‘ಡಿಂಗ’ ಸಿನಿಮಾದ ಪೋಸ್ಟರ್ ಬಿಡುಗಡೆ

Published on

376 Views

ಮಾಯಕಾರ ಪ್ರೊಡಕ್ಷನ್ಸ್ ವತಿಯಿಂದ ಸ್ಯಾಂಡಲ್‌ವುಡ್‌ನಲ್ಲೇ ಪ್ರಪ್ರಥಮಭಾರಿಗೆ ಫೋನೋಗ್ರಫಿ ಟೆಕ್ನಾಲಜಿ ಬಳಸಿ ಐ-ಫೋನ್ ನಿಂದ ಮಾಡಿರುವ ಕಮರ್ಷಿಯಲ್ ಸಿನಿಮಾ ‘ಡಿಂಗ’.
ನಿರ್ದೇಶಕರ ಸಂಘದ ಅಧ್ಯಕ್ಷರು ಹಾಗೂ ಖ್ಯಾತ ಸಾಹಿತಿ ನಾಗೇಂದ್ರ ಪ್ರಸಾದ್ ಚಿತ್ರದ ಮೊದಲ ಪೋಸ್ಟರ್ ನ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎಂದರು.
ನಿರ್ಮಾಪಕ ಡಾ. ಮೂಗೂರು ಮಧುದೀಕ್ಷಿತ್ ಮಾತನಾಡಿ ಚಿತ್ರ ಯಾವುದೇ ಕಮರ್ಷಿಯಲ್ ಚಿತ್ರಕ್ಕೆ ಕೊರತೆ ಇಲ್ಲದ ಹಾಗೆ ಮೂಡಿ ಬಂದಿದೆ ಎಂದರು.

ಈ ‘ಡಿಂಗ’ ಚಿತ್ರದಲ್ಲಿ
ಹೀರೋ ಒಬ್ಬ ಕ್ಯಾನ್ಸರ್‌ ಪೇಷೆಂಟ್ ಆಗಿದ್ದು, ತಾನು ಸಾಯುವುದಕ್ಕಿಂತ ಮುಂಚೆ ತಾನು ಸಾಕಿರುವ ನಾಯಿಯನ್ನು ತುಂಬಾ ಪ್ರೀತಿ ಮಾಡುವಂತಹ ವ್ಯಕ್ತಿಗೆ ಕೊಡಬೇಕೆಂಬ ಆಸೆ ಇರಿಸಿಕೊಂಡಿರುತ್ತಾನೆ. ಆ ನಾಯಿಗೆ ಪ್ರೀತಿಯಿಂದ ಡಿಂಗ‌ ಎಂದು‌ ಹೆಸರಿಟ್ಟಿರುತ್ತಾನೆ. ಆದರೆ ತನ್ನಂತಹೇ ಡಿಂಗನನ್ನು ಪ್ರೀತಿ ಮಾಡುವ ವ್ಯಕ್ತಿಯನ್ನು ಹುಡುಕುವುದಕ್ಕೆ ಏನೆಲ್ಲಾ ಕಷ್ಟ ಪಡುತ್ತಾನೆ ಎಂಬುದೇ ಕಥೆಯ ಸಾರಾಂಶ.

ಚಿತ್ರದ ತಾರಾಗಣದಲ್ಲಿ ಆರವ್ ಗೌಡ, ಅನುಷಾ ರೋಡ್ರಿಗಸ್, ಅಭಿಷೇಕ್ ಜೈನ್, ವಿಜಯ್ ಈಶ್ವರ್, ರಾಘು ರಮಣಕೊಪ್ಪ, ನಾಗೇಂದ್ರ ಶಾ ಮೊದಲಾದವರು ಇದ್ದಾರೆ. ಚಿತ್ರವನ್ನು
ಅಭಿಷೇಕ್ ಜೈನ್ ನಿರ್ದೇಶಿಸಿದ್ದು,
ಸುದೋರಾಯ್ ಸಂಗೀತದಲ್ಲಿ ಅರ್ಜುನ್ ಜನ್ಯ , ನವೀನ್ ಸಜ್ಜು, ಸಂಚಿತ್ ಹೆಗ್ಡೆ , ಅನುರಾಧ ಭಟ್ ಮತ್ತು ಸುದೋರಾಯ್ ಕೂಡ ಹಾಡಿದ್ದಾರೆ. ಹಾಡುಗಳನ್ನು ನಾಗೇಂದ್ರ ಪ್ರಸಾದ್, ಕಾಂತ ಕನ್ನಲೆ ಮತ್ತು ವಿಜಯ್ ಈಶ್ವರ್ ರಚಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com