ಜನರ ಮನಸ್ಸಿನಲ್ಲಿ ಉಳಿದ ‘ದಿಯಾ’…
ರಂಗಭೂಮಿಯಿಂದಲೇ ನಟನಾ ಕಲೆಯನ್ನು ಪ್ರಾರಂಭಿಸಿದ ಖುಷಿಯವರಿಗೆ ಸಿನಿಮಾದಲ್ಲಿ ಮೊದಲ ಅವಕಾಶ ಸಿಕ್ಕಿದ್ದು ‘ಸೋಡಾಬುಡ್ಡಿ’ ಸಿನಿಮಾ. ಆ ಸಿನಿಮಾದಲ್ಲಿ ಇಬ್ಬರು ನಾಯಕಿಯರಲ್ಲಿ ಇವರೊಬ್ಬರು. ‘ಸೋಡಾಬುಡ್ಡಿ’ ಸಿನಿಮಾ ಇವರಿಗೆ ಅಷ್ಟೇನೂ ಹೆಸರು ತಂದು ಕೊಟ್ಟಿಲ್ಲವಾದರೂ, ಇವರ ನಟನೆ ಮಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಯಾವುದೇ ಪಾತ್ರ ಕೊಟ್ಟರು ಅದನ್ನು ನಿಭಾಯಿಸಬಲ್ಲ ನಟಿ ಖುಷಿ. ಪಾತ್ರಕ್ಕೆ ಜೀವ ತುಂಬುವ ಜಾಣ್ಮೆ ಇವರಲ್ಲಿದೆ. ಇತ್ತೀಚಿಗೆ ಎಲ್ಲರೂ ನೋಡಿ ಮೆಚ್ಚುಗೆ ಪಡಿಸಿದ ‘ದಿಯಾ’ ಮೂವೀ ಮೂಲಕ ತನ್ನ ಸೆಕೆಂಡ್ ಇನ್ನಿಂಗ್ಸ್ ನಾ ಶುರು ಮಾಡಿದ ಖುಷಿಯವರು ‘ದಿಯಾ’ ಚಿತ್ರದ ಗೆಲುವಿನಲ್ಲೇ ಇದ್ದಾರೆ. ಈಗ 3 ಸಿನಿಮಾ ಕೈಯಲ್ಲಿದೆ ಎನ್ನುವ ಖುಷಿಯವರ ‘ದಿಯಾ’ ಸಿನಿಮಾದ ನಂತರ ಖುಷಿಯವರನ್ನು ಇನ್ನೊಂದು ಸಿನಿಮಾದಲ್ಲಿ ತೆರೆಯಲ್ಲಿ ಹೊಸ ಪಾತ್ರದಲ್ಲಿ ಕಾಣಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ‘ದಿಯಾ’ ಸಿನಿಮಾದ ನಂತರ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ಖುಷಿಯವರನ್ನು ಹೆಚ್ಚಾಗಿ ಎಲ್ಲರೂ ದಿಯಾ ಎಂದೆ ಗುರುತಿಸುತ್ತಾರೆ ಅಂತಹ ಒಂದು ಕಥೆ, ಪಾತ್ರವನ್ನು ಯಾರು ಮರೆಯುವಂತಿಲ್ಲ. ದಿಯಾ ಇದೊಂದು ವಿಭಿನ್ನ ಪ್ರೇಮ ಕಥೆ.. ನಿರ್ದೇಶಕ ಅಶೋಕ್ ರವರ ನಿರ್ದೇಶನ ಹಾಗೂ ಕೃಷ್ಣ ಚೈತನ್ಯರವರ ನಿರ್ಮಾಣದಲ್ಲಿ ಮೂಡಿ ಬಂದಂತಹ ಚಿತ್ರ ‘ದಿಯಾ’…
‘ದಿಯಾ’ ಸಿನಿಮಾದ ಅನುಭವ ಹೇಗಿತ್ತು?
‘ಸೋಡಾಬುಡ್ಡಿ’ ಸಿನಿಮಾ ಮಾಡುವಾಗಲೇ ‘ದಿಯಾ’ ಶೂಟಿಂಗ್ ನಡೀತಾ ಇತ್ತು. ‘ದಿಯಾ’ ಟೈಟಲ್ ಫಿಕ್ಸ್ ಆಗಿರಲಿಲ್ಲ. ದಿಯಾ ಸಿನಿಮಾನ ಮುಗಿಸಿಕೊಟ್ಟು ನಾನು ಮದುವೆಯಾಗಿದ್ದು, ‘ದಿಯಾ’ ಇದು 4 ವರ್ಷದ ಜರ್ನಿ ಇದನ್ನು ನಾವು ಮೊದಲೇ ರಿಯಾಕ್ಸಲ್ ಮಾಡಿಕೊಂಡು ಮಾಡಿದ ಸಿನಿಮಾ. ಬಟ್ ಇದು ನಮಗೆ ಇಷ್ಟು ಚೆನ್ನಾಗಿ ವರ್ಕ್ ಆಗುತ್ತೆ ಅಂತ ಗೊತ್ತಿರಲಿಲ್ಲ. ತಕ್ಕಮಟ್ಟಿಗೆ ಹಿಟ್ ಆಗ್ಬಹುದು ಅನ್ಕೊಂಡು ಇದ್ವಿ.’ದಿಯಾ’ ಸಿನಿಮಾಕ್ಕೆ ತುಂಬಾನೇ ಹಾರ್ಡ್ ವರ್ಕ್ ಮಾಡಿದ್ವಿ. ರಿಯಾಕ್ಸಲ್, ಡೈಲಾಗ್ ಪಾರ್ಟ್, ಆ್ಯಕ್ಟಿಂಗ್ , ಮೆಕಿಂಗ್ ಇದರ ಬಗ್ಗೆ ಗಮನ ಕೊಡುತ್ತ ಇದ್ವಿ. ಹೀರೋಯಿನ್ ಅಂದ್ರೆ ಬಿಲ್ಡಪ್ ಇರುತ್ತೆ, ಆ್ಯಕ್ಟಿಂಗ್ ಲ್ಲೂ ಬೇರೆ ತರ ಇರುತ್ತೆ. ಅದ್ರೆ ‘ದಿಯಾ’ದಲ್ಲಿ ಹೀರೋಯಿನ್ ಆಗಿ ಅಲ್ಲ, ಫಿಮೇಲ್ ಲೀಡಾಗಿ ಆ್ಯಕ್ಟ್ ಮಾಡಿ ಅಂತ ಡೈರೆಕ್ಟರ್ ಅಶೋಕ್ ಸರ್ ಹೇಳಿಕೊಟ್ಟಿದ್ರು. ಅದೇ ತರ ಮಾಡಿದ್ವಿ. ಅವಾಗ ಕಷ್ಟಪಟ್ಟಿದ್ದಕ್ಕೆ ಈವಾಗ ಸೆಕ್ಸಸ್ ಸಿಕ್ಕಿದೆ.
‘ಸೋಡಾಬುಡ್ಡಿ’ ಆದ್ಮೇಲೆ ತುಂಬಾ ಗ್ಯಾಪ್ ತಕೊಂಡ್ರಿ ಅನ್ಸುತ್ತೆ…
‘ದಿಯಾ’ ರಿಲೀಸ್ ಗೆ ಕಾಯ್ತಿದ್ದೆ. ಯಾವುದೇ ಬೇರೆ ಪ್ರಾಜೆಕ್ಟ್ ತಕೊಂಡು ಇರಲಿಲ್ಲ. ‘ದಿಯಾ’ ದು ರೆಸ್ಪಾನ್ಸ್ ನೋಡಿಕೊಂಡು ಆಮೇಲೆ ಮುಂದುವರಿಯೋಣ ಅನ್ಕೊಂಡಿದ್ದೆ. ಅಲ್ಲಿ ಸ್ವಲ್ಪ ಬ್ರೇಕ್ ತಕೊಂಡೆ. ಲಕ್ಕಿಲಿ ‘ದಿಯಾ’ಗೆ ಒಳ್ಳೆಯ ರೆಸ್ಪಾನ್ಸ್ ಸಿಗ್ತು. ನೋಡಿದ ಪ್ರತಿಯೊಬ್ಬರಿಗೂ ಸಿನಿಮಾ ಇಷ್ಟವಾಯಿತು. ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಕಂಟ್ರಿ, ಸ್ಟೇಟ್ ಗಳಲ್ಲೂ ಜನ ಸಿನಿಮಾ ನೋಡಿ ಒಳ್ಳೆ ರಿವ್ಯೂ ಕೊಟ್ರು. ಈವಾಗ ಅದೇ ಖುಷಿಯಲ್ಲಿ ಇದ್ದೇನೆ. ಈಗ ಇನ್ನು ಹೆಚ್ಚಿನ ಜವಾಬ್ದಾರಿಯಿದೆ.
ಸಿನಿಮಾದ ಆಯ್ಕೆ ಮತ್ತು ಈವಾಗ ಕೈಯಲ್ಲಿರುವ ಸಿನಿಮಾಗಳು…
‘ದಿಯಾ’ ಸೆಕ್ಸಸ್ ನಂತರ ತುಂಬಾ ಸ್ಕ್ರಿಪ್ಟ್ ಬಂದಿದೆ. ಈವಾಗ ಒಳ್ಳೆ ಸಿನಿಮಾ ಕೊಟ್ಟಿರುವುದರಿಂದ ಜನರು ಅದೇ ತರ ಒಳ್ಳೆ ಸಿನಿಮಾನೇ ಕೇಳ್ತಾರೆ.ಅದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಈವಾಗ ಸ್ವಲ್ಪ ಚ್ಯುಸಿಯಾಗಿ ಸ್ಕ್ರಿಪ್ಟ್ ಆಯ್ಕೆ ಮಾಡ್ಕೊಳ್ತಾ ಇದ್ದೇನೆ. ನನಗೆ ಆ ಪಾತ್ರ, ಕಥೆ ಇಷ್ಟವಾದ್ರೆ ಅದನ್ನು ನೋಡಿಕೊಂಡು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಹೀರೋಯಿನ್ ಅಂದಾಗ ಸಿನಿಮಾ ಪೂರ್ತಿ ಅವಳ ಕಥೆನೇ ಹೋಗ್ಬೇಕು ಲಕ್ಕಿಲಿ ನನಗೆ ನನ್ನ ಮೊದಲ ಸಿನಿಮಾದಲ್ಲಿ ಆ ಪಾತ್ರ ಸಿಕ್ಕಿದೆ. ಜನರ ಮನಸ್ಸಿನಲ್ಲಿ ರಿಜಿಸ್ಟರ್ ಆಗಿದ್ದೇನೆ. ಅದು ನನಗೆ ಖುಷಿಯಿದೆ. ನೆಸ್ಟ್ ಬೇರೆ ಬೇರೆ ಜಾನರ್ಸ್ ಸಿನಿಮಾ ಮಾಡೋಣ ಅಂತ. ‘ದಿಯಾ’ ದಲ್ಲಿ ಲವ್ ಸ್ಟೋರಿ ಇತ್ತು. ಈಗ ಸಸ್ಪೆನ್ಸ್ ಥ್ರಿಲ್ಲರ್ ‘ನಕ್ಷೆ’ ಸಿನಿಮಾ ಆಯ್ಕೆ ಮಾಡಿಕೊಂಡಿದ್ದೇನೆ. ಅದು ಅನೌನ್ಸ್ ಕೂಡ ಮಾಡಿದ್ದೇವೆ. ಇನ್ನೆರಡು ಸಿನಿಮಾ ಮಾತುಕತೆಯಲ್ಲಿದೆ. ಅದು ಕೂಡ ಬೇರೆ ಬೇರೆ ಜಾನರ್ ನಲ್ಲಿದೆ. ಸ್ಕ್ರಿಪ್ಟ್ ಚೆನ್ನಾಗಿದೆ ವರ್ಕ್ ನಡೀತಾ ಇದೆ. ಅವರು ಬೇರೆ ತರಾನೇ ಅದನ್ನು ರಿವೀಲ್ ಮಾಡ್ಬೇಕು ಅನ್ಕೊಂಡಿದ್ದಾರೆ ನೋಡ್ಬೇಕು. ತುಂಬಾನೇ ಸ್ಕ್ರಿಪ್ಟ್ ಬರ್ತಿದೆ. ನೂರು ಸಿನಿಮಾ ಮಾಡುವುದಕ್ಕಿಂತ, ಮೂರ್ನಾಲ್ಕು ಚೆನ್ನಾಗಿರುವ ಸಿನಿಮಾ ಮಾಡಿದ್ರೆ ಜನರ ಮನಸ್ಸಿನಲ್ಲಿ ಉಳಿಯಬಹುದು ಅಂತ ನನ್ನ ಅಭಿಪ್ರಾಯ.
*ಫ್ಯಾಮಿಲಿ ಮತ್ತು ಹಾಸ್ಬೆಂಡ್ ಸರ್ಫೋಟ್ ಹೇಗಿದೆ?*
ಫ್ಯಾಮಿಲಿ ಸರ್ಫೋಟ್ ಮಾಡ್ತಾಯಿರುವುದರಿಂದ ಸಿನಿಮಾಕ್ಕೆ ಬಂದಿದ್ದು, ‘ದಿಯಾ’ ನನಗೊಂದು ಒಳ್ಳೆ ಬ್ರೇಕ್ ಕೊಡ್ತು. ಈವಾಗ ಕೊರೋನಾದಿಂದ ಸಿನಿಮಾ ಶೂಟಿಂಗ್ ಯಾವುದು ನಡೀತಿಲ್ಲ. ಸಿನಿಮಾದ ಮಾತುಕತೆ ನಡೀತಾ ಇದೆ. ಇತ್ತೀಚಿಗೆ ಪೋಟೋ ಶೂಟ್ ಮಾಡಿಸಿಕೊಂಡೆ. ನನ್ನ ಹಾಸ್ಬೆಂಡ್ ‘ದಿಯಾ’ ನೋಡಿದ್ಮೇಲೆ ತುಂಬಾನೇ ಹ್ಯಾಪಿ. ಮುಂಚೆ ಫಿಲ್ಮ್ ಇಂಡಸ್ಟ್ರಿ ಬೇಡ, ನೀನು ಎಷ್ಟು ಕಷ್ಟ ಪಡ್ತಾಯಿದ್ದೀಯಾ, ಯಾಕೆ ಸುಮ್ಮನೆ ಕಷ್ಟಪಡ್ತೀಯಾ..? ಅಂತ ಕೇಳ್ತಾ ಇದ್ರು. ‘ದಿಯಾ’ ನೋಡಿದ ಮೇಲೆ ತುಂಬಾ ಕಷ್ಟಪಟ್ಟು ಸಿನಿಮಾ ಚೆನ್ನಾಗಿಯೇ ಮಾಡಿದೀಯಾ, ಇಂಡಸ್ಟ್ರಿ ಯಲ್ಲಿ ನಿನ್ನಂತಹ ಆ್ಯಕ್ಟರ್ಸ್ ಬೇಕು. ಇದರಲ್ಲಿ ನಿನ್ನ ಕೇರಿಯರ್ ನ ಮುಂದುವರಿಸಕ್ಕೆ ಇಷ್ಟಪಟ್ರೆ ಮಾಡು ಅಂತ ನನಗೆ ಸರ್ಫೋಟ್ ಮಾಡ್ತಾ ಇದ್ದಾರೆ.
ಮದುವೆಯಾದ್ಮೇಲೆ ಸಿನಿಮಾ ಮಾಡ್ಬೇಕು. ಅವಕಾಶಗಳು ಸಿಗುತ್ತೆ ಅನ್ಕೊಂಡಿದ್ರಾ..?
ನಾನು ಮುಂಚೆಯಿಂದನೂ ಯಾರ ಹತ್ರನೂ ಛಾನ್ಸ್ ಕೇಳ್ಕೊಂಡು ಹೋಗಿಲ್ಲ. ನನಗೆ ಬಂದಿರುವ ಅವಕಾಶಗಳನ್ನು ನಾನು ಉಪಯೋಗಿಸಿಕೊಳ್ತಾ ಇದ್ದೆ ಅಷ್ಟೇ. ‘ದಿಯಾ’ ಸಿನಿಮಾಕ್ಕೆ ಕಾಯಿತಾ ಇದ್ದೆ. ಮದುವೆಯಾದ್ಮೇಲೆ ಅವಕಾಶಗಳು ಇಲ್ಲದಿದ್ದರೂ ನಾನು ತಲೆಕೆಡಿಸಿಕೊಳ್ತಿರಲಿಲ್ಲ. ‘ದಿಯಾ’ ಹಿಟ್ ಆದ್ಮೇಲೆ ಅವಕಾಶಗಳು ಬರ್ತಿವೆ ಅದನ್ನು ಸ್ಕ್ರಿಪ್ಟ್ ನೋಡಿಕೊಂಡು, ಜನರಿಗೆ ಒಳ್ಳೆಯ ಸಿನಿಮಾ ಕೊಡುವ ಉದ್ದೇಶದಿಂದ ಸ್ಕ್ರಿಪ್ಟ್, ಕಥೆ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಾಯಿದ್ದೇನೆ.
ಲಾಕ್ಡೌನ್ ಟೈಮ್ ನಲ್ಲಿ ಸಿನಿಮಾ ಶೂಟಿಂಗ್ ಇರಲಿಲ್ಲ,ಎಲ್ಲೂ ಹೊರಗೂ ಹೋಗುವಾಗಿರಲಿಲ್ಲ ಯಾವ ತರ ಟೈಮ್ ಕಳಿತಾ ಇದ್ರಿ?
‘ದಿಯಾ’ ಹಿಟ್ ಆಗಿರುವುದರಿಂದ ಇಷ್ಟು ಹೊತ್ತಿಗೆ ಬಿಜಿಯಾಗಿರುತ್ತಿದ್ದೆ. ಕೊರೋನಾ ಸಮಸ್ಯೆ ಇದ್ದುದರಿಂದ ಶೂಟಿಂಗ್ ನಡೀತಿರಲಿಲ್ಲ ಎಲ್ಲೂ ಹೋಗುವಾಗು ಇರಲಿಲ್ಲ. ಅದರಿಂದ ಫ್ಯಾಮಿಲಿ, ನನ್ನ ಮಗು ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದೆ. ಈವಾಗ ಶೂಟಿಂಗ್ ನಲ್ಲಿ ಬಿಜಿಯಾಗಿದ್ದೇನೆ.