ಇಂದು “ದ್ರೋಣ” ನ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ

Published on

373 Views

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ನಾಯಕನಾಗಿ ಕಾಣಿಸಿಕೊಂಡಿರುವ ದ್ರೋಣ ಚಿತ್ರದ ಮೊದಲ
ಲಿರಿಕಲ್ ವಿಡಿಯೋ ಇಂದು ಬಿಡುಗಡೆಯಾಗಲಿದೆ. ಡಾಲ್ಫಿನ್
ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ಮಹಾದೇವ್,ಸಂಗಮೇಶ್ ಬಿ.
ಶೇಶು ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಈ ಚಿತ್ರವನ್ನು
ಪ್ರಮೋದ್ ಚಕ್ರವರ್ತಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು
ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರಾಮ್ ಕ್ರಿಶ್​​​ ಎಂಬುವವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಇನಿಯಾ
ಎಂಬುವವರು ಜೋಡಿಯಾಗಿ ಕಾಣಿಸಿಕೊಂಡಿದ್ದು, ಇನ್ನುಳಿದಂತೆ
ಜಗದೀಶ್ ಎಸ್. ವಾಲಿ ಅವರ ಛಾಯಾಗ್ರಹಣ, ಬಸವರಾಜ್ ಅರಸ್
ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com