ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬರಲಿದೆ ‘ಭಾಗ್ಯವಂತರು’
‘ಭಾಗ್ಯವಂತರು’ ಒಂದು ಕಾಲದಲ್ಲಿ ಸೂಪರ್ ಹಿಟ್ ಆದ ಸಿನಿಮಾ ಆ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಹಾಗೂ ಬಿ.ಸರೋಜಾದೇವಿ ಅಭಿನಯಿಸಿದ್ದರು. ಈಗ ಹಳೆ ‘ಭಾಗ್ಯವಂತರು’ ಸಿನಿಮಾ ಹೊಸ ರೀತಿಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. ‘ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಮೇಲೆ ವಿಪರೀತ ಗೌರವ. ನನಗೆ ಅವರೇ ಭಾಗ್ಯವಂತರು.
ಹಾಗಾಗಿ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ವಿತರಕರು, ಸಿನಿಮಾ ನಿರ್ಮಾಪಕರಾದ ಮುನಿರಾಜು. ದ್ವಾರಕೀಶ್ ನಿರ್ಮಾಣ ಮಾಡಿ, ಭಾರ್ಗವ್ ನಿರ್ದೇಶಿಸಿದ್ದ ‘ಭಾಗ್ಯವಂತರು’ ಹೊಸ ತಂತ್ರಜ್ಞಾನದೊಂದಿಗೆ ಕೆಲವು ಮಾಲ್ ಗಳಲ್ಲಿ ಸೇರಿದಂತೆ ರಾಜ್ಯದ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸುವ ಯೋಜನೆ ಮುನಿರಾಜುವರದು. ರಾಜ್‍ಕುಮಾರ್ ಅವರ ಹಲವು ಸಿನಿಮಾಗಳು ಮರುಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.