ನಿರ್ದೇಶಕರಾದ ಪ್ರಸಿದ್ಧ ಕವಿ ಡಾ|| ಹೆಚ್.ಎಸ್.ವೆಂಕಟೇಶಮೂರ್ತಿ.

Published on

270 Views

ಪ್ರಸಿದ್ಧ ಕವಿ ಡಾ|| ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಮೊದಲ ಬಾರಿಗೆ ನಿರ್ದೇಶಿಸಿರುವ “ಹಸಿರು ರಿಬ್ಬನ್” ಚಿತ್ರ ತೆರೆಗೆ ಬರೋಕೆ ರೆಡಿ ಆಗಿದೆ. ಹಸಿರು ಕನಸೊಂದರ ಬೆನ್ನಟ್ಟಿದ ಅಮಾಯಕ ಕುಟುಂಬವೊಂದರ ತಳಮಳ ಈ ಕಥನದಲ್ಲಿದೆ. ಎರಡು ಕುಟುಂಬಗಳ ಸಂಬಂಧ, ಬಿಕ್ಕಟ್ಟನ್ನು ನೋಡುಗರಿಗೆ ಚೊಕ್ಕಟವಾಗಿ ಹೇಳುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ನಿಖಿಲ್ ಮಂಜು ನಾಯಕರಾಗಿ ನಟಿಸುತ್ತಿದ್ದು, ಗಿರಿಜಾ ಲೋಕೇಶ್ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಬೇಬಿ ಋತ್ವಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ಸುಪ್ರಿಯಾ ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com