ಉದಯ ಟಿವಿಯಲ್ಲಿ ದೀಪಾವಳಿ ಸಂಭ್ರಮ ವಾರವಿಡಿ ಮನರಂಜನೆಯ ರಸದೌತಣ
ಮನರಂಜನೆಗೆ ಮತ್ತೊಂದು ಹೆಸರೇ ಉದಯ ಟಿವಿ. ಧಾರಾವಾಹಿಗಳ ವಿಭಾಗದಲ್ಲೂ ತನ್ನದೆಯಾದ ಛಾಪು ಮೂಡಿಸಿದೆ. ಮನಸಾರೆ, ಕಾವ್ಯಾಂಜಲಿ,ಯಾರಿವಳು ಆಕೃತಿ , ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳ ಕಥೆಗಳು ತನ್ನದೇ ವೈವಿಧ್ಯತೆಗೆ ಜನರ ಮನಸ್ಸನ್ನ ಗೆದ್ದಿವೆ. ಹಾಗೇ ಪ್ರತಿಯೊಂದು ಹಬ್ಬ-ಹರಿದಿನಗಳನ್ನು ಸಂಭ್ರಮದಿಂದ ಆಚರಿಸಿ ವೀಕ್ಷಕರಿಗೆ ಮನರಂಜನೇಯ ರಸದೌತಣವನ್ನು ನೀಡುತ್ತಾ ಬಂದಿದೆ. ಈಗ ಎಲ್ಲಡೆ ದೀಪಗಳ ಹಬ್ಬದ ಸಂಭ್ರಮ. ಈ ದೀಪಾವಳಿಯನ್ನು ಉದಯ ಟಿವಿಯ ಧಾರಾವಾಹಿಗಳು ಯಾವರೀತಿಯಿಂದ ಆಚರಿಸುತ್ತವೆ ಎಂಬುದನ್ನು ನೋಡೋಣ.
ಕಸ್ತೂರಿ ನೀವಾಸ 300ರ ಸಂಬ್ರಮ
ದೀಪಾವಳಿ ಮುನ್ನುಡಿ 13 ರಿಂದ ಪ್ರಾರಂಭವಾಗುತ್ತದೆ, ಕಸ್ತೂರಿ ನಿವಾಸ ಕುಟುಂಬವು ದೀಪಾವಳಿ ಆಚರಿಸಲು ನರ‍್ಧರಿಸಿದೆ. 16 ರಂದು ನಡೆಯುವ ಆಚರಣೆಗಳಲ್ಲಿ ಸಾಂಪ್ರದಾಯಿಕ ಎಣ್ಣೆ ಸ್ನಾನ ವಿಶೇಷವಾಗಿದೆ. ಪರ‍್ವತಿ ದೀಪಾವಳಿಗೆ ಸಂಬಂಧಿಸಿದ ಶಾಸ್ತ್ರಗಳನ್ನು ಮಾಡುತ್ತಾಳೆ. ಸತ್ಯಭಾಮಾ ಕೇಶವ್ ಅವರು ಮೃಧುಲಾ ಮತ್ತು ನಾಗವೇಣಿಗೆ ಒಂದೇ ಬಣ್ಣದ ಸೀರೆಗಳನ್ನು ಕೊಡುತ್ತಾರೆ ಮತ್ತು ಸ್ವತ: ಅವಳು ಅದೇ ಬಣ್ಣದ ಸೀರೆಯನ್ನು ಖರಿದಿಸುತ್ತಾಳೆ. ರ‍್ವಮಂಗಳ ಇವರ ಸಂಬಂಧವನ್ನು ವಿಷಪೂರಿತಗೊಳಿಸಲು ಪ್ರಯತ್ನಿಸುತ್ತಾಳೆ, ಅಲ್ಲದೆ ಅವಳು ಮೃದುಲಾಳ ಮೇಲೆ ಪಟಾಕಿಗಳನ್ನು ಎಸೆದು ಕೊಲ್ಲಲು ಯೋಜಿಸುತ್ತಾಳೆ. ಅವಳ ಯೋಜನೆ ಸಫಲವಾಗುತ್ತಾ? ಎಂಬುದು ಈ ಸಂಚಿಕೆಗಳಲ್ಲಿ ತಿಳಿಯುತ್ತದೆ.
ಅತ್ತೆ ಸೊಸೆ ಸಂಬಂಧದ ಕಥೆಯನ್ನ ಹೆಣೆದ, ಅಂದಿನ ನಂಬಿಕೆಗಳು ಇಂದಿನ ಆಧುನಿಕ ಆಲೋಚನೆಗಳ ಸಮ್ಮಿಶ್ರವೇ ಈ ಧಾರಾವಾಹಿ ಕಸ್ತೂರಿನಿವಾಸ ಇದೀಗ ಈ ಧಾರಾವಾಹಿಗೆ 300ರ ಸಂಭ್ರಮ.
ದೇವಿ ಪ್ರೋಡಕ್ಷನ್ಸ್ ನರ‍್ಮಾಣ ಮಾಡುತ್ತಿರೋ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ..
‘’ಮೃದುಲಾ ಪಾತ್ರ ನನ್ನ ವೃತ್ತಿ ಜೀವನದ ಅತ್ಯಂತ ಅಚ್ಚು ಮೆಚ್ಚಿನ ಪಾತ್ರ. ಮೃದುಲಾ ಗೆ ಅಪ್ಪ ಅಂದ್ರೆ ಜಗತ್ತು , ದೊಡ್ಡ ಮನೆಗೆ ಸೊಸೆ ಆಗಬೇಕು ಅಂತಿದ್ದ ಅವಳ ಕನಸನ್ನ ನಿಜ ಮಾಡಿದ್ದು ಪರ‍್ವತಿಯ ಮನೆ. ಈ ಪಾತ್ರಕ್ಕೆ ತುಂಬ ಸವಾಲುಗಳು ಬರುತ್ತೆ , ಈಗಿನ ಕಾಲದ ಹುಡುಗಿಯಾಗಿ ಅದನ್ನು ನಿಭಾಯಿಸಿ ಗೆಲ್ಲೊಳೆ ಮೃದುಲಾ. ‘’ ಇಂಥಹ ಪಾತ್ರ ನನಗೆ ತುಂಬಾ ಖುಷಿ ತಂದಿದೆ. ಎಂದು ಮೃದುಲಾ ಪಾತ್ರದ ಅಮೃತಾ ರಾಮರ‍್ತಿ ಖುಷಿ ಹಂಚಿಕೊಂಡಿದ್ದಾರೆ.
‘’ಕಸ್ತೂರಿ ನಿವಾಸ ನನ್ನ ಕೂಸು , ಸಂಬಂಧಗಳ ಮೌಲ್ಯಗಳನ್ನ ಸಾರೋ ಒಂದು ಸದಾವಕಾಶ ಈ ಧಾರಾವಾಹಿಯಲ್ಲಿ ಸಿಕ್ಕಿದೆ, ಅತ್ತಿಗೆ ತಾಯಿಯಂತೆ ಅನ್ನೋ ಭಾವನೆ , ಅಪ್ಪನಿಗಿಂತ ಸ್ನೇಹಿತನಿಲ್ಲಾ , ಅಮ್ಮ ಅಂದ್ರೆ ಶಕ್ತಿ , ಈ ರೀತಿ ಪ್ರತಿ ಸಂಬಂಧಕ್ಕೂ ಅದರದೇ ಬೆಲೆ ಕೊಡೋ ಈ ಧಾರಾವಾಹಿ 300 ರ ಸಂಭ್ರಮದಲ್ಲಿದೆ ನನಗೂ ಕೂಡಾ ಖುಷಿ ತಂದಿದೆ ಎಂದು ಕಸ್ತೂರಿ ನಿವಾಸದ ರ‍್ಮಾಪಕಿ ಜಯಶ್ರೀ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹೊಸ ಹೊಸ ತಿರುವುಗಳೊಂದಿಗೆ ಮನರಂಜನೆಯನ್ನ ದುಪ್ಪಟ್ಟು ಮಾಡುವ ಧಾರಾವಾಹಿ ಕಸ್ತೂರಿ ನಿವಾಸ ಉದಯ ಟಿವಿಯಲ್ಲಿ ಸಂಜೆ 7ಕ್ಕೆ ಪ್ರಸಾರವಾಗುತ್ತದೆ.
ಸೇವಂತಿ:
ಸೇವಂತಿ ಮನೆಯಲ್ಲಿ ಲಕ್ಷ್ಮಿ ಪೂಜೆ ಮತ್ತು ದೀಪಾವಳಿಯ ಸಾಕಷ್ಟು ಆಚರಣೆಗಳು ನಡೆಯಲಿವೆ. ಮರು ಮದುವೆಯಾದ ಹೊಸ ದಂಪತಿ ರ‍್ಜುನ್ ಮತ್ತು ಸೇವಂತಿ ಅವರಿಗೆ ಇದು ಮೊದಲ ದೀಪಾವಳಿ. ಶರದ್ ಅಜ್ಜಿಯಿಂದ ಸೇವಂತಿಗೆ ಸಾಕಷ್ಟು ಉಡುಗೊರೆಗಳು ಸಿಗುತ್ತವೆ. ಅನು ಸೇವಂತಿಯ ಮುಖವನ್ನು ಸುಡಲು ಯೋಜನೆ ಮಾಡುತ್ತಾಳೆ. ಅದಕ್ಕಾಗಿ ಅವಳು ಒಂದು ಎಣ್ಣೆಯನ್ನು ತರುತ್ತಾಳೆ. ಆ ಎಣ್ಣೆಗೆ ಬೆಂಕಿ ತಾಗಿದರೆ ಅದು ಸ್ಪೋಟಗೊಳ್ಳುತ್ತದೆ. ಆದರೆ ಈ ಯೋಜನೆಯಲ್ಲಿ ಅನು ಸಫಲವಾಗುತ್ತಾಳಾ? ಸೇವಂತಿ ಬದಕುತ್ತಾಳಾ? ಎಂಬುದು ಈ ದೀಪಾವಳಿಯ ಸಂಚಿಕೆಗಳಲ್ಲಿ ತಿಳಿದು ಬರುತ್ತದೆ.
ಸೇವಂತಿ ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಯಾರಿವಳು:
ದೀಪಾವಳಿ ದಿನದಂದು ಮಾಯಾ ಅಹಲ್ಯಾ ಆಗಿ ಮನೆಗೆ ಬರುತ್ತಾಳೆ. ರ‍್ಮೇಂದ್ರ ಅವರು ಇಷ್ಟು ರ‍್ಷ ಎಲ್ಲಿದ್ದರು ಎಂದು ಆಶ್ರ‍್ಯ ಪಡುತ್ತಾರೆ ಹಾಗೆ ಅವರು ಎಲ್ಲಿದ್ದರು ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಅವನ ವಿಚಾರಣೆಗೆ ಅವಳು ನೀಡಿದ ಉತ್ತರ ದೀಪಾವಳಿಗೆ ಸಂಬಂಧಿಸಿದ ವಿವಿಧ ದಂತಕಥೆಗಳಿಗೆ ಸಂಬಂಧವಿರುತ್ತದೆ. ಅವಳು ನಿಜವಾಗಿ ಅಹಲ್ಯಾಳೇ ಎಂದು ನೋಡಲು ರ‍್ಮೇಂದ್ರ ತನ್ನ ಪರೀಕ್ಷೆಗಳನ್ನು ನಡೆಸುತ್ತಾನೆ. ಈ ಪರೀಕ್ಷೆಗಳಿಗೆ ಶ್ರೇಷ್ಠ ಸಹಾಯ ಮಾಡುತ್ತಾಳೆ. ಎಲ್ಲರೂ ಸಮಾನರು ಎಂದು ಹೇಳುವ ಕಾರಣ ಅಹಲ್ಯಾ ಮನೆಯಲ್ಲಿ ಎಲ್ಲರಿಗೂ ಭೋಜನವನ್ನು ನೀಡುತ್ತಾಳೆ, ಇದು ರ‍್ಮೇಂದ್ರ ಮತ್ತು ಯಾಮಿನಿಯನ್ನು ಕೋಪಗೊಳಿಸುತ್ತದೆ. ಇದರಿಂದ ಮುಂದೇನಾಗುತ್ತದೆ ಎಂಬುದನ್ನು ಈ ದೀಪಾವಳಿಯ ಸಂಚಿಕೆಗಳಲ್ಲಿ ನೋಡಬಹುದಾಗಿದೆ.
ಯಾರಿವಳು ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಕಾವ್ಯಾಂಜಲಿ:
ಅಂಜಲಿ, ಸುಶಾಂತ್ ಮತ್ತು ಕಾವ್ಯಾ ಅವರ ಮದುವೆಯನ್ನು ಸುಶಾಂತನ ಆಶಯಗಳಿಗೆ ವಿರುದ್ಧವಾಗಿ ಪ್ರಾರಂಭಿಸುತ್ತಾರೆ. ವೇದ ಒಂದು ಷರತ್ತಿನ ಮೇರೆಗೆ ಮದುವೆಗೆ ಒಪ್ಪುತ್ತಾಳೆ, ಅಂದರೆ ಅಂಜಲಿ ಮದುವೆಯ ನಂತರ ಸುಶಾಂತ್ ಮತ್ತು ಕಾವ್ಯಾಳ ಜೀವನದಿಂದ ಹೊರನಡೆಯಬೇಕಾಗುತ್ತದೆ. 16 ರಿಂದ ಪ್ರಾರಂಭವಾಗಿ ಈ ಸಂಚಿಕೆಗಳು ಇಡೀ ವಾರವು ವಿವಾಹದ ಸಮಯದಲ್ಲಿ ನಡೆಯುವ ವಿವಿಧ ಶಾಸ್ತ್ರ ಮತ್ತು ಸಮಾರಂಭಗಳ ಬಗ್ಗೆ ಇರುತ್ತದೆ. ಮೆಹಂದಿಯಿಂದ ಹಿಡಿದು ಮಂಗಳಸೂತ್ರವನ್ನು ಕಟ್ಟುವವರೆಗೆ ನಡೆಯುತ್ತದೆ. ಮದುವೆ ಸಂಬ್ರಮದ ಮಧುರ ಕ್ಷಣಗಳು ಈ ದೀಪಾವಳಿಯಲ್ಲಿ ನೋಡಬಹುದು.
ಕಾವ್ಯಾಂಜಲಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಮನಸಾರೆ:
ದೀಪಾವಳಿ ವಾರದಲ್ಲಿ ಯುವನು ಪ್ರರ‍್ಥನಾ ತನ್ನ ಪ್ರೀತಿಯನ್ನು ಸ್ವೀಕರಿಸಲು ಅಂತಿಮವಾಗಿ ನರ‍್ಧರಿಸುತ್ತಾನೆ, ಅವನು ಅವಳನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಾನೆ ಮತ್ತು ಕಲ್ಯಾಣಿಯ ಪಕ್ಕದಲ್ಲಿ ಅವನು ಅವಳಿಗೆ ಪ್ರೀತಿಯನ್ನು ಪ್ರಸ್ತಾಪಿಸುತ್ತಾನೆ. ಅವಳು ಅವನ ಪ್ರೀತಿಯನ್ನು ಸ್ವೀಕರಿಸುತ್ತಾಳೆ ಆಗ ಅವರಲ್ಲಿ ಹೊಸ ಪ್ರಣಯ ಅರಳುತ್ತದೆ. ಆನಂದ್ ಅವರು ಪ್ರರ‍್ಥಾಳನ್ನು ಹೊರತುಪಡಿಸಿ ಎಲ್ಲರಿಗೂ ದೀಪಾವಳಿ ಉಡುಗೊರೆಗಳನ್ನು ನೀಡುತ್ತಾರೆ, ಇದು ಪ್ರರ‍್ಥನಾಳಿಗೆ ತುಂಬಾ ದುಃಖವನ್ನುಂಟುಮಾಡುತ್ತದೆ. ದೇವಕಿ ಪ್ರರ‍್ಥನಾಳಿಗೆ ಆನಂದ್ ಕಡೆಯಿಂದ ಉಡುಗೊರೆಯನ್ನು ಕೊಡಿಸುತ್ತೇನೆಂದು ನರ‍್ಧರಿಸುತ್ತಾಳೆ. ಹಾಗು ಪ್ರರ‍್ಥನಾಳಿಗೆ ಈ ವಿಷಯವಾಗಿ ಮಾತನ್ನು ಕೊಡುತ್ತಾಳೆ. ಪೂಜೆಯ ಸಮಯದಲ್ಲಿ, ವಾಸುಕಿ ತಾನು ಉಟ್ಟ ಸೀರೆಯನ್ನು ಸುಟ್ಟುಹಾಕುತ್ತಾಳೆ ಮತ್ತು ಅವಳನ್ನು ಕೊಲ್ಲಲು ಯತ್ನಿಸಿದಳೆಂದು ಪಾವನಿಯನ್ನು ದೂಷಿಸುತ್ತಾಳೆ.
ಮನಸಾರೆ ಸೋಮವಾರದಿಂದ ಶುಕ್ರವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಹೀಗೆ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ವಾರವೀಡಿ ಆಚರಿಸಿ ಕನ್ನಡದ ಜನೆತೆಗೆ ಮನರಂಜನೆಯ ಮಹಾಪೂರವನ್ನು ನೀಡುತ್ತಿದೆ ಉದಯ ಟಿವಿ.