ಉದಯ ಟಿವಿಯಲ್ಲಿ ದಸರಾ ಸಂಭ್ರಮ ಆಕ್ಟೋಬರ್ 19 ರಿಂದ
ಚಾಮುಂಡೇಶ್ವರಿ ತಾಯಿಗೆ ಭಕ್ತಿ ಪರ‍್ವಕ ಆರಾಧನೆಯೆ ಮಹೋತ್ಸವ ನವರಾತ್ರಿ. ನಾಡಿಗೆ ನಾಡೆ ಸಂಭ್ರಮಿಸೊ ಈ ನಾಡ ಹಬ್ಬಕ್ಕೆ ಉದಯ ಟಿವಿ ವಿಶೇಷತೆಗಳನ್ನ ಹೊತ್ತು ವಿನೂತನ ಕರ‍್ಯಕ್ರಮಗಳನ್ನ ತರುತ್ತಿದೆ. ಮಹಾಸಂಗಮಗಳ ಮಹಾಮನರಂಜನೆ ಜೊತೆಗೆ ಎಲ್ಲಾ ಧಾರಾವಾಹಿಗಳಲ್ಲಿ ನವರಾತ್ರಿ ಸಂಭ್ರಮದ ಕಂತುಗಳು ಪ್ರಸಾರವಾಗಲಿದೆ. ಇದೇ ಆಕ್ಟೋಬರ್ ೧೯ ರಿಂದ ಪ್ರತಿದಿನ ಮನರಂಜನೆಯ ಮಹಾಪೂರವನ್ನು ಹರಿಸಲಿದೆ ಉದಯ ಟಿವಿ.
ಕಸ್ತೂರಿ ನಿವಾಸ :
ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತ ಈ ನವರಾತ್ರಿ. ಇದೆ ಸಾರಾಂಶವನ್ನ ಪ್ರಸ್ತುತ ಪಡಿಸೋಕೆ ತಯಾರಾಗುತ್ತಿದೆ ಉದಯ ಟಿವಿಯ ಜನಪ್ರಿಯ ಧಾರಾವಾಹಿ ಕಸ್ತೂರಿ ನಿವಾಸ.
ತುಂಬಿ ತುಳುಕೊ ನಗುವಿನ ಹೊನಲು ಕಸ್ತೂರಿ ನಿವಾಸದಲ್ಲಿ ಕಾಣಬಹುದು. ರಾಘವನಿಗೆ ಆಗಿರೊ ಆಘಾತದಿಂದ ಮನೆ ತತ್ತರಿಸಿ ಹೋಗಿದೆ , ಈನಿಟ್ಟಿನಲ್ಲಿ ನವರಾತ್ರಿ , ಮನೆಯಲ್ಲಿ ಮಾಸಿದ ಸಂತೋಷವನ್ನ ಮರಳಿ ತರುತ್ತಿದೆ.
ಬೊಂಬೆಗಳನ್ನ ಕುಡಿಸೋದು ನವರಾತ್ರಿಯ ಪದ್ಧತಿ , ಈ ಆಚರಣೆಯನ್ನ ಕಸ್ತೂರಿ ನಿವಾಸದಲ್ಲಿ ಕಾಣಬಹುದು,. ಇದರ ಜೊತೆಗೆ ಕಥೆಯಲ್ಲಿ ಮಹತ್ತರ ತಿರುವು ಕೂಡ ಹಬ್ಬದ ಕಂತುಗಳು ಪ್ರಸಾರಮಾಡಲಿದೆ.
ಹಬ್ಬದ ಖುಷಿಗಳ ನಡುವೆ , ಎಲ್ಲರ ಮನಸ್ಸಿಗೆ ನೋವುಂಟು ಮಾಡೋಕೆ ತನ್ನ ಪಿತುರಿಗಳನ್ನ ಮಾಡುತ್ತಿರೊ ರ‍್ವಮಂಗಳ ದುಷ್ಟ ಬುದ್ದಿಗೆ ಮೃದುಲಾ ಅಂತ್ಯ ಹಾಡುತ್ತಾಳಾ? ಎಂಬ ಪ್ರಶ್ನೆಗೆ ಈ ನವರಾತ್ರಿ ಕಂತುಗಳು ಉತ್ತಿರಸಲಿದೆ .
ಈ ವಿಶೇಷ ಸಂಚಿಕೆಗಳು ಆಕ್ಟೋಬರ್ ೧೯ರಿಂದ ಸಂಜೆ ೭ಕ್ಕೆ ಕಸ್ತೂರಿ ನಿವಾಸದಲ್ಲಿ ಪ್ರಸಾರವಾಗಲಿದೆ.
ಸೇವಂತಿ
ಈ ದಸರೆಯ ಸಂಭ್ರಮಾಚರಣೆಯಲ್ಲಿ ಮಾಲತಿ ಮತ್ತು ಯಶ್ವಂತ್ ರ‍್ದೇಶ್‌ಪಾಂಡೆ ಮೊಮ್ಮಕ್ಕಳೊಂದಿಗೆ ಸೇವಂತಿ ಕುಟುಂಬಕ್ಕೆ ಭೇಟಿ ನೀಡಲಿದ್ದಾರೆ. ಅವರು ಸೀರೆ ವ್ಯಾಪಾರ ನಡೆಸುತ್ತಿರುವ ಪ್ರಮೋದಾದೇವಿಯ ಕುಟುಂಬದ ಸ್ನೇಹಿತರು. ಪ್ರತಿ ರ‍್ಷ ಅವರು ಮನೆಯ ಸೊಸೆಗೆ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಾರೆ, ಈ ರ‍್ಷ ಅವರು ಸೇವಂತಿಗೆ ಸೀರೆ ನೀಡಲು ಬಂದಿದ್ದಾರೆ. ಅತಿಥಿಗಳು ಉತ್ತರ ರ‍್ನಾಟಕ ಮಾದರಿಯ ಡ್ರೆಸ್ಸಿಂಗ್ ಧರಿಸಿ ಮತ್ತು ಉತ್ತರ ರ‍್ನಾಟಕ ಪಾಕಪದ್ಧತಿಗಳನ್ನು ಮಾಡಿ ಮನರಂಜಿಸಲಿದ್ದಾರೆ. ನಂತರ ಅವರು ಗೊಂಬೆ ಪೂಜೆ ಮಾಡುತ್ತಾರೆ, ಇದೇ ಸಂರ‍್ಭದಲ್ಲಿ ಕನ್ಯಾ ಬಾಗಿನವನ್ನು ಸರ್‌ದೇಶಪಾಂಡೆಯವರ ಮೊಮ್ಮಗುವಿಗೆ ನೀಡುತ್ತಾರೆ. ನಂತರ ಬನ್ನಿ ಪೂಜೆ ಮಾಡುತ್ತಾರೆ. ಈ ವಿಶೇಷವು ಸೇವಂತಿ ಮತ್ತು ರ‍್ಜುನ್ ಅವರ ರೋಮ್ಯಾಂಟಿಕ್ ಕ್ಷಣಗಳನ್ನು ಸಹ ಒಳಗೊಂಡಿದೆ.
ಸರ್‌ದೇಶಪಾಂಡೆ ದಂಪತಿಗಳೊಂದಿಗೆ ಸೇವಂತಿ ಆಕ್ಟೋಬರ್ ೧೯ ರಿಂದ ಸಂಜೆ ೭.೩೦ಕ್ಕೆ ಪ್ರಸಾರವಾಗಲಿದೆ.
ಯಾರಿವಳು ಮತ್ತು ಕಾವ್ಯಾಂಜಲಿ ಮಹಾ ಸಂಗಮ
ಸುಶಾಂತ್ ಅವರ ಮನೆಯಲ್ಲಿ ದಸರಾ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದೇ ಸಂರ‍್ಭದಲ್ಲಿ ಮನೆಗೆ ಹೊಸ ಪಾತ್ರವೊಂದರ ಆಗಮನವಾಗುತ್ತೆ. ಈ ಹೊಸ ಪಾತ್ರ ವೇದಾಳ ಆರೈಕೆ ಮಾಡಿದ್ದ ವಯಸ್ಸಾದ ಮಹಿಳೆ. ಮನೆಗೆ ಬರುವುದರ ಹಿಂದೆ ಅವಳು ತನ್ನದೇ ಆದ ಬಾಹ್ಯ ಉದ್ದೇಶಗಳನ್ನು ಹೊಂದಿದ್ದಾಳೆ. ವಯಸ್ಸಾದ ಮಹಿಳೆಯೊಂದಿಗೆ ಮನೆಗೆ ಬರುತ್ತಿರುವಾಗ ವೇದ ಆಕಸ್ಮಿಕವಾಗಿ ಮಾಯಾ ಮತ್ತು ಶ್ರೇಷ್ಠಾಳನ್ನು ಭೇಟಿಯಾಗುತ್ತಾಳೆ. ವೇದ ಮನೆಯಲ್ಲಿ, ಅಂಜಲಿಯನ್ನು ನೋಡಲು ಬಂದ ವರ ಡಾ.ನಿಖಿಲ್ ಅವರ ಸ್ನೇಹಿತ. ಅವನು ನಿಖಿಲ್ ಪೋಷಕರೊಂದಿಗೆ ಮನೆಗೆ ಬರುತ್ತಾನೆ. ಏತನ್ಮಧ್ಯೆ, ರ‍್ಮೇಂದ್ರರ ಸಹಚರರು ಶ್ರೇಷ್ಠನನ್ನು ಹುಡುಕುತ್ತಿದ್ದಾರೆ. ಅಂಜಲಿ ಶ್ರೇಷ್ಠಾಳೊಂದಿಗೆ ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುತ್ತಾಳೆ. ಅಂಜಲಿಯ ನಿಶ್ಚಿತರ‍್ಥದ ಸ್ವಲ್ಪ ಮೊದಲು, ಶ್ರೇಷ್ಠಾ ಅಪಹರಣಕ್ಕೊಳಗಾಗುತ್ತಾಳೆ ಮತ್ತು ಅಂಜಲಿ ಅವಳನ್ನು ರಕ್ಷಿಸುತ್ತಾಳೆ, ಅದು ಅವಳ ನಿಶ್ಚಿತರ‍್ಥ ಮುರಿಯಲು ಕಾರಣವಾಗುತ್ತದೆ. ಇದು ವೇದ ಮಾಡಿದ ಕಥಾವಸ್ತು ಎಂದು ನಂತರ ತಿಳಿದುಬರುತ್ತದೆ.
ಈ ಯಾರಿವಳು ಮತ್ತು ಕಾವ್ಯಾಂಜಲಿ ಮಹಾ ಸಂಗಮ ಇದೇ ಆಕ್ಟೋಬರ್ ೧೯ ರಿಂದ ರಾತ್ರಿ ೮ಕ್ಕೆ ಪ್ರಸಾರವಾಗುತ್ತದೆ. ಹಾಗೂ ಶನಿವಾರ ಮತ್ತು ಭಾನುವಾರ ೯.೩೦ರಿಂದ ೧೦.೩೦ರವರೆಗೆ ದಸರಾ ಪ್ರಯುಕ್ತ ವಿಶೇಷ ಸಂಚಿಕೆಗಳು ಕೂಡ ಪ್ರಸಾರವಾಗಲಿವೆ.
ಮನಸಾರೆ
ದಸರಾ ಹಬ್ಬದ ಪ್ರಯುಕ್ತ ಆನಂದ್ ಅವರ ಕುಟುಂಬವು ದೇವಸ್ಥಾನಕ್ಕೆ ಭೇಟಿ ನೀಡಲು ನರ‍್ಧರಿಸುತ್ತದೆ. ದೇವಾಲಯದಲ್ಲಿ ಪ್ರರ‍್ಥನಾ ದೇವರ ಆಶರ‍್ವಾದ ಪಡೆಯಲು ಸಾಕಷ್ಟು ಸೇವೆಗಳನ್ನು ಮಾಡುತ್ತಾಳೆ, ಇದರಿಂದ ಅವಳ ತಂದೆ ಅವಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನಾ? ಈ ಮಧ್ಯೆ ವಾಸುಕಿ ಭೂಪತಿಗೆ ಬಂದು ಆನಂದ್ ಮೇಲೆ ಹಲ್ಲೆ ನಡೆಸಲು ವ್ಯವಸ್ಥೆ ಮಾಡಲು ಹೇಳುತ್ತಾಳೆ. ಪಾವನಿಗೆ ವಾಸುಕಿಯ ಯೋಜನೆಯ ಬಗ್ಗೆ ಅನುಮಾನ ಬರುತ್ತದೆ ಆದರೆ ಅವಳು ಯೋಜನೆಯನ್ನು ತಿಳಿದುಕೊಳ್ಳುವ ಮೊದಲು, ಭೂಪತಿ ಆನಂದ್ ಮತ್ತು ಪ್ರರ‍್ಥಾನಾ, ಕೌಸಲ್ಯಾಳ ಹೆಸರಿನಲ್ಲಿ ಪೂಜೆಯನ್ನು ಮಾಡುತ್ತಿರುವಾಗ ಅವನ ಮೇಲೆ ಆಕ್ರಮಣ ಮಾಡುತ್ತಾನೆ. ಇದನ್ನು ನೋಡಿದ ಪ್ರರ‍್ಥನಾ ತನ್ನ ತಂದೆಯನ್ನು ಉಳಿಸಲು ನದಿಗೆ ಹಾರುತ್ತಾಳೆ. ವಿಜಯಾದಶಮಿ ದಿನದಂದು ಮಹಿಷಾಸುರ ಸಂಹಾರ ಮಾಡಿದ ಚಾಮುಂಡಿಯಂತೆ ಅವಳು ಅಂತಿಮವಾಗಿ ಭೂಪತಿಯನ್ನು ಕೊಲ್ಲುವ ಪ್ರಯತ್ನದಲ್ಲಿ ತನ್ನ ತಂದೆಯನ್ನು ಉಳಿಸಲು ಸಫಲವಾಗುತ್ತಾಳಾ ಎಂಬುದುದನ್ನು ದಸರಾ ಸಂಚಿಕೆಗಳಲ್ಲಿ ಕಾಣಬಹುದು.
ಈ ರೋಚಕ ದೃಶ್ಯಗಳು ಆಕ್ಟೋಬರ್ ೧೯ ರಿಂದ ರಾತ್ರಿ ೯ಕ್ಕೆ ಪ್ರಸಾರವಾಗುತ್ತದೆ.
ಆಕೃತಿ
ಆಕೃತಿ ಉದಯ ಟಿವಿಯಲ್ಲಿ ಕಳೆದ ತಿಂಗಳಲ್ಲಿ ಶುರುವಾಗಿ ವೀಕ್ಷಕರಲ್ಲಿ ಮೆಚ್ಚುಗೆ ಪಡೆದು ಮನೆಮಾತಾಗಿರುವ ಧಾರವಾಹಿ. ಸಂಚಿಕೆಗಳ ಪ್ರಾರಂಭದಿಂದಲೂ ಹಲವಾರು ತಿರುವುಗಳನ್ನು ಹೋಂದಿರುವ ಈ ಧಾರವಾಹಿಯಲ್ಲಿ ಮತ್ತಷ್ಟು ಮೆರಗು ಕೂಡಲು ನವರಾತ್ರಿ ಹಬ್ಬಗಳ ಆಚರಣೆ ಜೊತೆ ಮುಚ್ಚಿಟ್ಟ ಹಲವಾರು ಕಥೆಗಳನ್ನು ಹೇಳಲು ಮುಂದಾಗಿದೆ. ನಾಯಕ ಬಾಲು ದಿವ್ಯಳ ಜೊತೆ ಸೇರುವುದು ಅಪಾಯ ಅಂತ ಹೇಳುತ್ತಿದ್ದ ಅಚ್ಯುತ್, ಬಾಲು ದಿವ್ಯಾಳ ಸ್ನೇಹವನ್ನು ಕಂಡ ಜಯರಾಮ ಅವರಿಬ್ಬರ ಗೆಳೆತನವನ್ನು ಮುರಿಯಲು ಸಂಚು ಮಾಡುತ್ತಾನೆ. ಗಂಡನ ಕಳೆದುಕೊಂಡ ಚೈತ್ರ ಮಕ್ಕಳ ಸಂತೋಷಕ್ಕಾಗಿ ಹಬ್ಬ ಆಚರಣೆ ಮಾಡಲಾಗದೆ ಒದ್ದಾಡುತ್ತಾಳೆ. ಹಲವಾರು ತಲೆಮಾರುಗಳಿಂದ ದಸಾರ ಹಬ್ಬದ ದಿನಗಳಲ್ಲಿ “ಹರಕೆ ಆಟ” ಮಾಡುತ್ತಿದ್ದ ಪದ್ಧತಿಯನ್ನು, ತನ್ನ ಸ್ವರ‍್ಥಕ್ಕಾಗಿ ಐದು ರ‍್ಷದಿಂದ ಹರಕೆ ಆಟವನ್ನು ತಡೆಮಾಡಿದ ಜಯರಾಮ, ಈಗ ಊರಿನ ಜನರಿನ ಒತ್ತಾಯದಿಂದ ಮತ್ತೆ ಶುರು ಮಾಡಲು ಒಪ್ಪುತ್ತಾನೆ. ಅದನ್ನು ಕಡೆ ಮನೆಯಲ್ಲಿ ಮಾಡಲು ನರ‍್ಧರಿಸುತ್ತಾನೆ. ದಿವ್ಯ, ಚೈತ್ರ ಊರಿನ ಒಳತಿಗಾಗಿ ಹಬ್ಬವನ್ನು ಆಚರಿಸಲು ಸಿದ್ದಮಾಡುತ್ತಾರೆ. ಹರಕೆ ಆಟಗಾರರು ತಮ್ಮ ಆಟ ಆಡಿ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಆದರೆ ಆಕೃತಿಯಿಂದ ದಿವ್ಯಳ ಕುಟುಂಬಕ್ಕೆ ಮತ್ತು ಊರಿನ ಜನರಿಗೆ ತೊಂದರೆಯಾಗುತ್ತದೆ. ದಿವ್ಯ, ಬೈರವಿ, ಬಾಲು, ಯಶ್ ಕುಟುಂಬ ಮತ್ತು ಊರಜನರನ್ನು ಕಾಪಾಡುತ್ತಾರಾ? ಇಲ್ಲವೊ? ಎಂಬ ಸನ್ನಿವೇಶಗಳು ಇದೇ ದಸಾರ ಸ್ಪೆಷಲ್ ಅಕ್ಟೊಬರ್ ೧೯ ರಿಂದ ಪ್ರಸಾರವಾಗಲಿದೆ
.ಅಕೃತಿಯ ಈ ಸನ್ನಿವೇಷಗಳು ಆಕ್ಟೋಬರ್ ೧೯ ರಿಂದ ರಾತ್ರಿ ೯.೩೦ಕ್ಕೆ ಪ್ರಸಾರವಾಗಲಿದೆ.