ಶೂಟಿಂಗ್ ಬಿಟ್ಟು ಅತ್ತಿಗೆಯನ್ನು ನೋಡಲು ಆಸ್ಪತ್ರೆಗೆ ಬಂದ ಧ್ರುವ ಸರ್ಜಾ…

Published on

407 Views

ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತುಂಬು ಗರ್ಭಿಣಿ ಯಾಗಿದ್ದು, ಇಂದು ಬೆಳಗ್ಗೆ ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಭೇಟಿಕೊಟ್ಟಿದ್ದಾರೆ.

ಮೇಘನಾರಾಜ್ ತಂದೆ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳನ್ನು ಆಸ್ಪತ್ರೆ ಗೆ ಕರೆತಂದಿದ್ದಾರೆ. ಅತ್ತಿಗೆ ಆಸ್ಪತ್ರೆಗೆ ತೆರಳಿರುವ ವಿಷಯ ತಿಳಿದ ಧ್ರುವ ಸರ್ಜಾ ಶೂಟಿಂಗ್ ನಲ್ಲಿ ಬಿಜಿ ಇದ್ದರೂ ಅದನ್ನು ಬಿಟ್ಟು ಪತ್ನಿ ಪ್ರೇರಣಾ ಜೊತೆ ಆಸ್ಪತ್ರೆಗೆ ಬಂದಿದ್ದಾರೆ. ಅಕ್ಟೋಬರ್ 17 ಚಿರು ಸರ್ಜಾ ಹುಟ್ಟುಹಬ್ಬದ ದಿನವೇ ಮೇಘನಾರಾಜ್ ಗೆ ಡೆಲಿವರಿ ಡೇಟ್ ಕೊಟ್ಟಿದ್ದರು ಎನ್ನಲಾಗಿದೆ.

ಅದ್ದರಿಂದ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿತ್ತು. ಮೇಘನಾ ಸರ್ಜಾ ಆಸ್ಪತ್ರೆಗೆ ಭೇಟಿ ಕೊಟ್ಟಿರುವ ವಿಷಯ ತಿಳಿದ ಅಭಿಮಾನಿಗಳು ಜೂನಿಯರ್ ಚಿರು ಅದಷ್ಟು ಬೇಗ ಬರಲಿ ಎಂದು ಹಾರೈಸಿದ್ದಾರೆ. ಅದರೆ ತಪಾಸಣೆ ‌ನಡೆಸಿರುವ ವೈದ್ಯರು ಮೇಘನಾರಾಜ್ ರವರನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com