ಅಂಗಾಸನ ರೆಸಾರ್ಟ್ ನಲ್ಲಿ ‘ಇಬ್ಬರ ನಡುವಿನ ಮುದ್ದಿನ ರಾಣಿ’ ಚಿತ್ರಕ್ಕೆ ಚಾಲನೆ.

Published on

341 Views

ಕೊರೋನ ಆರ್ಭಟದಿಂದ ಮಂಕಾಗಿದ್ದ ಕನ್ನಡ ಚಲನಚಿತ್ರರಂಗ ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ.
ಸಾಕಷ್ಟು ನೂತನ ಚಿತ್ರಗಳು ಕೆಲವು ದಿನಗಳಿಂದ ಆರಂಭವಾಗುತ್ತಿದೆ.‌
ಈ ಸಾಲಿಗೆ ಸೇರ್ಪಡೆಯಾಗಿರುವ ಮತ್ತೊಂದು ನೂತನ ಚಿತ್ರ ‘ಇಬ್ಬರ ನಡುವಿನ‌ ಮುದ್ದಿನ ರಾಣಿ’.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಳ್ಳಾಪುರ ಬಳಿಯಿರುವ ಅಂಗಾಸನ ರೆಸಾರ್ಟ್ ನಲ್ಲಿ ನೆರವೇರಿತು.
ಚಿತ್ರದ ಮೊದಲ ಸನ್ನಿವೇಶಕ್ಕೆ ysrcp state joint Secretary ಕರ್ಮೂರು ವೆಂಕಟ ರೆಡ್ಡಿ ಆರಂಭ ಫಲಕ ತೋರುವ ಮೂಲಕ ಚಾಲನೆ ‌ನೀಡಿದರು.
ಕನ್ನಡ ‌ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೌರಭ್ ಕಿಶೋರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಪಿ.ಎಂ.ಆರ್ ಕೋಣ್ಣಾರೆಡ್ಡಿ ಈ ಚಿತ್ರದ ಸಹ ನಿರ್ಮಾಪಕರು. ವಿಜಯ್ ಕುಮಾರ್ ಹಾಗೂ ಮಧುಬಾಬು ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರೊಮ್ಯಾಂಟಿಕ್ ಲವ್ ಸ್ಟೋರಿ ಆಧಾರಿತ ಕಥಾಹಂದರ ಹೊಂದಿರುವ ಈ‌‌ ಚಿತ್ರವನ್ನು ಎಂ.ಎಸ್.ಎನ್ ರಾಜಾ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.

ಬೆಂಗಳೂರು, ದೊಡ್ಡಬಳ್ಳಾಪುರ, ಮಡಿಕೇರಿ ಮುಂತಾದ ಕಡೆ ೧೫ ‌ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ನಾಲ್ಕು ಹಾಡುಗಳಿರುವ ಈ‌ ಚಿತ್ರಕ್ಕೆ ಎಂ.ಎಂ.ಮೋಹನ್ ಸಂಗೀತ ನೀಡುತ್ತಿದ್ದಾರೆ. ಬಾಲು‌ ಸುರೇಶ್ ಛಾಯಾಗ್ರಹಣ, ಸತ್ಯಬಾಬು ಸಂಕಲನ ಹಾಗೂ ಭೂಪತಿ ಯಾದಗಿರಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ನಿರ್ಮಾಪಕ ಸೌರಭ್ ಕಿಶೋರ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಆಕಾಶ್ ಆರಾಧ್ಯ, ದಿವ್ಯ ರಾವ್, ರೂಪ ರಾಯಪ್ಪ, ಸಂಜನ ನಾಯ್ಡು, ಮಹೇಂದರ್, ವಿಕ್ಚರಿ ವಾಸು, ಶೇಷಗಿರಿ, ಅಂಜಲಿ, ಲೋರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com