ್ಧ ಎಫ್ಐಆರ್..!!

Published on

515 Views

ಸ್ಯಾಂಡಲ್ ವುಡ್ ಗೆ ಅಂಟಿರುವ ಡ್ರಗ್ಸ್ ಜಾಲದ ನಂಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಸಿಬಿ ಪೊಲೀಸರ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಡ್ರಗ್ಸ್ ನಶೆಯಲ್ಲಿರುವವರ ನಶೆ ಇಳಿಯುವಂತಾಗಿದೆ. ಇದೀಗ ಮತ್ತೊಬ್ಬ ನಟಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಎರಡು ದಿನಗಳ ಹಿಂದೆ ಗಾಂಜಾ ತುಳಸಿಯಷ್ಟೇ ಶ್ರೇಷ್ಠ ಎಂದು ಹೇಳಿಕೆ ನೀಡಿದ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ಗಾಂಜಾದಲ್ಲಿ ಔಷಧಿಯ ಗುಣವಿದೆ. ಅದು ತುಳಸಿಯಷ್ಟೇ ಶ್ರೇಷ್ಠ ಎಂಬುದಾಗಿ ನಟಿ ನಿವೇದಿತಾ ಹೇಳಿಕೆ ನೀಡಿದ್ದು, ಅದು ಗಾಂಜಾ ಸೇವನೆಗೆ ಪ್ರಚೋದನೆ ನೀಡಿದಂತಾಗಿದೆ ಎಂಬ ಆರೋಪದಡಿ ನಿವೇದಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಎ. ದೀಪಕ್ ಎಂಬುವರು ದೂರು ನೀಡಿದ್ದಾರೆ.

ಗಾಂಜಾವನ್ನು ತುಳಸಿ ಗಿಡಕ್ಕೆ ಹೋಲಿಸಿರುವ ನಿವೇದಿತಾ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ದೀಪಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com