ಸಲಗ ಎಂಟ್ರಿಗೆ ಡೇಟ್ ಫಿಕ್ಸ್ | ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20ಕ್ಕೆ ರಾಜ್ಯಾದ್ಯಂತ ಬಿಡುಗಡೆ.

Published on

408 Views

ಕೋವಿಡ್ ಕಾಲದಲ್ಲಿ ಚಿತ್ರಮಂದಿರಗಳೆಲ್ಲಾ ಮುಚ್ಚಿದ್ದು, ಇವಾಗ ಎಲ್ಲಾ ಸರಿಹೋಗುತ್ತಿದ್ದು, ಮತ್ತೇ ಚಂದನವನ ಉತ್ತಮ ಟ್ರ್ಯಾಕ್ ಗೆ ಮರಳಲು ಸಜ್ಜಾಗುತ್ತಿದೆ. ಚಿತ್ರಮಂದಿರ ತೆರೆಯಲು ಅವಕಾಶ ಕೊಟ್ಟಿದ್ದು, ಸಿನೆಮಾಗಳು ಬಿಡುಗಡೆಗೆ ತಯಾರಾಗಿವೆ.

ಬಹುನಿರೀಕ್ಷಿತ ಸಲಗ ಸಿನಿಮಾ ಶ್ರೀ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ದುನಿಯಾ ವಿಜಯ್ ಆಕ್ಟನ್ ಕಟ್ ಹೇಳಿ ನಾಯಕನಾಗಿ ಅಭಿನಯಿಸಿದ್ದು, ಧನಂಜಯ್, ಸಂಜನಾ ಆನಂದ್ ತಾರಾಬಳಗದಲ್ಲಿ ಮಿಂಚಲಿದ್ದಾರೆ. ಕೆ ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ದುನಿಯಾ ವಿಜಯ್ ಅವರಿಗೆ ಹೊಸದೊಂದು ಅನುಭವ. ಅಭಿಮಾನಿಗಳಲ್ಲೂ ಕುತೂಹಲದ ವಾತಾವರಣ. ನಟನೆಯಿಂದ ನಿರ್ದೇಶನ ಹೇಗಿರುತ್ತೆ ಅಂತ ನೋಡೋ ಹಂಬಲ ಅಭಿಮಾನಿಗಳಿಗೆ. ಈಗಾಗಲೇ ಹಾಡುಗಳು ಸಕ್ಕತ್ ಹಿಟ್ ಆಗಿದ್ದು, ಭರವಸೆ ಮೂಡಿಸಿದೆ. ಚರಣ್ ರಾಜ್ ಮ್ಯುಸಿಕ್ ಚಿತ್ರದ ಪ್ಲಸ್ ಗಳಲ್ಲಿ ಒಂದು. ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರುವ ಸಲಗ ಸಿನೆಮಾ ತಂಡಕ್ಕೆ, ಲಕ್ಷ್ಮಿ ಒಲಿಯಲಿ. ಹಾಗೇನೇ ಯಶಸ್ಸು ಅವರ ಜೊತೇನೆ ಇರಲಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com