ಮಂಗಳೂರಿನ ಮಹಾಮಳೆಗೆ ನಿರ್ದೇಶಕ ಸಂತೋಷ್ ಶೆಟ್ಟಿ ಸಾವು

Published on

352 Views

ಮಂಗಳೂರಿನ ಮಹಾಮಳೆಗೆ ನಿರ್ದೇಶಕ ಸಂತೋಷ್ ಶೆಟ್ಟಿ ಸಾವು

ಮಂಗಳೂರಿನಲ್ಲಿ ಕಳೆದ ಒಂದು‌ ದಿನದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದರಿಂದ‌ ಅಪಾರ ಹಾನಿ ಉಂಟಾಗಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾದ ಸೈಕ್ಲೋನ್ ಚಂಡಮಾರುತದ ಪರಿಣಾಮ ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ ಎಂದು ಕೆಲವು ಮೂಲಗಳಿಂದ ಕೇಳಿ ಬಂದಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ‘ ಇದು ಮುಂಗಾರು ಮಳೆಯಷ್ಟೇ , ಸೈಕ್ಲೋನ್ ಪರಿಣಾಮವಲ್ಲ, ಭಯಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಬಂದ ಮಳೆಗೆ ‘ ಕನಸು’ ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಬಲಿಯಾಗಿದ್ದಾರೆ. ಫೋಟೋ ಶೂಟ್ ಮಾಡುವಾಗ ಎಮ್ರಾಯ್ ಫಾಲ್ಸ್ ಗೆ ಬಿದ್ದು ಸಾವನ್ನಪ್ಪಿದ್ದಾರೆ. ಮಂಗಳೂರಿನ ಇನ್ನೊಂದು ಕಡೆಯಲ್ಲಿ ಸ್ಕೂಲ್ ಗೆ ಹೋದ ವಿದ್ಯಾರ್ಥಿ ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿ, ಇಂದು ಬೆಳಿಗ್ಯೆ ಸ್ಕೂಲ್ ಬ್ಯಾಗ್ ಸಮೇತ ಶವ ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಈ ರೀತಿ ಮಳೆಯಾಗಿದ್ದು, ಮಂಗಳೂರು ಕರಾವಳಿಯನ್ನು ನಡುಗಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com