Dr Rajkumar grandson guru Rajkumar changed his name

Published on

1341 Views

ಹೆಸರು ಬದಲಾಯಿಸಿಕೊಂಡ ಅಣ್ಣಾವ್ರ ಮೊಮ್ಮಗ ಗುರು
Guru Rajkumar Changed his name

ಮುತ್ತು ರಾಜ್ – ರಾಜ್ ಕುಮಾರ್, ಸಂಪತ್ ಕುಮಾರ್ – ವಿಷ್ಣುವರ್ಧನ್, ನಾಗರಕಟ್ಟೆ ಶಂಕರ – ಶಂಕರ್ ನಾಗ್ ಆದ ಹಾಗೆ ಈಗ ಗುರು ರಾಜ್ ಕುಮಾರ್ ‘ಯುವ ರಾಜ್ ಕುಮಾರ್’ ಆಗಿದ್ದಾರೆ. ಹೌದು, ಗುರು ಈಗ ‘ಯುವ’ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ತಮ್ಮ ಮಗನ ಈ ವಿಷಯವನ್ನು ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೆಸರು ಬದಲಿಸಿಕೊಂಡ ಯುವ ರಾಜ್ ಕುಮಾರ್ ಅವರಿಗೆ ದೊಡ್ಮೆನೆ ಅಭಿಮಾನಿಗಳು ಶುಭ ಕೋರಿದ್ದಾರೆ.

ಸ್ಮೋಕಿಂಗ್ ಬೇಬಿ, ಹೇಗಿದ್ಲು ಹೇಗಾದಳು ಗೊತ್ತಾ?

ರಾಘವೇಂದ್ರ ರಾಜ್ ಕುಮಾರ್ ಮೊದಲ ಪುತ್ರ ವಿನಯ್ ರಾಜ್ ಕುಮಾರ್ ಈಗಾಗಲೇ ಸಿನಿಮಾ ರಂಗದಲ್ಲಿ ‘ಸಿದ್ಧಾರ್ಥ’, ‘ರನ್ ಅಂಟೋನಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈಗ ಅವರು ‘ಅನಂತು ವರ್ಸಸ್ ನುರ್ಸತ್’ ಸಿನಿಮಾ ಮಾಡುತ್ತಿದ್ದಾರೆ. ಗುರು ಹೀರೋ ಆಗದಿದ್ದರು, ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಇನ್ನೂ ಹೆಸರು ಬದಲಾದ ಬಳಿಕ ‘ಯುವ ರಾಜ್ ಕುಮಾರ್’ ಆಗಿ ಗುರು ಹೀರೋ ಆಗಿ ಲಾಂಚ್ ಆಗುತ್ತಾರೆ ಎನ್ನುವ ನಿರೀಕ್ಷೆ ಕೂಡ ಹೆಚ್ಚಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com