ಡಬ್ಬಿಂಗ್ ಹಾಗೂ ಒಂದು ಕಿರಿಕ್ ಲವ್ ಸ್ಟೋರಿ.
ಇಷ್ಟು ದಿವಸ ಡಬ್ಬಿಂಗ್ ಬೇಡವೆಂದು ಬೊಬ್ಬೆ ಹೊಡೆಯುತ್ತಿದ ಕನ್ನಡ ಚಿತ್ರರಂಗ KGF ಆಗಮನದಿಂದ ತನ್ನ ಎಲ್ಲಾ ಅಭದ್ರತೆಯಿಂದ ಹೊರಬಂದು ಕೊಂಚ ನೀರಾಳವಂದಂತೆ ಕಾಣುತ್ತಿದೆ. ಡಬ್ಬಿಂಗ್ನಿಂದ ತನ್ನಲ್ಲಿ ನಿರುದ್ಯೋಗಿತನ ಹೆಚ್ಚುವುದೆಂದು ನೀಡುತಿದ್ದ ಕಾರಣವ ಅರ್ಥೈಸುವುದು ಸ್ವಲ್ಪ ಕಠಿಣವೇ. ನಾ ಕಂಡಂತೆ ಡಬ್ಬಿಂಗ್ನಿಂದ ಒಂದಿಷ್ಟು ಬರಹಗಾರರಿಗೆ, ಹಿನ್ನಲೆ ಗಾಯಕರಿಗೆ , ವೋಯಿಸ್ ಆರ್ಟಿಸ್ಟ್ ಗಳಿಗೆ ಉದ್ಯೋಗವಂತು ಹೆಚ್ಚಾಗುತ್ತದೆ. ಬಹು ಮುಖ್ಯವಾಗಿ ನಮ್ಮಲ್ಲಿನ productivity ಜಾಸ್ತಿ ಆಗುತಲ್ಲೇ, ಸಿನೆಮಾಗಳು ತನ್ನ ಮೂಲ ರೂಪದಲ್ಲೇ ಡಬ್ ಆಗಿಬಂದರೆ ಇಲ್ಲಿ ಅದನ್ನು ಪುನಃ ರಿಮೇಕ್ ಮಾಡುವವರು ಕಡಿಮೆ ಆಗುತ್ತಾರೆ , ಹೆಚ್ಚಾಗಿ ನಮ್ಮ ಮಣ್ಣಿನ ಸ್ವಚಂದ ಕಥೆಗಳಿಗೆ ಪರೆದೆ ಭಾಗ್ಯ ಸಿಗುತ್ತದೆ. ಸ್ವಮೇಕ್ ಸಿನೆಮಾಗಳಿಂದಲೇ ಒಂದು ಚಿತ್ರರಂಗವನ್ನು ಶಿಖರಕ್ಕೆ ಕೊಂಡೊಯಲ್ಲೂ ಸಾಧ್ಯ.
ಈಗ ಒಂದು ಕಿರಿಕ್ ಲವ್ ಸ್ಟೋರಿ ಬಗ್ಗೆ ಮಾತಾಡೋಣ. ಮಲಯಾಳಂ ಮಣ್ಣಿನ ಚಿತ್ರಗಳೆಂದರೆ ನೆನಪಾಗೋದು ನೈಜ್ಯ, ಹಸಿರು ಭರಿತ ಚಿತ್ರಗಳು. ಆದರೆ ಇದು ಅವೆಲ್ಲಕ್ಕಿಂತ ಭಿನ್ನ .ಅನಂದಮ್ ಚಿತ್ರದ ದೊಡ್ಡ ಅಭಿಮಾನಿಯಾದ ನಂಗೆ ಇದು ಹಳಸಿದ ಹಲಸಿನಂತೆ ಖಂಡಿತ. ಹಲವು ತೊಳೆಗಳಿದ್ದರೆ ಏನು ಸಿಹಿಯೇ ಇಲ್ಲದಿದ್ದರೆ ಏನು ಪ್ರಯೋಜನ.
Plot
ಇಡೀ ಚಿತ್ರ ಒಂದು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತದೆ. ಡಾನ್ ಬಾಸ್ಕೋ ಶಾಲೆಯಲ್ಲಿ 11 ತರಗತಿಯ ಮೊದಲನೇ ದಿನದಿಂದ ಶುರುವಾಗುವ ಚಿತ್ರ 12 ತರಗತಿಯ ಕೊನೆಯ ದಿವಸದಂದು ನಿಲ್ಲುತ್ತದೆ.
Actors
ಕಣ್ಣು ಹೊಡೆದು ಇಡೀ ದೇಶದ ಮನ ಗೆದ್ದಿದ್ದ ಪ್ರಿಯಾ ವಾರಿಯರ್ ಅಂದುಕೊಂಡಿದಕ್ಕಿಂತ ಚೆನ್ನಾಗಿ ನಟಿಸಿದ್ದಾರೆ, ರೋಷನ್ ಈಡಿ ಚಿತ್ರವನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ. ಗದಾ ಪಾತ್ರಧರಿಗೆ ಇಲ್ಲಿ ನಾಯಕಿಯ ಪಟ್ಟ .ಇನ್ನು ಸ್ನೇಹಿತರ ಪಾತ್ರಧಾರಿಗಳು ತಮ್ಮ ವಿಭಿನ್ನ ಮ್ಯಾನರಿಸಮ್ ಮೂಲಕ ಗಮನ ಸೆಳೆಯುತ್ತಾರೆ. ಪಿ ಇ ಸಾರ್ ನ ಸ್ವಾಗ್ ನಗೆಗಡಲಲ್ಲಿ ತೇಲಿಸುತ್ತದೆ.ಉಳಿದಂತೆ ಇತರ ಪಾತ್ರಧಾರಿಗಳು ಚೊಕ್ಕವಾಗಿ ನಟಿಸಿದ್ದಾರೆ.
Story and screenplay
ಕಥೆಯಲ್ಲಿ ಕೃತಕತೆ ಇದ್ದರು ಕೂರೋ ಅಷ್ಟು ಗಂಟೆ ಬೋರ್ ಹೊಡಿಸುವುದಿಲ್ಲ.
ಚಿತ್ರಕಥೆಯಲ್ಲಿ ಕೊಂಚ ವೇಗವಿದೆ. ಕೆಲವೊಂದು ಕಡೆ ಹೊಸತನದ ಹಾಸ್ಯಗಳು ನಗೆಗಡಲಿನೊಳಗೆ ಇಳಿಸುತ್ತದೆ.
ಕೊನೆಯಲ್ಲಾಗುವ ದುರಂತ ಅಂತ್ಯ ಚಿತ್ರ ಕಥೆಯಲ್ಲಿರುವ ದೊಡ್ಡ ಟ್ವಿಸ್ಟ್.
Direction and cinematography
ನಿರ್ದೇಶಕರು ಕಲಾವಿದರ ಆಯ್ಕೆಯಲ್ಲೂ,ಅವರಿಂದ ನಟನೆ ತೆಗೆಸುವಲ್ಲೂ ಯಶ ಕಂಡಿದ್ದಾರೆ. ನಿರ್ದೇಶಕರ ಪಿಯು ಕಾಲೇಜಿನ ಪರಿಕಲ್ಪನೆಯೇ ಮೆಚ್ಚಬೇಕು ಯಾಕೆಂದರೆ ನಾನಂತು ಇವು ಯಾವುದನ್ನು ಕಂಡಿಲ್ಲ.
ಛಾಯಾಗ್ರಹಣ ಸಹಜವಾಗೂ ಸುಂದರವಾಗೂ ಮೂಡಿ ಬಂದಿದೆ ಮುಖ್ಯವಾಗಿ ಹಾಡುಗಳಲ್ಲಿ ಗಮನ ಸೆಳೆಯುತ್ತದೆ
Music
ಇದು ಈ ಸಿನಿಮಾದ ಪ್ಲಸ್ ಪಾಯಿಂಟ್ ಪ್ರತಿಯೊಂದು ಹಾಡು ಕೂಡ ಕಿವಿಗೆ ಮಧುರವೆನಿಸುತ್ತದೆ.ಕನ್ನಡದಲ್ಲಿ ಬಂದಿರೊ ಡಬ್ ಸಿನೆಮಾಗಳಲ್ಲಿ ಇದರೆ ಹಾಡು ಮಾತ್ರ ಚನ್ನಾಗಿರೋದು ಅನಿಸುತ್ತೇ .ಕನ್ನಡದ ಸಾಹಿತ್ಯ ಕೂಡ ಕೇಳುವಸ್ಟು ಚೆನ್ನಾಗಿದೆ. ಡಬ್ಬಿಂಗ್ ಎಲ್ಲೂ ಸಿನೆಮಾನ ಹಾಳು ಮಾಡದಷ್ಟು ಚೆನ್ನಾಗಿದೆ.
Final verdict
ಇದು ಕುಟುಂಬದವರಿಗೆ ಹೇಳಿಮಾಡಿಸಿದ ಚಿತ್ರವಲ್ಲ.ಹದಿ ಹರೆಯದವರಿಗೆ ಕಚಗುಳಿ ನೀಡುವ ಚಿತ್ರ.