ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

Published on

323 Views

ಸೆಲೆಬ್ರೆಟಿಗಳ ಡ್ರಗ್ ನಂಟು ಅಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಡ್ರಗ್ ಜಾಲದಲ್ಲಿ ಒಂದೊಂದೇ ಚಿತ್ರನಟ- ನಟಿಯರ ಹೆಸರು ಹೊರಬರುತ್ತಿದೆ. ಇದೀಗ ಬಾಲಿವುಡ್ ನ ಪ್ರಸಿದ್ದ ನಟಿ ದೀಪಿಕಾ ಪಡುಕೋಣೆ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.


ಇದೀಗ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಗೆ ಎನ್ ಸಿಬಿ ನೋಟಿಸ್ ನೀಡಲಾಗಿದೆ. ದೀಪಿಕಾಗೆ ಮಾದಕ ವಸ್ತುಗಳನ್ನು ಮ್ಯಾನೇಜರ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
ಇದೀಗ ದೀಪಿಕಾ ಪಡುಕೋಣೆ ಮತ್ತು ಕರೀಶ್ಮಾ ಪ್ರಕಾಶ್ ನಡುವಿನ ವ್ಯಾಟ್ಸಪ್ ಸಂಭಾಷಣೆಯೊಂದು ಈಗ ಬಯಲಾಗಿದೆ. ಜೀ ನ್ಯೂಸ್ ಈ ಬಗ್ಗೆ ವರದಿ ಮಾಡಿದ್ದು, ಈ ಸಂಭಾಷಣೆ 2017ರ ಅಕ್ಟೋಬರ್ 28ಕ್ಕೆ ನಡೆದಿದೆ ಎನ್ನಲಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com