‘ದಾರಿ ಯಾವುದಯ್ಯ ವೈಕುಂಠಕ್ಕೆ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

Published on

433 Views

ಶ್ರೀಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಗಲಿದೆ. ವರ್ಧನ್ ನಾಯಕನಾಗಿ ನಟಿಸಿರುವ ಈ‌ ಸಿನಿಮಾಕ್ಕೆ ಸಿದ್ದು ಪೂರ್ಣಚಂದ್ರ ನಿರ್ದೇಶಕರಾಗಿದ್ದು, ಶರಣ್ಣಪ್ಪ ಎಂ ಕೊಟಗಿ‌ ಬಂಡವಾಳ ಹೂಡಿದ್ದಾರೆ.

ನಾಯಕಿಯರಾಗಿ ‘ತಿಥಿ’ ಚಿತ್ರದ ಖ್ಯಾತಿಯ ಪೂಜಾ ಹಾಗೂ ಶ್ರೀಮಾನ್ ಶ್ರೀಮತಿ ಖ್ಯಾತಿಯ ಅನುಷ ಕಾಣಿಸಿಕೊಂಡಿದ್ದಾರೆ. ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಧ್ರುವ ಸರ್ಜಾ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಸಂಗೀತ, ಸಿದ್ಧಾರ್ಥ್, ಅರುಣ್ ಮೂರ್ತಿ, ಪ್ರಣಯ್, ದಯಾನಂದ್, ಸುಚಿತ್, ಮೈಸೂರು ಬಸವರಾಜ್ ಮುಂತಾದವರ ತಾರಾಗಣವಿದೆ. ಚಿತ್ರದ ಚಿತ್ರೀಕರಣವೂ ಬೆಂಗಳೂರು, ರಾಮನಗರ, ಮುಂತಾದ ಕಡೆಗಳಲ್ಲಿ ‌ನಡೆದಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com