ಕನ್ನಡ ವರ್ಣಮಾಲೆಯಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಕ್ಯಾಲೆಂಡರ್!
ಬಾಲ್ಯದಿಂದಲೂ ಅ=ಅರಸ, ಆ= ಆಕಾಶ ಎಂದು ಕಂಠಪಾಠ ಮಾಡುತ್ತಲೇ ಕನ್ನಡ ಕಲಿತವರು ನಾವೆಲ್ಲ. ಇದೀಗ ಡಾ.ವಿಷ್ಣು ಅಭಿಮಾನಿಗಳಿಗಾಗಿ ಅದೇ ವರ್ಣಮಾಲೆಯನ್ನು ಸ್ವಲ್ಪ ವಿಭಿನ್ನವಾಗಿ ನೀಡಲಾಗಿದೆ.
ಅ= ಅಸಾಧ್ಯ ಅಳಿಯ
ಆ= ಆಪ್ತಮಿತ್ರ
ಇ= ಇಂದಿನ ರಾಮಾಯಣ
ಈ= ಈ ಜೀವ ನಿನಗಾಗಿ
ಹೀಗೆ.. ಅ ಅಕ್ಷರದಿಂದ ಳ ಅಕ್ಷರದವರೆಗೆ ಇರುವಂತಹ ಎಲ್ಲಾ ಡಾ.ವಿಷ್ಣುವರ್ಧನ್ ಅವರ ಚಿತ್ರಗಳ ಹೆಸರುಗಳನ್ನು ಕನ್ನಡ ವರ್ಣಮಾಲೆಯೊಂದಿಗೆ ಜೋಡಿಸಿದ ವಿಶಿಷ್ಠ ಪ್ರಯತ್ನ ಇದಾಗಿದೆ. ಕೇವಲ ವರ್ಣಮಾಲೆ ಮಾತ್ರವಲ್ಲದೆ ಕನ್ನಡಿಗರ ಹೆಗ್ಗುರುತಾದ ಹಂಪೆಯ ಕಲ್ಲಿನ ರಥವನ್ನು ಈ ಕ್ಯಾಲೆಂಡರ್ ನ ವಿನ್ಯಾಸಕ್ಕೆ ಬಳಸಲಾಗಿದೆ. ಪ್ರತಿ ಪುಟದಲ್ಲೂ ಡಾ.ವಿಷ್ಣುವರ್ಧನ್ ಅವರ ಅಪರೂಪದ ಫೋಟೋಗಳಿವೆ. ಪ್ರತಿ ತಿಂಗಳಿಗೂ ವಿಶೇಷ ಬಣ್ಣಗಳ ಸಂಯೋಜನೆ ಮಾಡಲಾಗಿದೆ. ಜೊತೆಗೆ ರಜಾದಿನಗಳು, ಅಮಾವಾಸೆ, ಹುಣ್ಣಿಮೆ, ಹಬ್ಬಗಳು, ಗಣ್ಯರ ಜನ್ಮದಿನದಗಳನ್ನು ಒಳಗೊಂಡಿರುವ ಈ ಕ್ಯಾಲೆಂಡರ್ ವೃತಿಪರ ಕ್ಯಾಲೆಂಡರ್ ಗಳಿಗೆ ಸರಿ ಸಮಾನವಾಗಿ ಮೂಡಿಬಂದಿದೆ.
ಮತ್ತೊಂದು ವಿಶೇಷವೆಂದರೆ ಕೋಟಿಗೊಬ್ಬ ಕ್ಯಾಲೆಂಡರ್ ಸರಣಿ ಶುರುವಾಗಿ 2021ಕ್ಕೆ 10 ವರ್ಷವಾಯಿತು. ದಿವಂಗತ ಅನಂತಕುಮಾರ್ ಮತ್ತು ಡಾ.ಭಾರತಿ ವಿಷ್ಣುವರ್ಧನ್ ಅವರು ಈ ಕ್ಯಾಲೆಂಡರ್ ಸರಣಿಯ ಮೊದಲನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದರು. ಅಂದಿನಿಂದ ಇಂದಿನವರೆಗೆ ಹತ್ತು ವರ್ಷಗಳ ಕಾಲ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನೆಮನದ ಮಾತಾಗಿದೆ ಈ ಕ್ಯಾಲೆಂಡರ್.
ಇಂದು ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ 2021ರ ಕೋಟಿಗೊಬ್ಬ ಕ್ಯಾಲೆಂಡರ್ ಲೋಕಾರ್ಪಣೆಗೊಂಡಿದೆ.
ವೀರಕಪುತ್ರ ಶ್ರೀನಿವಾಸ
ಅಧ್ಯಕ್ಷರು
ಡಾ.ವಿಷ್ಣು ಸೇನಾ ಸಮಿತಿ