ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಿನುಗಾರನ ಕುಟುಂಬಕ್ಕೆ ಮೊಸಂಬಿ ಜೂಸ್ ಮಾರಿದ “ಡಾಲಿ ಧನಂಜಯ್”

Published on

310 Views

ದೋಣಿಹತ್ತಿ ಮೀನುಹಿಡಿದು ಜೀವನ ಸಾಗಿಸುತ್ತಿದ್ದ ಮನೆಯ ಯಜಮಾನ ರವಿ ಸ್ಟ್ರೋಕ್ ನಿಂದಾಗಿ ಬಲಗೈ ಸ್ವಾದೀನ ಕಳೆದುಕೊಂಡಿರುವುದರಿಂದ ತನ್ನ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದರೆ ಅವರ ಇಬ್ಬರು ಹೆಣ್ಣುಮಕ್ಕಳೇ ತಂದೆಯ ಹಾಗೆ ಬೆಳಗಿನ ಜಾವ ಐದುಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನುಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದರ ಜೊತೆಗೆ ತಮ್ಮಿಬ್ಬರ ವಿದ್ಯಾಭ್ಯಾಸವನ್ನು ಬಿಡದೆ ಸಂಸಾರವನ್ನು ನಡೆಸುತ್ತಾಬಂದಿದ್ದಾರೆ.

ಈಗ ಕುಟುಂಬದ ನಿರ್ವಹಣೆಯ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಆ ಮಕ್ಕಳಿಗೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇಂಥಹ ಕುಟುಂಬಕ್ಕೆ ಸಹಾಯ ಹಸ್ತನೀಡಲು ಈ ವಾರದ “ಸದಾ ನಿಮ್ಮೊಂದಿಗೆ” ಸಂಚಿಕೆಯಲ್ಲಿ ಟಗರು ಖ್ಯಾತಿಯ “ಡಾಲಿ ಧನಂಜಯ್” ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಕೆಲಸಮಾಡಿ ಸಂಕಷ್ಟದಲ್ಲಿರುವ ರವಿ ಕುಟುಂಬಕ್ಕೆ ಕೈ ಜೋಡಿಸಿದ್ದಾರೆ.

ಎನ್ ಆರ್ ಕಾಲೋನಿಯ ಬಸ್ ನಿಲ್ದಾಣದಬಳಿಯಲ್ಲಿ ಮೂಸಂಬಿ ಜ್ಯೂಸ್ ಮಾರುತ್ತಾ ಹೆಲ್ತ್‍ಟಿಪ್ಸ್ ಕೊಡುತ್ತಾ ಡಾಲಿ ಧನಂಜಯ್ ಹಣವನ್ನು ಸಂಗ್ರಹಿಸಿ ರವಿ ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಕೈ ಜೋಡಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com