ಮೂವರು ನಾಯಕಿಯರ ಜೊತೆ ಅಬ್ಬರಿಸಲಿದ್ದಾರೆ ಡೈನಾಮಿಕ್ ಪ್ರಿನ್ಸ್

Published on

601 Views

ಜಂಟಲ್ ಮ್ಯಾನ್ ನಂತರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮೇಲೆ ನಿರೀಕ್ಷೆ ತುಂಬಾನೇ ಹೆಚ್ಚಿದೆ.. ಲಾಕ್ಡೌನ್ ಗಿಂತ ಮುಂಚೆ ಟೈಟಲ್ ಇಡದೇ ಸಿನೆಮಾ 70 ಭಾಗ ಚಿತ್ರೀಕರಣ ಮುಗಿಸಿ ಇವಾಗ ಟೈಟಲ್ ಅನೌನ್ಸ್ ಮಾಡಿದೆ. ಹೌದು ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿ, ಬಸವರಾಜ್ ಮಂಚಯ್ಯ ಬಂಡವಾಳ ಹೂಡಿರೋ ಸಿನಿಮಾಕ್ಕೆ ” ಅಬ್ಬರ” ಎಂದು ಟೈಟಲ್ ಇಟ್ಟು ಅದರ ಮೋಶನ್ ಪೋಸ್ಟರ್ ರಿಲೀಸ್ ಮಾಡಿದೆ.

ಚಿತ್ರದಲ್ಲಿ ಪ್ರಜ್ವಲ್ ಅವರು ಐದು ಶೇಡ್ ಮತ್ತು ಮೂರು ವಿಭಿನ್ನ ಪಾತ್ರಗಳಲ್ಲಿ ಮಿಂಚುತಿದ್ದು, ಅವರಿಗೆ ನಾಯಕಿಯರಾಗಿ ರಾಜ್ ಶ್ರೀ ಪೊನ್ನಪ್ಪ, ಲೇಖಾ ಚಂದ್ರ, ನಿಮಿಕ ರತ್ನಾಕರ್ ಅಭಿನಯಿಸಿದ್ದಾರೆ. ಎದುರಾಳಿಯನ್ನು ಸಂಹರಿಸುವ ಸಲುವಾಗಿ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ಪ್ರಜ್ವಲ್ , ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುವ ಜಾಣ್ಮೆ ಯೇ ಈ ಸಿನೆಮಾ ಕಥೆ.

ಪ್ರಜ್ವಲ್ ಅವರ ಬಹುನಿರೀಕ್ಷಿತ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದರೆ, ರಾಮ್ ನಾರಾಯಣ್ ಅವರ ಪರ್ಮನೆಂಟ್ ಕ್ಯಾಮೆರಾ ಮ್ಯಾನ್ ಜೆ ಕೆ ಗಣೇಶ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ರವಿಶಂಕರ್, ಶೋಭರಾಜ್, ಶಂಕರ್ ಅಶ್ವತ್ಥ್ , ಕೋಟೆ ಪ್ರಭಾಕರ್, ವಿಕ್ಟರಿ ವಾಸು, ವಿಜಯ್ ಚೆಂಡುರ್, ಗೋವಿಂದೇ ಗೌಡ ಇನ್ನೂ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಮೋಷನ್ ಪೋಸ್ಟರ್ ಸಾಕಷ್ಟು ಅಬ್ಬರದಿಂದ ಕೂಡಿದ್ದು, ಸಿನಿಮಾ ಸಹ ಅದೇ ಅಬ್ಬರದಲ್ಲಿ ಇರ್ಲಿ. ಪ್ರೇಕ್ಷಕರು ಸಹ ಅಬ್ಬರದಲ್ಲಿ ಥೇಟರ್ ಕಡೆ ಬರಲಿ ಎಂಬುದೇ ನಮ್ ಆಶಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com