ಸಂಜನಾ ಆರೋಪಕ್ಕೆ ಎದುರೇಟು ನೀಡಿದ ನಿರ್ದೇಶಕ ರವಿ ಶ್ರೀ ವತ್ಸ..!

Published on

498 Views

‘ಗಂಡ ಹೆಂಡತಿ’ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ನನಗೆ ಒತ್ತಾಯಪೂರ್ವಕವಾಗಿ ನಿರ್ದೇಶಕ ರವಿ ಶ್ರೀವತ್ಸ ಒಂದು ಕಿಸ್ ಅಂತ ಹೇಳಿ ನನಗೆ ಹೆದರಿಸಿ, ಬೆದರಿಸಿ 35 ಬಾರಿ ಕಿಸ್ ಸೀನ್ ಮಾಡಿಸಿದರು ಅಂತ ಆರೋಪಿಸಿದ್ದರು.

ನಟಿ ಸಂಜನಾ ಗಲ್ರಾನಿ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಈಗ ಸಾಕ್ಷಿ ಸಮೇತ ಎಲ್ಲವನ್ನು ಬಿಚ್ಚಿಟ್ಟಿದ್ದಾರೆ ರವಿ ಶ್ರೀವತ್ಸ. ‘ಗಂಡ-ಹೆಂಡತಿ’ ಸಿನಿಮಾ ಬಂದು‌ 12ವರ್ಷವಾಗಿದೆ. ಆವಾಗ ಏನು ಮಾತು ಆಡಿಲ್ಲ. ಆ ಸಮಯದಲ್ಲಿ ಬಟ್ಟೆ ಬಿಚ್ಚಲು ನನಗೆ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆಂದು ಸಿನಿಮಾ ತಂಡ ಹಾಟ್ ಹೇಳಿಕೆಯನ್ನು ನೀಡಿದೆ. ಆಕೆಗೆ ಕನ್ನಡ ಕಲಿಸಿ ಕೊಟ್ಟಿದೆ ನಮ್ಮ ಸಿನಿಮಾ ತಂಡ. ಬ್ಯಾಂಕಾಕ್ ನಲ್ಲಿ ನಡೆದ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಸಿನಿಮಾ ತಂಡದವರು ನನ್ನ ಜೊತೆ ಚೆನ್ನಾಗಿ ನಡೆದುಕೊಂಡರು ಅಂತ ಹೇಳಿರುವ ಸಂಜನಾ‌ ಗಲ್ರಾನಿ ಈಗ ಈ ರೀತಿಯ ಆರೋಪ ಮಾಡುತ್ತಿದ್ದಾರೆ.

ಕಿಸ್ ಗೆ ಸಂಬಂಧಪಟ್ಟಂತೆ ನಾನೇ ಆಕೆಗೆ‌ ಹೆಚ್ಚು ಕಿಸ್ ಸೀನ್ ಗಳ ಟೇಕ್ ಗಳನ್ನು ತೆಗೆದುಕೊಳ್ಳಬೇಡ ನಿನಗೆ ತೊಂದರೆಯಾಗುತ್ತದೆ ಎಂದು‌ ಹೇಳಿದರು ಅವರು ಕೇಳಲಿಲ್ಲ. ‘ಗಂಡ ಹೆಂಡತಿ’ ಸಿನಿಮಾ ಸಂಜನಾರವರಿಗೆ ಮೊದಲ ಸಿನಿಮಾವಲ್ಲ.ಅದಕ್ಕೂ ಮೊದಲು ತಮಿಳು ಹಾಗೂ ಕನ್ನಡದ ಸಿನಿಮಾಗಳಲ್ಲಿ ಸಹ ನಟಿಯಾಗಿ ಕೂಡ ಅಭಿನಯ ಮಾಡಿದ್ದರು. ಗಂಡ ಹೆಂಡತಿ ಸಿನಿಮಾ ಅವರಿಗೆ 5 ನೇ ಸಿನಿಮಾ ಎಂದು ರವಿ ಶ್ರಿವತ್ಸ ಹೇಳಿದ್ದಾರೆ. ಅದಲ್ಲದೇ ಸಂಜನಾ ಅವರಿಗೆ ಕೋಟಿ ಕೋಟಿ ಆಸ್ತಿ ಎಲ್ಲಿಂದ ಬಂತು. ಅವರ ಆಸ್ತಿ ಬಗ್ಗೆ ಐಟಿ ದಾಖಲೆ ಸಲ್ಲಿಸಿದ್ದಾರ? ಎಂದು ಪ್ರಶ್ನೆ ಮಾಡಿದರು ರವಿಶ್ರಿವತ್ಸ. ನಟಿ ಸಂಜನಾ‌ ಗಲ್ರಾನಿ ಆರೋಪಕ್ಕೆ ರವಿಶ್ರೀವತ್ಸವರು ಕೆಲವು ಸಾಕ್ಷಿಗಳನ್ನು ಮಾಧ್ಯಮದ ಮುಂದಿಟ್ಟರು. ನಟಿ ಸಂಜನಾ ಗಲ್ರಾನಿ ಅಮೇರಿಕಾಕ್ಕೆ ಹೋಗಿರುವುದರಿಂದ ಈ ವಿಷಯವಾಗಿ‌ ಇಂಡಿಯಾಕ್ಕೆ ಬಂದು ಮಾತನಾಡುತ್ತೇನೆ ಎಂದು‌ ಹೇಳಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com