ಕನ್ನಡದಲ್ಲಿ “ದೇವಿ ಆದಿ ಪರಾಶಕ್ತಿ ಮತ್ತು ಜೈ ಭಜರಂಗಿ” ಸೆಪ್ಟಂಬರ್ ೨೧ರಿಂದ ಮಧ್ಯಾಹ್ನ ೧೨ ಮತ್ತು ೧೨.೩೦ಕ್ಕೆ
ಉದಯ ಟಿವಿಯಲ್ಲಿ ಶುರುವಾಗ್ತಿದೆ ಮನರಂಜನೆಯ ಮಹಾ ಧಮಾಕ. ಬೆಚ್ಚಗಿನ ಇಳಿಜಾರಿನಿಂದ ತಂಪಾದ ರಾತ್ರಿಯವರೆಗೆ ನಿಮ್ಮ ಸಂಜೆಗಳ ಸಂಗಾತಿಯಾಗಿರೊ ಉದಯ ಟಿವಿ ಇನ್ನು ಮುಂದೆ ಮಧ್ಯಾಹ್ನಗಳಿಗೆ ಮನರಂಜನೆಯ ಸಿಂಚನ ನೀಡೋಕೆ ಸಿದ್ಧವಾಗಿದೆ. ಮಧ್ಯಾಹ್ನದ ಮಹಾಕಥೆಗಳ ಶೀರ್ಷಿಕೆಯೊಂದಿಗೆ ಧಾರಾವಾಹಿಗಳು ವೀಕ್ಷಕರ ಮುಂದೆ ಹೊತ್ತು ತರುತ್ತಿದೆ ಉದಯ ಟಿವಿ. ಭಕ್ತಿ-ಶಕ್ತಿ, ಪ್ರೀತಿ-ನೀತಿ, ಭಯ-ಧೈರ್ಯಗಳ ಸಮಮಿಶ್ರಣದ ಹೂರಣವೇ ಈ ಮಧ್ಯಾಹ್ನದ ಮಹಾಕಥೆಗಳಲ್ಲಿ ತುಂಬಿದೆ ಅಂದ್ರೆ ತಪ್ಪಾಗಲಾರದು.
ಪ್ರಕೃತಿಯ ಮೊದಲ ಶಕ್ತಿಯ ಜೊತೆ ಭಕ್ತಿಯ ಪರಾಕಾಷ್ಠೆಯ ಎರಡು ಹೊಸ ಕಥೆಗಳು ಉದಯ ವಾಹಿನಿಯ ಧಾರಾವಾಹಿಗಳ ಗುಚ್ಛ ಸೇರುತ್ತಿವೆ. ಮಧ್ಯಾಹ್ನ ೧೨ಕ್ಕೆ ಶಕ್ತಿರೂಪಿಣಿ ಜಗ್ನಮಾತೆಯ ಪುರಾಣ “ದೇವಿ ಆದಿಪರಾಶಕ್ತಿ”, ೧೨.೩೦ಕ್ಕೆ ಶ್ರೀಕೃಷ್ಣನ ಸಾರಥ್ಯದಲ್ಲಿ ಹೇಳಿದ ರಾಮನ ಭಕ್ತ ಹನುಮಂತನ ಕಥಾಸಾರ “ಜೈ ಭಜರಂಗಿ” ಧಾರಾವಾಹಿಗಳು ಕನ್ನಡದಲ್ಲಿ ಮಧ್ಯಾಹ್ನಕ್ಕೆ ಮುದ ನೀಡಲಿವೆ.
. ಈ ಧಾರಾವಾಹಿಗಳು ಇದೇ ಸೆಪ್ಟೆಂಬರ್ ೨೧ರಿಂದ ಸೋಮವಾರದಿಂದ ಶನಿವಾರ ಮಧ್ಯಾಹ್ನ ೧೨ ಮತ್ತು ೧೨.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತವೆ.