‘ರಾಂಗ್ ರೂಟ್‍’ ಸಿನಿಮಾದ ಹಾಡುಗಳ ಬಿಡುಗಡೆ.

Published on

465 Views

ಬಿಗ್‍ಬಾಸ್ ವಿಜೇತ ಪ್ರಥಮ್ ಅವರು ರಾಂಗ್ ರೂಟ್ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಡಾ.ಬ್ಯಾಂಕ್ ಪರಶುರಾಮ್ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳನ್ನು ಒಗ್ಗೂಡಿಸಿ ಅದಕ್ಕೆ ಚಿತ್ರದ ರೂಪ ಕೊಟ್ಟಿದ್ದಾರೆ, ಒಬ್ಬ ಅಮಾಯಕ ಹುಡುಗನನ್ನು ಪ್ರೀತಿಸುವ ನಾಟಕವಾಡಿ ಅವನಿಗೆ ಮೋಸ ಮಾಡಿದಾಗ ಅವನು ಮುಂದೆ ಯಾವ ರೀತಿ ಕೆಟ್ಟ ದಾರಿ ತುಳಿಯುತ್ತದೆ, ಅವನು ಸಾಗುವ ಒಂಭತ್ತು ಹಾದಿಯಲ್ಲಿ ಅವನು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದೇ ರಾಂಗ್‍ರೂಟ್9ನ ಕಥಾವಸ್ತು.

ಮೊನ್ನೆ ಸಿಡಿಯನ್ನು ಬಿಡುಗಡೆ ಮಾಡಿದ ಪ್ರಥಮ್ ಮಾತನಾಡಿ, ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕನೇ ನಿಜವಾದ ಹೀರೋ, ಹಾಡುಗಳು ಹಿಟ್ ಆದರೆ ಚಿತ್ರ ಸಕ್ಸಸ್ ಆಗುತ್ತದೆ, ಈ ಚಿತ್ರದ ಸಂಗೀತ ನಿರ್ದೇಶಕರು ಉತ್ತಮ ಹಾಡುಗಳನ್ನು ನೀಡಿದ್ದು ಅದು ಚಿತ್ರದ ಗೆಲುವಿಗೆ ಪ್ಲಸ್ ಪಾಯಿಂಟ್‍ನಂತಿದೆ ಎಂದರು. ರಾಂಗ್ ರೂಟ್ 9 ಚಿತ್ರದ ಚಿತ್ರೀಕರಣವನ್ನು ಮೈಸೂರು, ಮಡಿಕೇರಿ, ಗೊಮ್ಮಟಗಿರಿ ಸುತ್ತ ಮುತ್ತ ಚಿತ್ರೀಕರಿಸಿದ್ದು, ಪರ್ಚಂಡಿ, ಚಟ ಚಿತ್ರದಲ್ಲಿ ಹೀರೋ ಆಗಿದ್ದ ಮಹೇಶ್‍ದೇವ್ ಈ ಚಿತ್ರದ ನಾಯಕನಟನಾಗಿದ್ದಾರೆ, ವಿದ್ಯಾಗೌಡ ಎಂಬ ನವ ಪ್ರತಿಭೆ ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಸಂತೋಷ್ ಸೋಮಶೇಖರ್ ಖಳನಟನಾಗಿ ಮಿಂಚಲು ಹೊರಟಿದ್ದಾನೆ.

ಡಾ.ಬ್ಯಾಂಕ್ ಪರಶುರಾಮ್ ಅವರೇ ಈ ಚಿತ್ರದ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿರುವುದೇ ಅಲ್ಲದೆ ಬಂಡವಾಳವನ್ನು ಹೂಡಿದ್ದಾರೆ. ಮಂಜುಕವಿ ಸಾಹಿತ್ಯ, ಸಂಗೀತ ಒದಗಿಸಿದ್ದಾರೆ. ದೇವು ಅವರ ಛಾಯಗ್ರಹಣ, ಜೊಪ್ಸನ್ ಅರ್ನಾಲ್ ್ಡಪಿಂಟೊ ಅವರ ಸಂಕಲನ, ನಿತಿನ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಇಂಪಾದ ಹಾಡುಗಳು, ವಿಶಿಷ್ಟ ರೀತಿಯ ಕಥೆ, ಮನ ಮೆಚ್ಚುವ ಸಂಭಾಷಣೆಗಳು ಈ ಚಿತ್ರದಲ್ಲಿದ್ದು ರಾಂಗ್ ರೂಟ್ ಚಿತ್ರವು ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂಬುದು ನಂಬಿರುವ ನಂಬಿಕೆಯು ಸುಳ್ಳಾಗದೆ ಗೆಲುವು ಸಿಗುವಂತಾಗಲಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com