ರಾಜನ್-ನಾಗೇಂದ್ರ ಖ್ಯಾತಿಯ ಸಂಗೀತ ನಿರ್ದೇಶಕರಾದ ರಾಜನ್ ವಿಧಿವಶ

Published on

317 Views

ಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಸಂಗೀತ ಸುಧೆ ಹರಸಿದವರು ರಾಜನ್-ನಾಗೇಂದ್ರ. ನಾ ನಿನ್ನ ಮರೆಯಲಾರೆ,ಚಲಿಸುವ ಮೋಡಗಳು,ಗಂಧದ ಗುಡಿ,ಕಿಟ್ಟು ಪುಟ್ಟು,ಸಿಂಗಾಪುರದಲ್ಲಿ ರಾಜ ಕುಳ್ಳ, ಗುರಿ, ಬಯಲುದಾರಿ,ಎರಡು ಕನಸು, ಗಾಳಿಮಾತು, ಚಂದನದ ಗೊಂಬೆ,ಇಬ್ಬನಿ ಕರಗಿತು, ಹೊಂಬಿಸಿಲು, ಬೆಸುಗೆ, ನಾ ನಿನ್ನ ಬಿಡಲಾರೆ, ಗಿರಿಕನ್ಯೆ…ಹೀಗೆ ಹಲವಾರು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಜನಪ್ರಿಯತೆಯನ್ನು ಪಡೆದವರು.

ರಾಜನ್ ರವರ ಸಹೋದರ ನಾಗೇಂದ್ರರವರೊಡನೆ ಸೇರಿ ರಾಜನ್- ನಾಗೇಂದ್ರ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ‌. ಕನ್ನಡ,ತಮಿಳು,ತೆಲುಗು, ಮಳಯಾಲಂ, ತುಳು ಭಾಷೆಗಳ ಒಟ್ಟು 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ.


200ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಮತ್ತು ಉಳಿದಂತೆ ಒಟ್ಟಾರೆ ಸುಮಾರು 175 ಚಿತ್ರಗಳು ತಮಿಳು, ತೆಲುಗು, ಸಿಂಹಳಿ ಭಾಷೆಯ ಚಿತ್ರಗಳಿಗೆ ರಾಜನ್-ನಾಗೇಂದ್ರ ಮುದವಾದ ಸಂಗೀತ ನೀಡಿದ್ದವರು. ಇವರ ನಿರ್ದೇಶನದಲ್ಲಿ ಹಾಡಿದವರೆ ಇಲ್ಲ…! ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಾದ ರಾಜನ್ (85) ನಿನ್ನೆ(ಭಾನುವಾರ) ರಾತ್ರಿ 10.30ಕ್ಕೆ ನಿಧನರಾಗಿದ್ದು, ತಾಯಿ ಸರಸ್ವತಿಯ ಮಡಿಲು ಸೇರಿದ್ದಾರೆ. ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com