ಲಹರಿ ಮ್ಯೂಜಿಕ್‌ಗೆ ವಜ್ರ ಕಿರೀಟ…….!
ಹೌದು, ಲಹರಿ ಮ್ಯೂಜಿಕ್ ಯುಟ್ಯೂಬ್ ಚಾನೆಲ್‌ಗೆ ಈಗ ೧.೧೮ ಕೋಟಿ ಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಯುಟ್ಯೂಬ್‌ಸಂಸ್ಥೆಯಿಂದ ಲಹರಿ ಮ್ಯೂಜಿಕ್‌ಗೆ ಪ್ರತಿಷ್ಟಿತ ʼಡೈಮಂಡ್ ಅವಾರ್ಡ್ ʼ ಪ್ರಶಸ್ತಿ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.
ʼ ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು.
ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ಸಂಸ್ಥೆಯಿಂದ ಎರಡು ಅವಾರ್ಡ್‌ಸಿಕ್ಕಿವೆ. ಯುಟ್ಯೂಬ್‌ಚಾನೆಲ್‌ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್‌ಸಂಸ್ಥೆಯ ಕಡೆಯಿಂದ ಸಿಲ್ವರ್ ಹಾಗೂ ಗೋಲ್ಡನ್ ಅವಾರ್ಡ್ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, ೫೦ ಲಕ್ಷ ಹಾಗೂ ೧ ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್‌ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ. ಈಗ ಲಹರಿ ಮ್ಯೂಜಿಕ್ ಯುಟ್ಯೂಬ್ ಸಾಧನೆಯಲ್ಲಿʼ ಡೈಮಂಡ್ ಅವಾರ್ಡ್ʼ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್ ಅಗ್ರಗಣ್ಯ ಸ್ಥಾನಕ್ಕೇರಿದೆ.