ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೂತನ ಚಿತ್ರಕ್ಕೆ ಚಾಲನೆ
ಮಹೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಚಂದ್ರಶೇಖರ ಪೆÇೀದಾಲಿ ಅವರು ನಿರ್ಮಿಸುತ್ತಿರುವ `ಪೆÇ್ರಡಕ್ಷನ್ ನಂ 1` ನೂತನ ಚಿತ್ರದ ಮುಹೂರ್ತ ಸಮರಂಭ ಇತ್ತೀಚೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಕಿರಿಕ್ ಕೀರ್ತಿ, ವಸಿಷ್ಠ ಸಿಂಹ, ತ್ರಿಭುವನ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಅನಿಲ್ ಕೆ ಗೌಡ ನಿರ್ದೇಶನದ ಈ ಚಿತ್ರಕ್ಕೆ ಹುಬ್ಬಳ್ಳಿ, ಬೆಂಗಳೂರು ಮುಂತಾದ ಕಡೆ 50ದಿನಗಳ ಚಿತ್ರೀಕರಣ ನಡೆಯಲಿದೆ. ಋತ್ವಿಕ್ ಮುರಳೀಧರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣವಿದೆ.
ಮಧುಕುಮಾರ್ ಸಂಕಲನವಿರುವ ಈ ಚಿತ್ರದಲ್ಲಿ ಧನುಷ್(ಹೊಸ ಪರಿಚಯ), ದಿವ್ಯ (ಹುಲಿರಾಯ), ಧರ್ಮಣ್ಣ ಮುಂತಾದವರ ತಾರಾಬಳಗವಿದೆ.