ದೇವ್ರಂತ ಮನುಷ್ಯ ಈ ವಾರ ಬಿಡುಗಡೆ

Published on

574 Views

ಈ ವಾರ ಬಿಡುಗಡೆ ದೇವ್ರಂತ ಮನುಷ್ಯ

ಬಿಗ್ ಬಾಸ್ 4 ವಿಜಯಿ ಪ್ರಥಮ್ ಅವರ ಪ್ರಥಮ ಸಿನಿಮಾ ದೇವ್ರಂತ ಮನುಷ್ಯ ಈ ವಾರ ತೆರೆ ಕಾಣುತ್ತಿದೆ. ಕಿರಣ್ ಶೆಟ್ಟಿ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಚಿತ್ರ. ಎಚ್ ಸಿ ಮಂಜುನಾಥ್, ತಿಮ್ಮರಾಜು ಕೆ ನಿರ್ಮಾಪಕರುಗಳು. ತಪ್ಪು ಮಾಡುವುದು ಸಹಜ ಆದರೆ ಅದು ವಿಪರೀತ ಆದರೆ ಏನಾಗುತ್ತದೆ ಎಂಬ ಅಂಶದ ಮೇಲೆ ಈ ಸಿನಿಮಾ ನಿಂತಿದೆ.

ಈ ಚಿತ್ರದಲ್ಲಿ ಶ್ರುತಿ ಹಾಗೂ ವೈಷ್ಣವಿ ಕಥಾ ನಾಯಕಿಯರು. ತಬಲಾ ನಾಣಿ, ಸುಚಿಂದ್ರ ಪ್ರಸಾದ್, ಮಜಾ ಟಾಕೀಸ್ ಪವನ್ ಅಲ್ಲದೆ ಕಿರಿಕ್ ಕೀರ್ತಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಥಮ್ ಮೊದಲ ಚಿತ್ರ ಎಂಬ ಕಾರಣದಿಂದ ಈ ಚಿತ್ರ ಕುತೂಹಲ ಹುಟ್ಟಿಸಿದೆ.

ಪ್ರದ್ಯೋತನ್ ಸಂಗೀತ ನೀಡಿದ್ದಾರೆ.ಅರುಣ್ ಸುರೇಶ್ ಅವರ ಛಾಯಾಗ್ರಹಣ, ಶಿವಶಂಕರ್ ಸಂಕಲನ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com