‘ಧ್ವಜ’ ಚಿತ್ರಕ್ಕೆ ಹಿನ್ನಲೆ ಸಂಗೀತ

Published on

516 Views

ಸಿ ಬಿ ಜಿ ಪ್ರೊಡಕ್ಶನ್ ಲಾಂಛನದಲ್ಲಿ ಸುಧಾ ಬಸವೇಗೌಡ ಅವರು ನಿರ್ಮಿಸುತ್ತಿರುವ `ಧ್ವಜ` ಚಿತ್ರಕ್ಕೆ ಚಿತ್ರೀಕರಣ ಹಾಗೂ ಮಾತಿನ ಜೋಡಣೆ ಮುಕ್ತಾಯವಾಗಿದೆ. ಸದ್ಯ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ಚಿತ್ರಕ್ಕೆ ಒಟ್ಟು 80ದಿನಗಳ ಕಾಲ ಬೆಂಗಳೂರು, ಮೈಸೂರು, ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆದಿದೆ.

ಅಶೋಕ್ ಕಶ್ಯಪ್ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿರುವ ಈ ಚಿತ್ರದ ನಾಯಕರಾಗಿ ರವಿ(ಹೊಸ ಪರಿಚಯ) ಅಭಿನಯಿಸಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸಿರುವ ರವಿ ಅವರು ಉಪೇಂದ್ರ ಅವರ ಬಳಿ ನಿರ್ದೇಶನಕ್ಕೆ ಸಹಾಯ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ಥ್ರಿಲ್ಲರ್, ಲವ್ ಸ್ಟೋರಿ ಹಿನ್ನಲೆಯ ಕಥೆ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಿಯಾಮಣಿ, ದಿವ್ಯ ಉರುಡುಗ, ಟಿ.ಎನ್.ಸೀತಾರಾಂ., ವೀಣಾಸುಂದರ್, ತಬಲನಾಣಿ, ಬಲ, ಮಂಡ್ಯ ರವಿ, ಸುಂದರರಾಜ್ ಮುಂತಾದವರಿದ್ದಾರೆ.

Watch VITAMIN M | Kannada short movie | GouthamGowda | Arjun Yogesh Raj | Akash Jadhav | New 2018

ಐದು ಹಾಡುಗಳಿರುವ ಈ ಚಿತ್ರಕ್ಕೆ ಕಬಾಲಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್, ಕವಿರಾಜ್, ರವಿ, ಚಂದನ್ ಹಾಗೂ ಮಂಜು ಮಾಂಡವ್ಯ ಗೀತರಚನೆ ಮಾಡಿದ್ದಾರೆ. ರವಿಚಂದ್ರನ್ ಸಂಕಲನ, ಕಲಿ, ತ್ರಿಭುವನ್ ನೃತ್ಯ ನಿರ್ದೇಶನ, ಮಾಸ್ ಮಾದ, ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ಪ್ರಕಾಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ವiಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com